ನವದೆಹಲಿ : ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಳಿತುಕೊಳ್ಳುವ ಆಸನದ ಮುಂಭಾಗದವಿದ್ದ ನಾಮಫಲಕ ಕುತೂಹಲ ಮೂಡಿಸಿದೆ. ಅದರ ಮೇಲೆ INDIA ಎಂದು ಬರೆಯುವ ಬದಲು BHARAT ಎಂದು ಬರೆಯಲಾಗಿದೆ. ಈಗಾಗಲೇ ಹೆಸರು ಇಂಡಿಯಾ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಪ್ರಧಾನಿ ಮೋದಿ ಅವರ ನಾಮಫಲಕದಲ್ಲಿ ಭಾರತ ಹೆಸರು ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಹೌದು.. ಇಂಡಿಯಾ ಮತ್ತು ಭಾರತ ಹೆಸರಿನ ಬದಲಾವಣೆ ಗದ್ದಲದ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆಯನ್ನು ಪ್ರಾರಂಭಿಸುತ್ತಿದ್ದಂತೆ ಅವರ ಮುಂದೆ ʼಭಾರತʼ ಹೆಸರಿನ ಬೋರ್ಡ್ ಪ್ರತ್ಯಕ್ಷವಾಗಿದೆ. ಶನಿವಾರದಂದು ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್ನಲ್ಲಿ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಒನ್ ಅರ್ಥ್' ಕುರಿತು ಸೆಷನ್-1 ನಲ್ಲಿ ಹೇಳಿಕೆ ನೀಡುತ್ತಿದ್ದಂತೆ ಭಾರತ ನಾಮಫಲಕ ಗಮನಸೆಳೆದಿದೆ.
ಇದನ್ನೂ ಓದಿ: 600 ಪೊಲೀಸ್ ಬಂದೋಬಸ್ತ್ ನಡುವೆ ಎಪಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ..!
ಇಂಡಿಯಾ ಹೆಸರು ನಾಪತ್ತೆಯಾಗಿರುವ ಕುರಿತು ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿವೆ. ಅಲ್ಲದೆ, ಕೇಂದ್ರ ಸರ್ಕಾರದ ಈ ನಡೆ ಕುರಿತು ಆಕ್ರೋಶ ಹೊರಹಾಕಿವೆ. ತಮ್ಮ ಒಕ್ಕೂಟಕ್ಕೆ 'ಇಂಡಿಯಾ' ಎಂದು ಹೆಸರು ಇಟ್ಟಿದ್ದಕ್ಕೆ ಕೇಂದ್ರ ಸರ್ಕಾರ ಹೆಸರು ಬದಲಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇದೀಗ ನಡುವೆ ಜಿ20 ಶೃಂಗಸಭೆಯಲ್ಲಿ 'ಭಾರತ' ಬೋರ್ಡ್ ನೋಡಿ ಕಿಡಿಕಾರುತ್ತಿದ್ದಾರೆ.
'ಇಂಡಿಯಾ' ಹೆಸರು ಹೋಗಿ ಭಾರತಕ್ಕೆ 'ಭಾರತ' ಎಂಬ ಅಧಿಕೃತ ಹೆಸರು ಮತ್ತೆ ಬರಲಿದೆ. ಸಂಸತ್ ವಿಶೇಷ ಅಧಿವೇಶನದ ವೇಳೆ ಮೋದಿ ಸರ್ಕಾರ ʼಭಾರತʼದ ಹೆಸರಿಗೆ ಅಧಿಕೃತವಾಗಿ ಮಾನ್ಯತೆ ನೀಡಲಿದೆ. ಇದೀಗ ಜಿ 20 ಶೃಂಗಸಭೆ ಮೂಲಕ ಅಧಿಕೃತವಾಗಿ ಇಂಡಿಯಾ ಹೆಸರು ಬದಲಾವಣೆ ಮೋದಿ ಅಧಿಕೃತವಾಗಿ ಚಾಲನೆ ನೀಡಿದಂತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.