Bad Habits: ಸಮಯ ಇರುವಾಗಲೇ ನಿಮ್ಮೀ ಬೆಳಗಿನ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ.. ಇಲ್ದಿದ್ರೆ?

Bad Habits to Avoid: ಬೆಳಗ್ಗೆ ಎದ್ದಾಕ್ಷಣ ನಾವು ಮಾಡುವ ಕೆಲ ತಪ್ಪುಗಳನ್ನು ಆರೋಗ್ಯ ತಜ್ಞರು ಕೆಟ್ಟ ಅಭ್ಯಾಸಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ, ಅವುಗಳನ್ನು ಸಾಧ್ಯವಾದಷ್ಟು ಬೇಗ ಕೈಬಿಡಬೇಕು, ಇಲ್ಲದಿದ್ದರೆ ಅವುಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯ  

Written by - Nitin Tabib | Last Updated : Jan 8, 2023, 07:00 PM IST
  • ಬೆಳಗ್ಗೆ ಬೇಗ ಏಳುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ಆದರೆ ಕೆಲವರು ಏಳಲು ಭಾರೀ ಸೌಂಡ್ ಅಲಾರಂ ಬಳಸುತ್ತಾರೆ.
  • ಹಠಾತ್ ರಿಂಗಿಂಗ್ ಅಲಾರಂನ ಶಬ್ದವು ಸಿಂಫಥೇಟಿಕ್ ಸರ್ವಸ್ ಸಿಸ್ಟಂ ಅನ್ನು ಸಕ್ರಿಯಗೊಳಿಸುವುದರಿಂದ ಆರೋಗ್ಯ ತಜ್ಞರು ಅಲಾರಾಂ ಅನ್ನು ಉತ್ತಮವೆಂದು ಪರಿಗಣಿಸುವುದಿಲ್ಲ.
Bad Habits: ಸಮಯ ಇರುವಾಗಲೇ ನಿಮ್ಮೀ ಬೆಳಗಿನ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ.. ಇಲ್ದಿದ್ರೆ? title=
Morning Bad Habits

Bad Morning Habits: ಉತ್ತಮ ಜೀವನಶೈಲಿಯು ನಮಗೆ ಆರೋಗ್ಯಕರ ಜೀವನವನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ, ನಮ್ಮ ಆಹಾರ ಮತ್ತು ನಿಯಮಿತ ದಿನಚರಿಯನ್ನು ನಾವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸಮಯಕ್ಕೆ ಎದ್ದೇಳಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಸಮಯಕ್ಕೆ ಸರಿಯಾಗಿ ನಮ್ಮ ಕೆಲಸವನ್ನು ಮಾಡಬೇಕು ಮತ್ತು ಸಮಯಕ್ಕೆ ಸರಿಯಾಗಿ ನಿದ್ರಿಸಬೇಕು. ಇವುಗಳು ನಮಗೆ ಫಿಟ್ ಆಗಿರಲು ಸಹಾಯ ಮಾಡುವ ಕೆಲವು ಸುಲಭವಾದ ಸಮಯ ಕೋಷ್ಟಕಗಳಾಗಿವೆ. ಹೆಚ್ಚಿನ ಜನರು ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ, ತಮ್ಮ ದಿನಚರಿಯನ್ನು ನಿರ್ವಹಿಸಲು ಅಲಾರಾಂ ಹೊಂದಿಸುತ್ತಾರೆ. ಆದರೆ, ಪ್ರತಿದಿನ ಬೆಳಗ್ಗೆ ಏಳಲು ಅಲಾರಾಂ ಹೊಂದಿಸುವುದರ ಕುರಿತು ಆರೋಗ್ಯ ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ ಹೀಗಾಗಿ, ನಿಮ್ಮ ಬೆಳಗಿನ ದಿನಚರಿಯಿಂದ ಮೂರು ಕೆಟ್ಟ ಅಭ್ಯಾಸಗಳನ್ನು ತೆಗೆದುಹಾಕುವ ಮೂಲಕ ನೀವು ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಬೆಳಗಿನ ಈ ರೂಧಿಗಳನ್ನು ಆರೋಗ್ಯ ತಜ್ಞರು ಕೆಟ್ಟ ಅಭ್ಯಾಸಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ, ಅದನ್ನು ಸಾಧ್ಯವಾದಷ್ಟು ಬೇಗ ತ್ಯಜಿಸಬೇಕು ಎಂಬುದು ಅವರ ಅಭಿಪ್ರಾಯ.

ಆ ಕೆಟ್ಟ ಅಭ್ಯಾಸಗಳು ಯಾವುವು?
1. ಬೆಳಗ್ಗೆ ಬೇಗ ಏಳುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರು ಏಳಲು ಭಾರೀ ಸೌಂಡ್ ಅಲಾರಂ ಬಳಸುತ್ತಾರೆ. ಹಠಾತ್ ರಿಂಗಿಂಗ್ ಅಲಾರಂನ ಶಬ್ದವು ಸಿಂಫಥೇಟಿಕ್ ಸರ್ವಸ್ ಸಿಸ್ಟಂ ಅನ್ನು ಸಕ್ರಿಯಗೊಳಿಸುವುದರಿಂದ ಆರೋಗ್ಯ ತಜ್ಞರು ಅಲಾರಾಂ ಅನ್ನು ಉತ್ತಮವೆಂದು ಪರಿಗಣಿಸುವುದಿಲ್ಲ. ಈ ಕಾರಣದಿಂದಾಗಿ, ಒತ್ತಡಕ್ಕೆ ಕಾರಣವಾಗುವ ಅಂತಹ ಹಾರ್ಮೋನುಗಳು ದೇಹದಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತವೆ. ಎಚ್ಚರಿಕೆಯ ಭಾರೀ ಶಬ್ದವು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಮತ.

2. ಕೆಲವರಿಗೆ ತುಂಬಾ ಕೆಟ್ಟ ಅಭ್ಯಾಸವಿರುತ್ತದೆ, ಬೆಳಗ್ಗೆ ಎದ್ದ ತಕ್ಷಣ ಫೋನ್ ನತ್ತ ಕಣ್ಣು ಹಾಯಿಸುತ್ತ ಹಾಸಿಗೆಯ ಮೇಲೆ ಮಲಗುತ್ತಾರೆ. ಆರೋಗ್ಯ ತಜ್ಞರು ಈ ಅಭ್ಯಾಸವನ್ನು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಮುಂಜಾನೆ ಫೋನ್ ಪರದೆಯನ್ನು ಬಳಸುವುದರಿಂದ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ತಜ್ಞರು ಬೆಳಗ್ಗೆ  ಎದ್ದ ನಂತರ, ಮೊದಲನೆಯದಾಗಿ, ನಾವು ಆಕಾಶವನ್ನು ನೋಡಬೇಕು, ಇದರಿಂದಾಗಿ ಕಣ್ಣುಗಳ ಆರೋಗ್ಯವು ಉತ್ತಮವಾಗಿರುತ್ತದೆ.

ಇದನ್ನೂ ಓದಿ-Diabetics: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬೇಕೆ? ಈ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ

3. ಬೆಳಗ್ಗೆ ಹಾಸಿಗೆಯಿಂದ ಹೊರಬರುವುದು ಹೇಗೆ? ಇದು ನಿಮ್ಮ ಆರೋಗ್ಯದ ಮೇಲೂ ತುಂಬಾ ಪರಿಣಾಮ ಬೀರುತ್ತದೆ. ನೇರವಾಗಿ ಏಳುವುದರಿಂದ ಬೆನ್ನುಹುರಿಯ ಮೇಲೆ ಪರಿಣಾಮ ಬೀರುವುದರಿಂದ ಬೆಳಗ್ಗೆ ಮಲಗಿ ಒಂದು ಬದಿಗೆ ತಿರುಗಿ ಏಳುವುದು ಉತ್ತಮ ಎನ್ನುತ್ತಾರೆ ತಜ್ಞರು. ನೇರವಾಗಿ ಏಳುವುದು  ಬೆನ್ನುಮೂಳೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ-Heart Attack ನಂತಹ ಮಾರಕ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ ಈ ಗಿಡದ ತೊಗಟೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News