Crime: ಕ್ರೌರ್ಯದ ಹದ್ದು ಮೀರಿದ ಪತಿ! ಪತ್ನಿಯನ್ನು ವಿವಸ್ತ್ರಗೊಳಿಸಿ ಸ್ನೇಹಿತರ ಮುಂದೆ ಡಾನ್ಸ್ ಮಾಡಿಸಿ, ಹಲವು ಬಾರಿ ಗ್ಯಾಂಗ್ ರೇಪ್

Man Forced Wife To Dance By Taking Off Clothes: ದುಷ್ಟ ಪತಿಯೊಬ್ಬ ತನ್ನ ಸ್ನೇಹಿತರ ಜತೆಗೂಡಿ ಮಹಿಳೆಯೊಬ್ಬರ ಮೇಲೆ ಹಲವು ಬಾರಿ ಅಸಹಜ ಸಂಬಂಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸಿದ್ದಾರೆ.

Written by - Nitin Tabib | Last Updated : Jan 17, 2022, 12:29 PM IST
  • ಮದುವೆಯ ವೇಳೆ ಪತಿಯ ಮನೆಯವರು ಮತ್ತು ಸಂಬಂಧಿಕರು ಯಾರು ಇರಲಿಲ್ಲ.
  • ಮೆಟ್ರಿಮೊನಿಯಲ್ ಸೈಟ್ ಮೇಲೆ ಪತಿಯನ್ನು ಭೇಟಿಯಾಗಿರುವುದಾಗಿ ಹೇಳಿದ ಸಂತ್ರಸ್ತೆ
  • ಆರೋಪಿ ಪತಿ ಸೇರಿದಂತೆ ಆತನ ಸ್ನೇಹಿತರನ್ನು ಬಂಧಿಸಿದ ಪೊಲೀಸರು.
Crime: ಕ್ರೌರ್ಯದ ಹದ್ದು ಮೀರಿದ ಪತಿ! ಪತ್ನಿಯನ್ನು ವಿವಸ್ತ್ರಗೊಳಿಸಿ ಸ್ನೇಹಿತರ ಮುಂದೆ ಡಾನ್ಸ್ ಮಾಡಿಸಿ, ಹಲವು ಬಾರಿ ಗ್ಯಾಂಗ್ ರೇಪ್ title=
Man Forced Wife To Dance By Taking Off Clothes (Representational Image)

ಇಂದೋರ್: Man Forced Wife To Dance By Taking Off Clothes - ಮಧ್ಯಪ್ರದೇಶದ (Madhya Pradesh) ಇಂದೋರ್‌ನಿಂದ (Indore) ಭೀಭತ್ಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿ-ಪತ್ನಿಯರ ನಡುವಿನ ಸಂಬಂಧ ತುಂಬಾ ಪವಿತ್ರವಾದುದು ಎಂದು ಹೇಳಲಾಗುತ್ತದೆ, ಆದರೆ ಇಂದೋರ್‌ನಲ್ಲಿ ಪತಿ ತನ್ನ ಹೆಂಡತಿಗೆ ಮಾಡಿದ್ದೇನು ಎಂದು ತಿಳಿದರೆ ನಿಮ್ಮ ಎದೆ ಕೂಡ ಝಲ್ ಎನ್ನಲಿದೆ. ಘಟನೆ ಬೆಳಕಿಗೆ ಬಂದ ನಂತರ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.

ಸ್ನೇಹಿತರ ಜೊತೆ ಸೇರಿ ಹಲವು ಬಾರಿ ಪತಿಯಿಂದ ಸಾಮೂಹಿಕ ಅತ್ಯಾಚಾರ (Viral News)
ಫಾರ್ಮ್ ಹೌಸ್ ನಲ್ಲಿ ಪತಿ ತನ್ನ ಸ್ನೇಹಿತರ ಮುಂದೆ ಪತ್ನಿಯನ್ನು ಬೆತ್ತಲೆಯಾಗಿಸಿ ಡ್ಯಾನ್ಸ್ ಮಾಡಿಸುತ್ತಿದ್ದ  ಎಂದು ಆರೋಪಿಸಲಾಗಿದೆ. ಆರೋಪಿ ಪತಿ ಇಂದೋರ್‌ನಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ಸ್ನೇಹಿತರೊಂದಿಗೆ ಸೇರಿ ಹಲವು ಬಾರಿ ತನ್ನ ಪತ್ನಿಯೊಂದಿಗೆ ಸಾಮೂಹಿಕ ಅತ್ಯಾಚಾರ (Gangrape) ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯೊಂದಿಗೆ ಪತಿ ಮತ್ತು ಆತನ ಸ್ನೇಹಿತರು ಅಸಹಜ ಸಂಬಂಧ ಬೆಳೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ.

ಪತಿಯ ಕ್ರೌರ್ಯದಿಂದ ಹತಾಶೆಗೊಂಡು ದೂರು ದಾಖಲಿಸಿದ್ದಾರೆ (Trending News)
ಪತಿ ಮತ್ತು ಆತನ ಸ್ನೇಹಿತರ ಕ್ರೌರ್ಯದಿಂದ ಬೇಸತ್ತ ಮಹಿಳೆ ಇಂದೋರ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಕ್ರಮ ಕೈಗೊಂಡು ಮಹಿಳೆಯ ಪತಿ ಮತ್ತು ಆಕೆಯ ಐವರು ಸ್ನೇಹಿತರನ್ನು ವಿವಿಧ ಸ್ಥಳಗಳಿಂದ ಭಾನುವಾರ ಬಂಧಿಸಿದ್ದಾರೆ.

ಇದನ್ನೂ ಓದಿ-ಸಂಪುಟ ವಿಸ್ತರಣೆಗೆ ಅಂಕಿತ ಪಡೆಯಲು ಶೀಘ್ರದಲ್ಲೇ ದೆಹಲಿಗೆ ಸಿ ಎಂ ಬೊಮ್ಮಾಯಿ

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಇಬ್ಬರು ಭೇಟಿಯಾಗಿದ್ದರು
ಸಂತ್ರಸ್ತ ಮಹಿಳೆ ಛತ್ತೀಸ್‌ಗಢದ ನಿವಾಸಿ ಎಂದು ಇಂದೋರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ಪತಿ ಓರ್ವ ಸರ್ಕಾರಿ ಶಾಲಾ ಶಿಕ್ಷಕನಾಗಿದ್ದಾನೆ. ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಆರೋಪಿ ಪತಿ ಮಹಿಳೆಯೊಂದಿಗೆ ಪರಿಚಯ ಬೆಳೆಸಿದ್ದ. ಇದಾದ ನಂತರ ಇಬ್ಬರೂ ಮದುವೆಯಾಗಿದ್ದರು.

ಇದನ್ನೂ ಓದಿ-Omicron ಹಾಗೂ Delta Corona ರೂಪಾಂತರಿಗಳನ್ನು ಪ್ರತ್ಯೇಕಿಸುವ ಸುಲಭ ವಿಧಾನ ಇಲ್ಲಿದೆ

ಸಂತ್ರಸ್ತ ಮಹಿಳೆ ತಾನು ಮದುವೆಯಾದಾಗ ಗಂಡನ ಮನೆಯವರು ಯಾರೂ ಮದುವೆ ಸಮಾರಂಭಕ್ಕೆ ಬಂದಿರಲಿಲ್ಲ. ಮದುವೆಯಾಗಲು ಒಬ್ಬನೇ ಬಂದಿದ್ದ. ಆದರೆ ಆತನಿಗೆ ಈಗಾಗಲೇ ವಿವಾಹವಾಗಿದೆ ಎಂಬುದು ನಂತರ ತಿಳಿದುಬಂತು ಎಂದು ಸಂತ್ರಸ್ತೆ ದೂರಿದ್ದಾಳೆ.

ಇದನ್ನೂ ಓದಿ-VIDEO: ಜ್ವಾಲಾಮುಖಿ ಹೇಗೆ ಸಿಡಿಯುತ್ತದೆ ಗೊತ್ತಾ? ಕ್ಯಾಮೇರಾ ಕಣ್ಣಲ್ಲಿ ಸೆರೆಯಾದ ಭೀಕರ ದೃಶ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News