ನವದೆಹಲಿ: ಇನ್ಫೋಸಿಸ್ ವಿರುದ್ಧ ಲಂಚದ ಆರೋಪಗಳನ್ನು ಮಾಡಿದ ನಂತರ, ಈಗ ಜೆಫ್ ಬೆಜೋಸ್ ಸ್ಥಾಪಿಸಿದ ಅಮೆಜಾನ್ ವಿರುದ್ಧ ಆರೆಸೆಸ್ಸ್ ನ ಪಾಂಚಜನ್ಯ ನಿಯತಕಾಲಿಕೆ ವಾಗ್ದಾಳಿ ನಡೆಸಿದೆ.
ಈಸ್ಟ್ ಇಂಡಿಯಾ ಕಂಪನಿಯು ತನ್ನ ವ್ಯಾಪಾರದ ಹಿತಾಸಕ್ತಿಗಳೊಂದಿಗೆ ಭಾರತಕ್ಕೆ ಪ್ರವೇಶಿಸಿತು, ಆದರೆ 200 ವರ್ಷಗಳ ಕಾಲ ದೇಶವನ್ನು ವಸಾಹತುವನ್ನಾಗಿಸಿತು.ಅದೇ ನಿಟ್ಟಿನಲ್ಲಿ ಈಗ ಅಮೆಜಾನ್ ಮಾಡುತ್ತಿದೆ ಎಂದು ಪಾಂಚ್ಯಜನ್ಯ ಆರೋಪಿಸಿದೆ.ಅಮೆಜಾನ್ ಪ್ರೈಮ್ ವಿಡಿಯೋಗಳು ಮತ್ತು ವಿಷಯಗಳ ಮೂಲಕ ಹಿಂದೂ ಮೌಲ್ಯಗಳನ್ನು ಅವಮಾನಿಸಿದೆ ಎಂದು ಪಾಂಚಜನ್ಯ ಆರೋಪಿಸಿದೆ.
'ಅಮೆಜಾನ್ (Amazon) ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಏಕೈಕ ಹಕ್ಕುಗಳನ್ನು ಹೊಂದಲು ಬಯಸುತ್ತದೆ. ಇದಕ್ಕಾಗಿ, ಇದು ಜನರ ರಾಜಕೀಯ, ಆರ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಸುತ್ತುವರಿಯಲು ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ.ಇ-ಮಾರುಕಟ್ಟೆ ವೇದಿಕೆಯನ್ನು ಹಿಡಿಯಲು ಇದು ಫ್ಲೋಟಿಂಗ್ ಶೆಲ್ ಕಂಪನಿಗಳ ಆರೋಪವಾಗಿದೆ. ತನ್ನ ಪರವಾಗಿ ನೀತಿಗಳನ್ನು ಹೊಂದಲು ಲಂಚ ನೀಡುವುದು ಮತ್ತು ಪ್ರೈಮ್ ವೀಡಿಯೋಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು "ಎಂದು ಪಾಂಚಜನ್ಯ ಉಲ್ಲೇಖಿಸಿದೆ.
ಮುಖಪುಟವು ಅಮೆಜಾನ್‌ನ ಕಾನೂನು ಪ್ರತಿನಿಧಿಗಳು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪಗಳನ್ನು ಉಲ್ಲೇಖಿಸುತ್ತದೆ ಮತ್ತು "ಲಂಚ ನೀಡಲು ಕಂಪನಿ ಏನು ತಪ್ಪು ಮಾಡಿದೆ ... ಜನರು ಈ ಕಂಪನಿಯನ್ನು ಸ್ಥಳೀಯ ಉದ್ಯಮಶೀಲತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಂಸ್ಕೃತಿಗೆ ಏಕೆ ಅಪಾಯವೆಂದು ಪರಿಗಣಿಸುತ್ತಾರೆ ? " ಎಂದು ಅದು ಪ್ರಶ್ನಿಸಿದೆ.
ಸಣ್ಣ ವ್ಯಾಪಾರಿಗಳು ಉತ್ಪನ್ನಗಳನ್ನು ಮಾರಾಟ ಮಾಡಲು ದೊಡ್ಡ ವೇದಿಕೆಯನ್ನು ಪಡೆಯಲು ಸಹಾಯ ಮಾಡುವ ಭರವಸೆಯೊಂದಿಗೆ ಅಮೆಜಾನ್ ಭಾರತದಲ್ಲಿ ಹೂಡಿಕೆ ಮಾಡಿದೆ ಎಂದು ಕವರ್ ಸ್ಟೋರಿ ಹೇಳಿದೆ. "ಕಂಪನಿಯು ಕ್ಲೌಡ್‌ಟೇಲ್ ಮತ್ತು ಎಪಿರಿಯಾದಂತಹ ಪೂರೈಕೆದಾರ ಘಟಕಗಳನ್ನು ಸ್ಥಾಪಿಸಿತು, ಇದರಲ್ಲಿ ಅದು ಮಹತ್ವದ ಪಾಲನ್ನು ಮತ್ತು ಪರೋಕ್ಷ ನಿಯಂತ್ರಣವನ್ನು ಹೊಂದಿತ್ತು' ಎಂದು ನಿಯತಕಾಲಿಕೆ ಉಲ್ಲೇಖಿಸಿದೆ.
ವಿಶ್ವದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರದ ಕಂಪನಿ ಅಮೆಜಾನ್, ಭಾರತದಲ್ಲಿ ತನ್ನ ಕಾನೂನು ಪ್ರತಿನಿಧಿಗಳ ನಡವಳಿಕೆಯ ಕುರಿತು ತನಿಖೆಯನ್ನು ಆರಂಭಿಸಿದೆ ಎಂದು ದಿ ಮಾರ್ನಿಂಗ್ ಕಾಂಟೆಕ್ಸ್ಟ್ ವರದಿ ಮಾಡಿದೆ.ಅಮೆಜಾನ್ ಕಾನೂನು ಶುಲ್ಕದಲ್ಲಿ ಪಾವತಿಸಿದ ಕೆಲವು ಹಣವನ್ನು ಅದರ ಒಂದು ಅಥವಾ ಹೆಚ್ಚಿನ ಕಾನೂನು ಪ್ರತಿನಿಧಿಗಳು ಲಂಚಕ್ಕೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ವಿಸ್ಲ್ ಬ್ಲೋವರ್ ದೂರಿನ ಹಿನ್ನೆಲೆಯಲ್ಲಿ ಈ ತನಿಖೆ ಬರುತ್ತದೆ.
ಇದನ್ನೂ ಓದಿ-iPhone 12, iPhone 12 mini ಭಾರೀ ರಿಯಾಯಿತಿಗಳಲ್ಲಿ ಲಭ್ಯ
ಅಮೆಜಾನ್‌ನ ಆಂತರಿಕ ಕಾನೂನು ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವ ಇಬ್ಬರು ಜನರು ಅಮೆಜಾನ್‌ನ ಹಿರಿಯ ಕಾರ್ಪೊರೇಟ್ ಸಲಹೆಗಾರ ರಾಹುಲ್ ಸುಂದರಂ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ ಎಂದು ದೃಡಪಡಿಸಿದರು.ಈ ವಿಚಾರವಾಗಿ ಸುಂದರಂ ಅವರನ್ನು ಸಂಪರ್ಕಿಸಿದಾಗ "ಕ್ಷಮಿಸಿ, ನಾನು ಮಾಧ್ಯಮದ ಜೊತೆ ಮಾತನಾಡಲು ಸಾಧ್ಯವಿಲ್ಲ." ಎಂದು ತಿಳಿಸಿದರು.
ಇದೆ ವೇಳೆ ಅಮೆಜಾನ್ ವಕ್ತಾರರು ಒಂದು ವಿವರವಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ " ಈಗ ತನಿಖೆ ನಡೆಯುತ್ತಿರುವುದರಿಂದ ಈಗ ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ-Amazon Deal of the Day: ಇಂದು 5G Smartphones ಮೇಲೆ ಪಡೆಯಿರಿ ಬಂಪರ್ ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.