Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ...!

Pay Zero Income Tax: ತಿಂಗಳಿಗೆ 1 ಲಕ್ಷ ಸಂಬಳ, ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಇಟ್ಟುಕೊಂಡು ಈ ಬೆಲೆ ಏರಿಕೆಯ ದುರ್ದಿನಗಳಲ್ಲಿ ಜೀವನ ಕಷ್ಟ ಮತ್ತು ಅದರ ನಡುವೆ ತೆರಿಗೆ ಕಟ್ಟುವುದೂ ಕಷ್ಟ. ಅದಕ್ಕಾಗಿ ವರ್ಷಕ್ಕೆ 12 ಲಕ್ಷ ಆದಾಯ ಇದ್ದರೂ ತೆರಿಗೆ ಕಟ್ಟದಂತೆ ಪ್ಲಾನ್ ಮಾಡುವುದು ತುಂಬಾ ಮುಖ್ಯ.

Written by - Yashaswini V | Last Updated : Jan 20, 2025, 08:19 AM IST
  • ಸಾಮಾನ್ಯವಾಗಿ ಹೆಚ್ಚು ಸಂಬಳ ತೆಗೆದುಕೊಳ್ಳುವವರು ಹೆಚ್ಚು ತೆರಿಗೆ ಕಟ್ಟುತ್ತಾರೆ ಅಥವಾ ಕಟ್ಟಬೇಕಾಗುತ್ತದೆ ಎನ್ನುವ ಮಾತಿದೆ.
  • ಆದಾಯ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ಭಾರತೀಯ ತೆರಿಗೆ ಪದ್ದತಿಯಲ್ಲಿ ಹಲವು ಡಿಡೆಕ್ಷನ್ ಮತ್ತು ರಿಯಾಯಿತಿಗಳಿವೆ.
  • ಸರಿಯಾಗಿ ತಿಳಿದು ಯೋಜನೆ ರೂಪಿಸಿದರೆ ವಾರ್ಷಿಕವಾಗಿ 12 ಲಕ್ಷ ರೂ. ಆದಾಯ ಇದ್ದರೂ ತೆರಿಗೆ ಪಾವತಿಯಿಂದ ಮುಕ್ತರಾಗಬಹುದು.
Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ...!  title=

Pay Zero Income Tax: ತಿಂಗಳಿಗೆ 1 ಲಕ್ಷ ಸಂಬಳ ಇದ್ದರೆ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಆಗಿಬಿಡುತ್ತದೆ. ಅದು ತೆರಿಗೆ ವ್ಯಾಪ್ತಿಗೆ ಬಂದುಬಿಡುತ್ತದೆ. ಬೆಲೆ ಏರಿಕೆಯ ಈ ದುರ್ದಿನಗಳಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ತೆಗೆದುಕೊಂಡು ತೆರಿಗೆ ಕಟ್ಟಿ ಏನನ್ನೂ ಉಳಿತಾಯ ಮಾಡಲಾಗದ ಸ್ಥಿತಿ ಇದೆ. ಹಾಗಾಗಿ ವಾರ್ಷಿಕ 12 ಲಕ್ಷ ಆದಾಯ ಇದ್ದರೂ ತೆರಿಗೆ ಪಾವತಿಸದಂತೆ ಯೋಜನೆ ರೂಪಿಸುವುದನ್ನು ತಿಳಿಯಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ.

ಸಾಮಾನ್ಯವಾಗಿ ಹೆಚ್ಚು ಸಂಬಳ ತೆಗೆದುಕೊಳ್ಳುವವರು ಹೆಚ್ಚು ತೆರಿಗೆ ಕಟ್ಟುತ್ತಾರೆ ಅಥವಾ ಕಟ್ಟಬೇಕಾಗುತ್ತದೆ ಎನ್ನುವ ಮಾತಿದೆ. ಆದರೆ ಆದಾಯ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ಭಾರತೀಯ ತೆರಿಗೆ ಪದ್ದತಿಯಲ್ಲಿ ಹಲವು ಡಿಡೆಕ್ಷನ್ ಗಳು ಮತ್ತು ರಿಯಾಯಿತಿಗಳಿವೆ. ಅವುಗಳನ್ನು ಸರಿಯಾಗಿ ತಿಳಿದುಕೊಂಡು ಯೋಜನೆ ರೂಪಿಸಿದರೆ ವಾರ್ಷಿಕವಾಗಿ 12 ಲಕ್ಷ ರೂಪಾಯಿ ಆದಾಯ ಇದ್ದರೂ ತೆರಿಗೆ ಕಟ್ಟುವುದರಿಂದ ಮುಕ್ತರಾಗಬಹುದು. ಅದು ಹೇಗೆ ಅಂತಾ ತಿಳಿಯಿರಿ. 

1. ಸ್ಟ್ಯಾಂಡರ್ಡ್ ಡಿಡೆಕ್ಷನ್ 50 ಸಾವಿರ ರೂಪಾಯಿ ಕ್ಲೇಮ್ ಮಾಡಬಹುದು. ಆಗ ಆದಾಯ 11.5 ಲಕ್ಷ ರೂಪಾಯಿ ಆಗುತ್ತದೆ. ನಂತರ ಸೆಕ್ಷನ್ 80C ಹೂಡಿಕೆಗಳ ಮೂಲಕ EPF, PPF, ELSS ಹಾಗು ಮಕ್ಕಳ ಬೋಧನಾ ಶುಲ್ಕಗಳ ಮೂಲಕ 1.5 ಲಕ್ಷ ರೂಪಾಯಿ ವರೆಗೆ ಕ್ಲೇಮ್ ಮಾಡಬಹುದು. ಆಗ ಆದಾಯ 10 ಲಕ್ಷ ಎಂದು ಪರಿಗಣಿಸಲ್ಪಡುತ್ತದೆ.

ಇದನ್ನೂ ಓದಿ- ಸೇವಿಂಗ್ಸ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ TAX ಬೀಳೋದು ಗ್ಯಾರಂಟಿ..!

2. ಸೆಕ್ಷನ್ 80CCD (1B) ಅಡಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಹೂಡಿಕೆ ಮಾಡುವ ಹಾಗು ಗೃಹ ಸಾಲಕ್ಕೆ ಬಡ್ಡಿ ಕಟ್ಟುವ ಮೂಲಕ 50 ಸಾವಿರ ಕ್ಲೇಮ್ ಮಾಡಬಹುದು. ಆಗ ಆದಾಯ 9.5 ಲಕ್ಷ ರೂಪಾಯಿಗೆ ತಗ್ಗುತ್ತದೆ. ಗೃಹ ಸಾಲ ಇರುವುದರಿಂದ ಸೆಕ್ಷನ್ 24B ಅಡಿ 2 ಲಕ್ಷ ರೂಪಾಯಿವರೆಗೆ ಕ್ಲೇಮ್ ಮಾಡಬಹುದು. ಆಗ ಆದಾಯ 7.5 ಲಕ್ಷಕ್ಕೆ ಬಂದು ನಿಲ್ಲುತ್ತದೆ.

3. ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮೆ ಮಾಡಿಸಿದರೆ 50 ಸಾವಿರ ರೂಪಾಯಿ ಕ್ಲೇಮ್ ಮಾಡಬಹುದು. ಇದನ್ನು ಸಂಗಾತಿ, ಮಕ್ಕಳು ಮತ್ತು ಪೋಷಕರಿಗೆ ಸೇರಿದಂತೆ ಮಾಡಿಕೊಳ್ಳಬಹುದು. ಆಗ ಆದಾಯ 7 ಲಕ್ಷ ರುಪಾಯಿಗೆ ಇಳಿಯುತ್ತದೆ.

ಇದನ್ನೂ ಓದಿ- Budget 2024: ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ!

4. ಬಾಡಿಗೆ ಮನೆಯಲ್ಲಿ ವಾಸಿಸುವವರು  HRA ವಿನಾಯಿತಿಯನ್ನು 2 ಲಕ್ಷ ರೂಪಾಯಿವರೆಗೆ ಕ್ಲೇಮ್ ಮಾಡಬಹುದು. ಆಗ ಆದಾಯ 5 ಲಕ್ಷ ರೂಪಾಯಿ ಆಗುತ್ತದೆ. ಇದರಿಂದಾಗಿ ಸೆಕ್ಷನ್ 87A ರಿಯಾಯಿತಿ ಅರ್ಹತೆ ಪಡೆಯಬಹುದು. ಅಂದರೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿರುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News