ನವದೆಹಲಿ: ದೇಶದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಬಹಳ ಮುಖ್ಯವಾದ ದಾಖಲೆ. ಯಾವುದೇ ಸರ್ಕಾರಿ ಕೆಲಸಗಳಿಗೆ ಆಧಾರ್ ಬಹಳ ಅಗತ್ಯ. ಅಷ್ಟೀಲ್ಲ, ಆಧಾರ್ ಸಹಾಯದಿಂದ ನೀವು ಆದಾಯ ತೆರಿಗೆ ರಿಟರ್ನ್ಸ್ ಸಹ ಫೈಲ್ ಮಾಡಬಹುದು. ಇಂತಹ ಮುಖ್ಯವಾದ ದಾಖಲೆ ಕಳೆದುಹೋದರೆ ಮಾಡಬೇಕಾದ್ದೇನು? ಒಂದು ವೇಳೆ ನಿಮ್ಮ ಬಳಿ ಆಧಾರ್ ನಲ್ಲಿ ರಿಜಿಸ್ಟರ್ ಮಾಡಲಾದ ಮೊಬೈಲ್ ನಂಬರ್ ಸಹ ಇಲ್ಲವಾದರೆ ಆಧಾರ್ ಮತ್ತೆ ಪಡೆಯುವುದು ಹೇಗೆ ಎಂಬದನ್ನು ತಿಳಿಯುವುದು ಬಹಳ ಮುಖ್ಯ.
ನೀವು ನಿಮ್ಮ ಮೂಲ ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ ಮೊದಲು UIDAI ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿಂದ mAadhaar ಅನ್ನು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೂ ಸಹ mAdhaarನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನೋಂದಾಯಿಸುವುದು ಸಹ ಮುಖ್ಯ.
ಮೊಬೈಲ್ ನಂಬರ್ ರಿಜಿಸ್ಟರ್ ಆಗಿಲ್ಲದಿದ್ದರೆ ಏನು ಮಾಡಬೇಕು?
ಆಧಾರ್ ನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದಿದ್ದರೆ ಭಯಪಡುವ ಅಗತ್ಯವಿಲ್ಲ. ಮತ್ತೊಮ್ಮೆ ಬೇರೆ ಮೊಬೈಲ್ ನಂಬರ್ ನೀಡಿ ಸಹ ಆಧಾರ್ ಪಡೆಯಬಹುದು. ನಿಮ್ಮ ಆಧಾರ್ ಅನ್ನು ಆನ್ಲೈನ್ ಮೂಲಕ ಮತ್ತೆ ಪಡೆಯಲು ಯುಐಡಿಎಐನಲ್ಲಿ ಸೌಲಭ್ಯವಿದೆ. ಆನ್ಲೈನ್ನಲ್ಲಿ ಆಧಾರ್ ಪಡೆಯಲು ಗ್ರಾಹಕರು ತಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಈ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
ಆಧಾರವನ್ನು ಪಡೆಯುವುದು ಹೇಗೆ?
ಮೊದಲು UIDAI.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಆಧಾರ್ ಮರುಮುದ್ರಣ ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕೋರಿದ ಇತರ ಮಾಹಿತಿಯನ್ನು ಭರ್ತಿ ಮಾಡಿ. ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದಿದ್ದಲ್ಲಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಪರಿಶೀಲನೆಗಾಗಿ ಸೇರಿಸಿ ನಂಬರ್ ನೋಂದಾಯಿಸಿ. ಒಮ್ಮೆ ಮೊಬೈಲ್ ಸಂಖ್ಯೆ ನೋಂದಣಿ ಮಾಡುತ್ತಿದ್ದಂತೆ ನಿಮಗೆ ಎಸ್ಆರ್ಎನ್ ನೀಡಲಾಗುತ್ತದೆ. ಇದರ ನಂತರ ನಿಮ್ಮ ಶಾಶ್ವತ ವಿಳಾಸಕ್ಕೆ ನಿಮ್ಮ ಆಧಾರ್ ಅನ್ನು ತಲುಪಿಸಲಾಗುತ್ತದೆ.
ನಿಮ್ಮ ಮನೆಯ ವಿಳಾಸಕ್ಕೆ ಆಧಾರ್ ಕಳುಹಿಸಲು ನೀವು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆಧಾರ್ ಮರುಮುದ್ರಣಕ್ಕಾಗಿ ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೋಡ್ ಮೂಲಕ ಹಣ ಪಾವತಿಸುವುದಾದಲ್ಲಿ ನೀವು 50 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. ಬಳಿಕ ನಿಮ್ಮ ಆಧಾರ್ ಮರುಮುದ್ರಣ ಮಾಡಿ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಲಾಗುತ್ತದೆ.