ನವದೆಹಲಿ: ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಈಗ ಭಾರತಕ್ಕೆ ಉಭಯದೇಶಗಳ ನಡುವಿನ ಶಾಂತಿ ಪ್ರತೀಕವಾಗಿ ಆಗಮಿಸಲಿದ್ದಾರೆ.ಈಗ ಹಲವಾರು ದಾಖಲೆಗಳ ಪರೀಕ್ಷೆ, ವೈದಕೀಯ ಪರೀಕ್ಷೆ ಗಳ ಕಾರಣದಿಂದಾಗಿ ಅಭಿನಂದನ್ ಅವರು ಭಾರತಕ್ಕೆ ಆಗಮಿಸುವಲ್ಲಿ ವಿಳಂಭವಾಗಿದೆ.ಇದೆಲ್ಲ ಮುಗಿಸಿ ಕೊನೆಗೂ ಭಾರತಕ್ಕೆ ಆಗಮಿಸಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್ ಮೇಲೆ ಮಿಂಚಿನ ದಾಳಿಯನ್ನು ಭಾರತ ನಡೆಸಿತ್ತು, ಈ ಸಂದರ್ಭದಲ್ಲಿ ವರ್ಧಮಾನ್ ಪಾಕ್ ನ ಕೈಯಲ್ಲಿ ಸೆರೆ ಸಿಕ್ಕಿದ್ದರು. ಇದಾದ ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಭಯದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾಗದಿರಲಿ ಎಂದು ಶಾಂತಿಯ ಪ್ರತೀಕವಾಗಿ ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು
Visuals from Attari-Wagah border; Wing Commander #AbhinandanVarthaman to be received by a team of Indian Air Force. pic.twitter.com/C4wv14AEAd
— ANI (@ANI) March 1, 2019
ಈ ಪಾಕ್ ನಡೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ಹಾಗೂ ಅಮೇರಿಕಾ ಸೇರಿದಂತೆ ಹಲವು ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು. ಇನ್ನೊಂದೆಡೆಗೆ ಅಭಿನಂದನ್ ಅವರನ್ನು ಬಂಧಿಸಿದ ಚಿತ್ರಗಳನ್ನು ಅಸಹ್ಯವಾಗಿ ಚಿತ್ರಿಸಿದಕ್ಕೆ ಭಾರತ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ಜಿನೇವಾ ಒಪ್ಪಂದದ ಅನುಗುಣವಾಗಿ ಪಾಕ್ ನಿಯಮವನ್ನು ಉಲ್ಲಂಘಿಸಿದೆ ಎಂದು ಭಾರತ ವಾಧಿಸಿತ್ತು.
ಬುಧುವಾರದಂದು ವರ್ಧಮಾನ್ ಗಡಿ ರೇಖೆಯಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರಿಳಿಸಿ ನಂತರ ಪಾಕ್ ಗೆ ಸೆರೆಸಿಕ್ಕಿದ್ದರು.