ಮುಂಬೈನಲ್ಲಿ ಬಿಜೆಪಿ ನಾಯಕಿ ಸುಲ್ತಾನಾ ಖಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ : ಇಲ್ಲಿದೆ ವಿಡಿಯೋ

BJP Leader Attacked: ಮೀರಾ ರೋಡ್ ಪ್ರದೇಶದಲ್ಲಿ ರಾತ್ರಿ 11.15 ರ ಸುಮಾರಿಗೆ ತನ್ನ ಪತ್ನಿಯೊಂದಿಗೆ ವೈದ್ಯರನ್ನು ಭೇಟಿಯಾಗಲು ತೆರಳುತ್ತಿದ್ದುದ್ದಾಗಿ ಸುಲ್ತಾನಾ ಖಾನ್ ಪತಿ ತಿಳಿಸಿದ್ದಾರೆ. ಆ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಎದುರಿಗೆ ತಂದು ಕಾರನ್ನು ಅಡ್ಡಗಟ್ಟಿದ್ದಾರೆ. 

Written by - Ranjitha R K | Last Updated : Jul 18, 2022, 10:13 AM IST
  • ಬಿಜೆಪಿ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ
  • ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಹಲ್ಲೆ
  • ಗಾಯಗೊಂಡಿರುವ ಸುಲ್ತಾನಾ ಆಸ್ಪತ್ರೆಗೆ ದಾಖಲು
ಮುಂಬೈನಲ್ಲಿ ಬಿಜೆಪಿ ನಾಯಕಿ ಸುಲ್ತಾನಾ ಖಾನ್ ಮೇಲೆ  ಮಾರಕಾಸ್ತ್ರಗಳಿಂದ ಹಲ್ಲೆ  :  ಇಲ್ಲಿದೆ  ವಿಡಿಯೋ  title=
BJP Leader Attacked

BJP Leader Attacked: ಮುಂಬೈನಲ್ಲಿ ಭಾನುವಾರ ರಾತ್ರಿ ಬಿಜೆಪಿ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ವೇಳೆ, ಸುಲ್ತಾನಾ   ಪತಿಯೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ ಸುಲ್ತಾನಾ ಅವರ ಪತಿಯ ಜೊತೆ ವಾಗ್ವಾದ ಕೂಡಾ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಲ್ತಾನಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೀರಾ ರೋಡ್ ಪ್ರದೇಶದಲ್ಲಿ ರಾತ್ರಿ 11.15 ರ ಸುಮಾರಿಗೆ ತನ್ನ ಪತ್ನಿಯೊಂದಿಗೆ ವೈದ್ಯರನ್ನು ಭೇಟಿಯಾಗಲು ತೆರಳುತ್ತಿದ್ದುದ್ದಾಗಿ ಸುಲ್ತಾನಾ ಖಾನ್ ಪತಿ ತಿಳಿಸಿದ್ದಾರೆ. ಆ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಎದುರಿಗೆ ತಂದು ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಪತ್ನಿ ಸುಲ್ತಾನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ.  

ಇದನ್ನೂ ಓದಿ :  GST rates revised: ಕೇಂದ್ರದ ನೂತನ GST ನೀತಿ: ಈ ಎಲ್ಲಾ ವಸ್ತುಗಳು ಇನ್ಮುಂದೆ ದುಬಾರಿ!

ದಾಳಿ ಬಳಿಕ ದುಷ್ಕರ್ಮಿಗಳು ಪರಾರಿ : 
ಸುಲ್ತಾನ ಖಾನ್ ಮೇಲೆ ದಾಳಿ ನಡೆಯುತ್ತಿದ್ದಂತೆ, ದುಷ್ಕರ್ಮಿಗಳು ಮತ್ತು ಸುಲ್ತಾನ ಅವರ ಪತಿ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸುತ್ತಮುತ್ತಲಿನವರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಸುಲ್ತಾನಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ದಾಳಿಯ ನಂತರ ಸುಲ್ತಾನಾ ಖಾನ್  ಭಯಭೀತರಾಗಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿಯೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

 

ದಾಳಿಕೋರರನ್ನು ಗುರುತು ಪತ್ತೆಯಾಗಿಲ್ಲ  :
ಸದ್ಯಕ್ಕೆ ದಾಳಿಕೋರರ ಗುರುತು ಪತ್ತೆಯಾಗಿಲ್ಲ. ಸುಲ್ತಾನಾ ಕೈಗೆ ಎರಡು ಗಾಯಗಳಾಗಿದ್ದು, 3 ಸ್ಟಿಚ್ ಹಾಕಲಾಗಿದೆ. ಹಲ್ಲೆ ನಡೆಸಿದವರು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ :  ಕೋವಿಡ್-19 ನಾಲ್ಕನೇ ಅಲೆಯ ಭೀತಿ- ಖಾಸಗಿ ಶಾಲೆಯೊಂದರ 38 ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News