ನಿಮ್ಮ ಹಿತ್ತಲಲ್ಲಿ ಬೆಳೆಯುವ ʻಈʼ ಒಂದು ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಸಾಕು, ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗೂ ಸಿಗುತ್ತೆ ಮುಕ್ತಿ!

Neem Oil: ಬೇವು ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇವು ಆ್ಯಂಟಿ ಸೆಪ್ಟಿಕ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಇದನ್ನು ನಿಮ್ಮ ಸೌಂದರ್ಯದ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ಸೌಂದರ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.  

Written by - Zee Kannada News Desk | Last Updated : Jan 16, 2025, 02:34 PM IST
  • ಬೇವು ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ
  • ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ಸೌಂದರ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
  • ಬೇವಿನ ಎಣ್ಣೆಯನ್ನು ಮನೆಯಲ್ಲಿಯೂ ತಯಾರಿಸಬಹುದು.
ನಿಮ್ಮ ಹಿತ್ತಲಲ್ಲಿ ಬೆಳೆಯುವ ʻಈʼ ಒಂದು ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಸಾಕು, ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗೂ ಸಿಗುತ್ತೆ ಮುಕ್ತಿ! title=

Neem Oil: ಬೇವು ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇವು ಆ್ಯಂಟಿ ಸೆಪ್ಟಿಕ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಇದನ್ನು ನಿಮ್ಮ ಸೌಂದರ್ಯದ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ಸೌಂದರ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಬೇವಿನ ಎಣ್ಣೆಯನ್ನು ಮನೆಯಲ್ಲಿಯೂ ತಯಾರಿಸಬಹುದು. ಇದಕ್ಕಾಗಿ ತಾಜಾ ಬೇವುಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಬೇಕು , ಇವೆಲ್ಲವನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈಗ ಮಿಶ್ರ ಮಿಶ್ರಣವನ್ನು ಡಬಲ್ ಬಾಯಾಲೆರ್‌ ವಿಧಾನದಲ್ಲಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಯು ಬಣ್ಣವನ್ನು ಬದಲಾಯಿಸುತ್ತದೆ. ನಂತರ ಬೆಂಕಿಯನ್ನು ಕಡಿಮೆ ಮಾಡಿ. ಈಗ ತಯಾರಿಸಿದ ಎಣ್ಣೆಯನ್ನು ಬಟ್ಟೆಯಲ್ಲಿ ಹಾಕಿ ಫಿಲ್ಟರ್ ಮಾಡಿ ಗಾಜಿನ ಬಾಟಲಿಯಲ್ಲಿ ಇದನ್ನು  ಸಂಗ್ರಹಿಸಿಡಿ.

ಸಿದ್ಧಪಡಿಸಿದ ಬೇವಿನ ಎಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಿ ಮಸಾಜ್ ಮಾಡಿ . ಇದರಿಂದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತದೆ. ಕೂದಲಿಗೆ ಎಣ್ಣೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ನೆತ್ತಿಯ ಮೇಲೆ ರಕ್ತ ಸಂಚಾರವೂ ಹೆಚ್ಚುತ್ತದೆ. ಈ ಎಣ್ಣೆಯನ್ನು ತಲೆಗೆ ಹಚ್ಚಿದ ನಂತರ ಒಂದು ಗಂಟೆ ಕಾಲ ಬಿಟ್ಟು ಸ್ನಾನ ಮಾಡಿ. 

ಬೇವಿನ ಎಣ್ಣೆಯನ್ನು ಕಂಡೀಷನರ್ ನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ಶಾಂಪೂ ಮಾಡಬಹುದು. ಇದು ತಲೆಯಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ.

ಈ ಎಣ್ಣೆಯನ್ನು ಸೇರಿಸಿ ಮಸಾಜ್ ಮಾಡುವುದರಿಂದ ಆರೋಗ್ಯಕರ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದರಿಂದ ಕೂದಲ ಬುಡ ಗಟ್ಟಿಯಾಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುತ್ತದೆ. ಮಾಲಿನ್ಯ, ಒತ್ತಡ, ಔಷಧಿಗಳಿಂದ ಕೂದಲು ಉದುರುವ ಸಮಸ್ಯೆಗಳಿದ್ದರೆ, ಅವುಗಳು ಸಹ ಕಡಿಮೆಯಾಗುತ್ತವೆ. 

ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ, ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಬೋಳು ತಕೆಯನ್ನು ಕಡಿಮೆ ಮಾಡುತ್ತದೆ. ಇದು ಸೋರಿಯಾಸಿಸ್ ಅನ್ನು ಸಹ ತೆಗೆದುಹಾಕುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಬಲವಾಗಿ ಮತ್ತು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.

ಈ ಎಲ್ಲಾ ಪ್ರಯೋಜನಗಳನ್ನು ಹೊಂದಿರುವ ಬೇವಿನ ಎಣ್ಣೆ ಕೆಲವೊಮ್ಮೆ ಕೂದಲಿನ ಮೇಲೆ ಅಡ್ಡ ಪರಿಣಾಮಗಳನ್ನು ಸಹ ತೋರಿಸುತ್ತದೆ. ಈ ಬೇವಿನ ಎಣ್ಣೆಯನ್ನು ತುಂಬಾ ಸೂಕ್ಷ್ಮವಾದ ನೆತ್ತಿಯ ಮೇಲೆ ಹಚ್ಚಿದರೆ ಉರಿಯೂತ ಮತ್ತು ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಈ ಎಣ್ಣೆಯನ್ನು ಹಚ್ಚುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮೂಲಗಳು ಮಾಹಿತಿಯನ್ನು ಆಧರಿಸಿದೆ Zee Kannada News ಇದನ್ನು ಖಚಿತ ಪಡಿಸುವುದರಿಲ್ಲ. ಇಲ್ಲಿ ನೀಡಲಾದ ಮದ್ದುಗಳನ್ನು ಅನುಸರಿಸುವ ಮುನ್ನ ವೈದ್ಯರನ್ನು ಭೆಟಿ ಮಾಡುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News