ಬೆಂಗಳೂರು : Banana For Type 2 Diabetes: ಮಧುಮೇಹ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಜನರನ್ನು ತನ್ನ ಕಪಿ ಮುಷ್ಟಿಗೆ ತೆಗೆದುಕೊಂಡಿದೆ. ಈ ಕಾಯಿಲೆ ಒಮ್ಮೆ ಬಂದರೆ ಸಾಕು ಮತ್ತೆ ಅದು ಬೆನ್ನು ಬಿಡುವುದೇ ಇಲ್ಲ. ಹೀಗಿರುವಾಗ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಯಾವ ಆಹಾರದಿಂದ ಕಾಯಿಲೆ ಉಲ್ಬಣ ಗೊಳ್ಳುತ್ತದೆ. ಯಾವ ಆಹಾರದಿಂದ ಈ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದನ್ನು ತಿಳಿದುಕೊಂಡು ಅದರ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.
ಮಧುಮೇಹಿಗಳು ಬಾಳೆಹಣ್ಣು ತಿನ್ನಬೇಕು :
ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಬಾಳೆಹಣ್ಣುಗಳನ್ನು ತಿನ್ನಬೇಕು . ಏಕೆಂದರೆ ಇದು ತಿನ್ನುವುದಕ್ಕೆ ರುಚಿಕರ ಮಾತ್ರವಲ್ಲ, ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಬಾಳೆಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ನಂತಹ ಪ್ರಮುಖ ಪೋಷಕಾಂಶಗಳಿವೆ. ಮಧುಮೇಹ ರೋಗಿಗಳು ಬಾಳೆಹಣ್ಣುಗಳನ್ನು ತಿನ್ನಬಾರದು ಎಂದು ಅನೇಕರೂ ಹೇಳುತ್ತಾರೆ. ಆದರೆ ಇದು ಸಂಪೂರ್ಣವಾಗಿ ನಿಜವಲ್ಲ.
ಇದನ್ನೂ ಓದಿ : Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ
ಬಾಳೆಹಣ್ಣು ತಿನ್ನುವ 4 ಅದ್ಭುತ ಪ್ರಯೋಜನಗಳು :
1. ಮಧುಮೇಹ
ಬಾಳೆಹಣ್ಣುಗಳು ಫೈಬರ್, ವಿಟಮಿನ್‌ಗಳು, ಖನಿಜಗಳು, ಪಿಷ್ಟ, ಫೈಟೊಕೆಮಿಕಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಟೈಪ್ 2 ಮಧುಮೇಹದ ವಿರುದ್ಧ ಹೋರಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. ಕಬ್ಬಿಣ
ಬಾಳೆಹಣ್ಣನ್ನು ಐರನ್ ನ ಪ್ರಮುಖ ಮೂಲವೆಂದು ಹೇಳಲಾಗುತ್ತದೆ. ದೇಹದಲ್ಲಿ ಫೋಲೇಟ್ ಕೊರತೆಯಿದ್ದರೆ, ರಕ್ತಹೀನತೆಯ ಅಪಾಯವು ಹೆಚ್ಚಾಗುತ್ತದೆ. ಫೋಲೇಟ್ ಬಾಳೆಹಣ್ಣಿನಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸುತ್ತದೆ.
3. ತ್ವರಿತ ಶಕ್ತಿ :
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಂತಹ ಪ್ರಮುಖ ಪೋಷಕಾಂಶಗಳಿವೆ. ಇವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದಣಿವು ಮತ್ತು ದೌರ್ಬಲ್ಯವುಂಟಾಗಿದ್ದರೆ, ತ್ವರಿತ ಶಕ್ತಿಯನ್ನು ಪಡೆಯಲು ಬಾಳೆಹಣ್ಣನ್ನು ಸೇವಿಸಬಹುದು.
ಇದನ್ನೂ ಓದಿ : Jackfruit: ಹಲಸು ತಿಂದ ನಂತರ ಈ ಆಹಾರಗಳನ್ನು ಸೇವಿಸಲೇಬಾರದು
4. ಜೀರ್ಣಕ್ರಿಯೆ :
ಬಾಳೆಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನ ಸೇವನೆಯಿಂದ ಮಲಬದ್ಧತೆಯ ಸಮಸ್ಯೆಯಿಂದ ಕೂಡಾ ಪರಿಹಾರ ಪಡೆಯಬಹುದು.
( ಸೂಚನೆ : ಈ ಮೇಲಿನ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.