ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾಕ್ಕೆ ಸಿದ್ಧತೆ ನಡೆಸಿದ ನೂತನ ಸರ್ಕಾರ

ಸಹಕಾರ ಇಲಾಖೆ ರೈತರ ಪ್ರಸ್ತುತ ಸಾಲ ಮತ್ತು ಸಕಾಲಿಕ ಸಾಲಗಳ ಪೂರ್ಣ ಮಾಹಿತಿ ಕಳುಹಿಸುವಂತೆ ಎಲ್ಲಾ ಸಹಕಾರ ಬ್ಯಾಂಕುಗಳಿಗೆ ತಿಳಿಸಿದೆ.

Last Updated : Dec 14, 2018, 11:29 AM IST
ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾಕ್ಕೆ ಸಿದ್ಧತೆ ನಡೆಸಿದ ನೂತನ ಸರ್ಕಾರ  title=

ಭೋಪಾಲ್: ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ರಾಜ್ಯದ ಜನರು ವಿಶೇಷವಾಗಿ ರೈತರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಪದಗ್ರಹಣಕ್ಕೂ ಮುನ್ನವೇ ರೈತರಿಗೆ ಸಂತಸದ ಸುದ್ದಿ ನೀಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ವಾಸ್ತವವಾಗಿ, ಕಾಂಗ್ರೆಸ್ ತನ್ನ ಚುನಾವಣೆ ಪ್ರನಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳಲ್ಲೇ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನೂತನ ಸರ್ಕಾರ ರೈತರ ಸಾಲ ಮನ್ನಾಕ್ಕೆ ಸಿದ್ಧತೆಗಳನ್ನು ಮಾಡಿದೆ.

ಸಹಕಾರ ಇಲಾಖೆ ರೈತರ ಪ್ರಸ್ತುತ ಸಾಲ ಮತ್ತು ಸಕಾಲಿಕ ಸಾಲಗಳ ಪೂರ್ಣ ಮಾಹಿತಿ ಕಳುಹಿಸುವಂತೆ ಎಲ್ಲಾ ಸಹಕಾರ ಬ್ಯಾಂಕುಗಳಿಗೆ ತಿಳಿಸಿದೆ ಎಂದು ಹೇಳಲಾಗುತ್ತದೆ.

ಮೂಲಗಳ ಪ್ರಕಾರ, ಜೂನ್ 2009 ರ ನಂತರ ಸಾಲ ಪಡೆದಿರುವ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಾರೆ.  ಸರ್ಕಾರ 20 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದರಿಂದ ರಾಜ್ಯದ  33 ಲಕ್ಷ ರೈತರು ಪ್ರಯೋಜನ ಪಡೆಯಬಹುದು ಎನ್ನಲಾಗಿದೆ.

ಮೂಲಗಳ ಪ್ರಕಾರ, ರಾಜ್ಯದ ರೈತರು ಸಹಕಾರಿ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು, ಖಾಸಗಿ ಬ್ಯಾಂಕ್ಗಳಲ್ಲಿ ರೈತರು 70 ಸಾವಿರ ಕೋಟಿ ರೂ. ಇದರಲ್ಲಿ 56 ಲಕ್ಷ ಕೋಟಿ ಸಾಲವನ್ನು 41 ಲಕ್ಷ ರೈತರು  ತೆಗೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಸುಮಾರು 15 ಸಾವಿರ ಕೋಟಿ ವಸೂಲಾಗದ ಸಾಲ (ಎನ್ಪಿಎ) ಇದೆ.

ಮೂಲಗಳ ಪ್ರಕಾರ, ಸಹಕಾರಿ ಬ್ಯಾಂಕುಗಳ  2 ಲಕ್ಷ ರೂ. ವರೆಗಿನ ಸಾಲವನ್ನು ಮಾತ್ರ ಮನ್ನಾ ಮಾಡಲಾಗುವುದು. ಬಾಕಿ ಸಾಲಗಳ ಮನ್ನಾ ಬಗ್ಗೆ ನೂತನ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

Trending News