ನಿಮ್ಮ ಕಂಪ್ಯೂಟರ್ ಮೇಲೆ ನಿಗಾ ವಹಿಸಲು 10 ಏಜೆನ್ಸಿಗಳಿಗೆ ಅಧಿಕಾರ ನೀಡಿದ MHA

ಈ ನಿಯಮಗಳನ್ನು ಉಲ್ಲಂಘಿಸಿದರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ.

Last Updated : Dec 21, 2018, 12:50 PM IST
ನಿಮ್ಮ ಕಂಪ್ಯೂಟರ್ ಮೇಲೆ ನಿಗಾ ವಹಿಸಲು 10 ಏಜೆನ್ಸಿಗಳಿಗೆ ಅಧಿಕಾರ ನೀಡಿದ MHA title=

ನವದೆಹಲಿ: ಗೃಹ ವ್ಯವಹಾರಗಳ ಸಚಿವಾಲಯ (MHA) ಯಾವುದೇ ಕಂಪ್ಯೂಟರ್ ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಹತ್ತು ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳಿಗೆ ಆದೇಶ ನೀಡಿದೆ.

ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಗುರುವಾರ ಆದೇಶ ಹೊರಡಿಸಿದ್ದು, ಏಜೆನ್ಸಿಗಳು  
ಯಾವುದೇ ಕಂಪ್ಯೂಟರ್ ಬಳಕೆದಾರರು ಅಥವಾ ಸೇವೆ ಒದಗಿಸುವವರು ಎಲ್ಲಾ ಸೌಲಭ್ಯಗಳನ್ನು ಮತ್ತು ತಾಂತ್ರಿಕ ನೆರವನ್ನು ಈ 10 ಏಜೆನ್ಸಿಗಳಿಗೆ ವಿಸ್ತರಿಸಲು ಬದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ.

ಇವು ಆ 10 ಏಜೆನ್ಸಿಗಳು:

  1. ಗುಪ್ತಚರ ಇಲಾಖೆ
  2. ಮಾದಕದ್ರವ್ಯ ನಿಯಂತ್ರಣ ಮಂಡಳಿ
  3. ಜಾರಿ ನಿರ್ದೇಶನಾಲಯ
  4. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್
  5. ಕಂದಾಯ ಗುಪ್ತಚರ ನಿರ್ದೇಶನಾಲಯ
  6. ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್
  7. ರಾಷ್ಟ್ರೀಯ ತನಿಖಾ ಸಂಸ್ಥೆ
  8. ಸಂಪುಟ ಕಾರ್ಯದರ್ಶಿ
  9. ಸಿಗ್ನಲ್ ಇಂಟೆಲಿಜೆನ್ಸ್ ಡೈರೆಕ್ಟರೇಟ್ (ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನ ಸೇವೆ ಪ್ರದೇಶಗಳಿಗೆ ಮಾತ್ರ)
  10. ಪೊಲೀಸ್ ಕಮೀಶನರ್, ದೆಹಲಿ

ಮಾಹಿತಿ ತಂತ್ರಜ್ಞಾನ ಕಾಯಿದೆ ವಿಭಾಗ 69 (1) ರಡಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಆದೇಶ ಹೊರಡಿಸಿದ್ದಾರೆ. 

ಚಂದಾದಾರರು ಅಥವಾ ಸೇವೆ ಒದಗಿಸುವವರು ಅಥವಾ ಕಂಪ್ಯೂಟರ್ ಸಂಪನ್ಮೂಲಗಳ ಉಸ್ತುವಾರಿ ಹೊಂದಿರುವ ಯಾವುದೇ ವ್ಯಕ್ತಿಗಳು 10 ಪಟ್ಟಿಮಾಡಿದ ಏಜೆನ್ಸಿಗಳಿಗೆ ಎಲ್ಲಾ ಸೌಲಭ್ಯಗಳು ಮತ್ತು ತಾಂತ್ರಿಕ ಸಹಾಯವನ್ನು ಹಂಚಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಸಲಾಗಿದೆ.

ಇದರೊಂದಿಗೆ, ಏಜೆನ್ಸಿಗಳು ಇದೀಗ ಸಾಮಾಜಿಕ ಮಾಧ್ಯಮದ ಮೇಲ್ವಿಚಾರಣೆ ನಡೆಸಬಹುದು.
 

Trending News