ನವದೆಹಲಿ: ಜಾರ್ಖಂಡ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಮತದಾನದ ಪ್ರಮಾಣ 62.87 ರಷ್ಟು ದಾಖಲಾಗಿದ್ದು, ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತದಾನ ಮುಕ್ತಾಯಗೊಂಡಿದೆ.
ಭಾರಿ ಭದ್ರತೆಯ ಮಧ್ಯೆ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ಮೊದಲ ಹಂತದಲ್ಲಿ ಚತ್ರ, ಗುಮ್ಲಾ, ಬಿಶುನ್‌ಪುರ, ಲೋಹರ್‌ದಾಗ, ಮಾನಿಕಾ, ಲತೇಹರ್, ಪಂಕಿ, ಡಾಲ್ಟೋಂಗಂಜ್, ಬಿಶ್ರಾಂಪುರ್,ಛತ್ತರ್‌ಪುರ, ಹುಸೇನಾಬಾದ್, ಗರ್ಹ್ವಾ, ಮತ್ತು ಭವನಾಥಪುರಗಳಲ್ಲಿ ಮತದಾನ ನಡೆಯಿತು.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಜಾರ್ಖಂಡ್ ಜನರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
झारखंड विधानसभा चुनाव के लिए आज मतदान का पहला चरण है। सभी मतदाताओं से मेरा अनुरोध है कि वे अपना वोट जरूर डालें।
Phase 1 of the Jharkhand elections is in progress. I urge those whose constituencies go to the polls today to vote in large numbers & enrich the festival of democracy.
— Narendra Modi (@narendramodi) November 30, 2019
ಮತದಾನವು ಶಾಂತಿಯುತವಾಗಿತ್ತು ಮತ್ತು ಯಾವುದೇ ಅಹಿತಕರ ಘಟನೆಯಾದ ವರದಿಗಳಿಲ್ಲ ಎನ್ನಲಾಗಿದೆ. ಆದರೆ, ತಾಂತ್ರಿಕ ದೋಷದಿಂದಾಗಿ ಲತೇಹರ್‌ನ ಎರಡು ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಯಿತು. ಗುಮ್ಲಾ ಜಿಲ್ಲೆಯಲ್ಲಿ ನಕ್ಸಲ್ಸ್ ಚಟುವಟಿಕೆ ವರದಿಯಾಗಿದ್ದು, ಅವರು ಬಿಷ್ಣುಪುರದ ಸೇತುವೆಯನ್ನು ಸ್ಫೋಟಿಸಿದ್ದಾರೆ. ಆದರೆ ಯಾವುದೇ ಗಾಯಗಳು ವರದಿಯಾಗಿಲ್ಲ. ಈ ಘಟನೆ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಶಶಿ ರಂಜನ್ ನಕ್ಸಲರು ಮತದಾನದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಹೇಳಿದರು.
" सीमाओं के प्रहरी हैं, हम लोकतंत्र के भी हैं रक्षक "@BSF_India के जवान #झारखंड के लातेहार में चुनावी ड्यूटी करते हुए pic.twitter.com/61326mIadC
— दूरदर्शन न्यूज़ (@DDNewsHindi) November 30, 2019
ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ 4,892 ಬೂತ್‌ಗಳಿದ್ದು, ಅದರಲ್ಲಿ 4,585 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 307 ನಗರ ಪ್ರದೇಶಗಳಲ್ಲಿವೆ. ಈ ಪೈಕಿ 121 ಸಖಿ ಬೂತ್‌ಗಳು ಮತ್ತು 417 ಮಾದರಿ ಬೂತ್‌ಗಳಾಗಿವೆ. ಮೊದಲ ಹಂತದಲ್ಲಿ 1,262 ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.
ಎರಡನೇ ಹಂತದ ಚುನಾವಣೆ ಡಿಸೆಂಬರ್ 7 ರಂದು ರಾಜ್ಯದ 20 ಕ್ಷೇತ್ರಗಳಲ್ಲಿ ನಡೆಯಲಿದೆ. ಪಾಲಮು, ಲತೇಹರ್, ಚತ್ರ, ಲೋಹರ್ದ್ರಾ ಮತ್ತು ಗುಮ್ಲಾ ಜಿಲ್ಲೆಗಳ 13 ವಿಧಾನಸಭಾ ಸ್ಥಾನಗಳಿಗೆ 190 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 81 ಸದಸ್ಯರ ಜಾರ್ಖಂಡ್ ವಿಧಾನಸಭಾ ಚುನಾವಣೆ ನವೆಂಬರ್ 30 ರಿಂದ ಡಿಸೆಂಬರ್ 20 ರ ನಡುವೆ ಐದು ಹಂತಗಳಲ್ಲಿ ನಡೆಯುತ್ತಿದೆ. ಡಿಸೆಂಬರ್ 23 ರಂದು ಫಲಿತಾಂಶ ಹೊರಬಿಳಲಿದೆ