ವಿಚ್ಛೇದನದ 4 ವರ್ಷಗಳ ನಂತರ ಸಮಂತಾ ಜೀವನದಲ್ಲಿ ಮತ್ತೇ ಅರಳಿತು ಪ್ರೀತಿ! ಪ್ರಸಿದ್ಧ ನಿರ್ದೇಶಕರೊಂದಿಗೆ ಡೇಟಿಂಗ್! ಪೋಟೋ ವೈರಲ್..‌

Actress Samantha: ಕಳೆದ ಕೆಲವು ದಿನಗಳಿಂದ ನಾಯಕಿ ಸಮಂತಾ ಎರಡನೇ ಮದುವೆ ಬಗ್ಗೆ ಭಾರೀ ಪ್ರಚಾರ ನಡೆಯುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ನಟಿ ನಿರ್ದೇಶಕರೊಂದಿಗೆ ಇರುವ ಕೆಲವು ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ..   

Written by - Savita M B | Last Updated : Feb 2, 2025, 07:26 PM IST
  • ನಾಗ ಚೈತನ್ಯ ಮತ್ತು ಸಮಂತಾ 2017 ರಲ್ಲಿ ವಿವಾಹವಾದರು.
  • ಈ ನಡುವೆ ಸಮಂತಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ
ವಿಚ್ಛೇದನದ 4 ವರ್ಷಗಳ ನಂತರ ಸಮಂತಾ ಜೀವನದಲ್ಲಿ ಮತ್ತೇ ಅರಳಿತು ಪ್ರೀತಿ! ಪ್ರಸಿದ್ಧ ನಿರ್ದೇಶಕರೊಂದಿಗೆ ಡೇಟಿಂಗ್! ಪೋಟೋ ವೈರಲ್..‌  title=

Samantha Ruth Prabhu Dating Raj Nidimoru: ನಾಗ ಚೈತನ್ಯ ಮತ್ತು ಸಮಂತಾ 2017 ರಲ್ಲಿ ವಿವಾಹವಾದರು. ಆದರೆ ದಂಪತಿಗಳು ಕೆಲವು ವರ್ಷಗಳ ಭಿನ್ನಾಭಿಪ್ರಾಯದ ನಂತರ ಅಕ್ಟೋಬರ್ 2021 ರಲ್ಲಿ ಬೇರ್ಪಡುವುದಾಗಿ ಘೋಷಿಸಿದರು. ವಿಚ್ಛೇದನದ ನಂತರ ಸಮಂತಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

 ಈ ನಡುವೆ ಸಮಂತಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಆದರೆ ಸಮಂತಾ ಮತ್ತೆ ಮದುವೆಯಾಗುವುದಿಲ್ಲ ಎಂದು ಎಲ್ಲೂ ಹೇಳುತ್ತಿಲ್ಲ. ಸಮಂತಾ ಎರಡನೇ ಮದುವೆಯ ಸುದ್ದಿಯೊಂದು ಇದೀಗ ಸಂಚಲನ ಮೂಡಿಸಿದೆ. ಕೆಲ ದಿನಗಳಿಂದ ಬಾಲಿವುಡ್ ನಲ್ಲಿ ನಿರ್ದೇಶಕರೊಬ್ಬರ ಜೊತೆ ಸಮಂತಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ ರಾಜು ನಿಡುಮೋರು. ರಾಜು ನಿಡುಮೋರು ನಿರ್ದೇಶನದ ಸಮಂತಾ ಅಭಿನಯದ 'ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್‌ನಲ್ಲಿ ಸ್ಯಾಮ್‌ ನಟಿಸಿದ್ದರು.. ಈ ವೇಳೆ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿದ್ದು, ಇವರಿಬ್ಬರು ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

 
 
 
 

 
 
 
 
 
 
 
 
 
 
 

A post shared by Samantha (@samantharuthprabhuoffl)

ಇದನ್ನೂ ಓದಿ: ಶಾಸಕನ ಮಗನ ಜೊತೆ ಪ್ರೀತಿ.. ಮದುವೆಗಾಗಿ ಮತಾಂತರ..16 ವರ್ಷದ ಬಳಿಕ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ!

ರಾಜು ನಿಡುಮೋರು ಅವರು ಇತ್ತೀಚೆಗೆ ಸಮಂತಾ ನಟಿಸಿದ 'ಸಿಟಾಡೆಲ್' ವೆಬ್ ಸರಣಿಯನ್ನು ಸಹ ನಿರ್ದೇಶಿಸಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ವೇಳೆಯೇ ಇವರಿಬ್ಬರ ನಡುವೆ ಪ್ರೇಮದ ಮೊಳಕೆಯೊಡೆದಿತ್ತು ಎಂಬ ವರದಿಗಳಿವೆ. ಆದರೆ ನಿಡುಮೋರು ರಾಜ ಈಗಾಗಲೇ ಮದುವೆಯಾದ್ದು, ಸದ್ಯದಲ್ಲೇ ಪತ್ನಿಗೆ ವಿಚ್ಛೇದನ ನೀಡಿ ಸಮಂತಾ ಅವರನ್ನು ಮದುವೆಯಾಗಲು ಸಿದ್ಧರಾಗಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಇವರಿಬ್ಬರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.. ಇದೇ ಸಮಯಕ್ಕೆ ಸರಿಯಾಗಿ ಸಮಂತಾ ಮತ್ತೊಮ್ಮೆ ನಿರ್ದೇಶಕರೊಂದಿಗೆ ದರ್ಶನ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇತ್ತೀಚೆಗೆ, ತಯಾರಕರು 'ಫ್ಯಾಮಿಲಿಮ್ಯಾನ್ ಸೀಸನ್ 3' ವೆಬ್ ಸರಣಿಯ ಬಗ್ಗೆ ಪ್ರಮುಖ ಅಪ್‌ಡೇಟ್‌ವೊಂದನ್ನು ಘೋಷಿಸಿದರು. 

ಇದನ್ನೂ ಓದಿ: ಶಾಸಕನ ಮಗನ ಜೊತೆ ಪ್ರೀತಿ.. ಮದುವೆಗಾಗಿ ಮತಾಂತರ..16 ವರ್ಷದ ಬಳಿಕ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ!

'ಫ್ಯಾಮಿಲಿಮ್ಯಾನ್ ಸೀಸನ್ 3' ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಜು ನಿಡುಮೋರೆ ಸ್ಯಾಮ್‌ ಒಟ್ಟಿಗೆ ಕಾಣಿಸಿಕೊಂಡಿದ್ದರು.. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿದ್ದವು.. ಇದಲ್ಲದೇ ಸಮಂತಾ ಇತ್ತೀಚೆಗೆ ಮತ್ತೆ ನಿರ್ದೇಶಕರೊಂದಿಗೆ ಕಾಣಿಸಿಕೊಂಡಿದ್ದಾರೆ.. ಹೌದು ಚೆನ್ನೈಚಾಂಪಿಯನ್ಸ್ ಅವರನ್ನು ಬೆಂಬಲಿಸುತ್ತಿರುವ ಸ್ಯಾಮ್, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ರಾಜ್ ಅವರ ಕೈ ಹಿಡಿದಿದಿದ್ದಾರೆ.. ಹೀಗಾಗಿ ಸಮಂತಾ ನಿರ್ದೇಶಕರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ಪ್ರಚಾರ ಪ್ರಾರಂಭವಾಯಿತು. ಸದ್ಯ ಸಮಂತಾ-ರಾಜು ನಿಡುಮೋರು ಒಟ್ಟಿಗೆ ಇರುವ ಚಿತ್ರಗಳು ವೈರಲ್ ಆಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News