ಬೋಳು ತಲೆಯಲ್ಲಿಯೂ ಚಿಗುರುತ್ತವೇ ಕೂದಲು..! ಈ ಸಿಂಪಲ್‌ ಟ್ರಿಕ್ಸ್‌ನಿಂದ ಮಾತ್ರ ಸಾಧ್ಯ..

Hair Care tips : ಸುಂದರ, ದಪ್ಪ, ಉದ್ದ ಕಪ್ಪು ಕೂದಲು ಹೊಂದಲು ಯಾರು ಬಯಸುವುದಿಲ್ಲ ಹೇಳಿ..? ಈ ರೀತಿಯ ಕೇಶರಾಶಿ ಪ್ರತಿಯೊಬ್ಬರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಆದರೂ, ಇತ್ತೀಚಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ, ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಜಸ್ಟ್‌ ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿದರೆ ಬೋಳು ತಲೆಯಲ್ಲಿಯೂ ಕೂದಲು ಚಿಗುರುತ್ತವೆ.. 

Written by - Krishna N K | Last Updated : Dec 11, 2024, 03:00 PM IST
    • ಸುಂದರ, ದಪ್ಪ, ಉದ್ದ ಕಪ್ಪು ಕೂದಲು ಹೊಂದಲು ಎಲ್ಲರೂ ಬಯಸುತ್ತಾರೆ..
    • ಕೇಶರಾಶಿ ಪ್ರತಿಯೊಬ್ಬರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
    • ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಬೋಳು ತಲೆಯಲ್ಲಿಯೂ ಚಿಗುರುತ್ತವೇ ಕೂದಲು..! ಈ ಸಿಂಪಲ್‌ ಟ್ರಿಕ್ಸ್‌ನಿಂದ ಮಾತ್ರ ಸಾಧ್ಯ.. title=

Bald Hair Growth tips : ಚಿಕ್ಕವಯಸ್ಸಿನಲ್ಲಿ ಕೂದಲು ಉದುರಲು ಹಲವಾರು ಕಾರಣಗಳಿವೆ. ಕೆಲಸದ ಒತ್ತಡ, ಸರಿಯಾದ ಪೋಷಣೆಯ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಿಂಪಲ್ ಟಿಪ್ಸ್.. ಬನ್ನಿ ಹೆಚ್ಚಿನ ವಿವರ ತಿಳಿಯೋಣ...

ಈರುಳ್ಳಿ: ಇದರಲ್ಲಿರುವ ಸಲ್ಫರ್ ನಮ್ಮ ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಸಹಕಾರಿ. ಇದಕ್ಕಾಗಿ, ಈರುಳ್ಳಿಯ ಮೃದುವಾದ ಮಿಶ್ರಣವನ್ನು ಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ, ರಸಕ್ಕೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ, ತಲೆಗೆ ಚೆನ್ನಾಗಿ ಮಸಾಜ್ ಮಾಡಿ.

ಇದನ್ನೂ ಓದಿ:ಬಾಯಲ್ಲಿ ಗುಳ್ಳೆಯಾದರೆ ಅದು ʻಈʼ ರೋಗದ ಲಕ್ಷಣವಿರಬಹುದು ಹುಷಾರ್‌!! ತಡಮಾಡದೆ ಕೂಡಲೇ ಎಚ್ಚೆತ್ತುಕೊಳ್ಳಿ

ಹರಳೆಣ್ಣೆ : ಕ್ಯಾಸ್ಟರ್ ಆಯಿಲ್ ಬೋಳು ತಲೆಗೆ ರಾಮಬಾಣ. ಈ ಎಣ್ಣೆಯನ್ನು ಬೆರಳುಗಳ ಸಹಾಯದಿಂದ ನೆತ್ತಿಯ ಮೇಲೆ ಚನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಬೋಳು ತಲೆಯಲ್ಲಿಯೂ ಕೂದಲು ಹುಟ್ಟುತ್ತವೆ.. ಅಲ್ಲದೆ, ಕೂದಲು ಉದುರುವಿಕೆ ಸಮಸ್ಯೆಯೂ ದೂರವಾಗುತ್ತದೆ.

ಅಲೋವೆರಾ: ಅಲೋವೆರಾದಲ್ಲಿ ಅನೇಕ ಪೌಷ್ಟಿಕಾಂಶಗಳು ಅಡಗಿವೆ, ಇದು ನೈಸರ್ಗಿಕವಾಗಿ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನಾವು ವಾರಕ್ಕೆ ಎರಡರಿಂದ ಮೂರು ಬಾರಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಬೇಕು. ಈ ಮೂರು ಸಿಂಪಲ್ ಟಿಪ್ಸ್ ಪಾಲಿಸಿದರೆ ನಯವಾದ ಕೂದಲನ್ನು ಹೊಂದಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News