Fruits to avoid overeating if you have kidney disease : ಆರೋಗ್ಯವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯಕರ ಆಹಾರದ ವಿಷಯಕ್ಕೆ ಬಂದಾಗಲೆಲ್ಲಾ, ಹಣ್ಣುಗಳ ಹೆಸರು ಮೊದಲು ಬರುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ ಎಂದೇ ಹೇಳಲಾಗುತ್ತದೆ. ಆದರೆ ಆರೋಗ್ಯಕರ ಹಣ್ಣುಗಳು ಕೆಲವು ಜನರಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಹೌದು, ಮೂತ್ರಪಿಂಡ ರೋಗಿಗಳು, ಕಿಡ್ನಿ ಸ್ಟೋನ್ ಇರುವವರು ಕೆಲವು ಹಣ್ಣುಗಳನ್ನು ತಿನ್ನಲೇ ಬಾರದು. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
ದಾಳಿಂಬೆ :ದಾಳಿಂಬೆ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಆದರೆ ಮೂತ್ರಪಿಂಡದ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು. ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮೂತ್ರ ಪಿಂಡದ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.
ಇದನ್ನೂ ಓದಿ : ನಿದ್ದೆ ಮಾಡುವಾಗಲೂ ಬಾಯಿಂದ ಲಾಲಾರಸ ಬರುತ್ತದೆಯೇ..? ಈ 4 ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು..!
ಮೋಸಂಬಿ : ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ, ಅದರ ಶೋಧಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೋಸಂಬಿ ಹಣ್ಣು ಅಥವಾ ಅದರ ಜ್ಯೂಸ್ ಸೇವಿಸಿದರೆ , ಅದು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ.
ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುವುದರಿಂದ ಮೂತ್ರಪಿಂಡಗಳಿಗೆ ಉತ್ತಮ ಆಯ್ಕೆಯಾಗಿದೆ. ಆದರೆ ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗಿದ್ದರೆ ಅದರಲ್ಲಿರುವ ಪೊಟ್ಯಾಸಿಯಮ್ ಮತ್ತಷ್ಟು ಹಾನಿಕಾರಕವಾಗುತ್ತದೆ.
ಇದನ್ನೂ ಓದಿ : ಕ್ರೀಡಾಪಟುಗಳು ಪಂದ್ಯಕ್ಕೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ್ರೆ ಆಟದಲ್ಲಿ ಗೆಲುವು ಖಚಿತವೇ?! ತಜ್ಞರು ಹೇಳೋದೇನು?
ಕಿತ್ತಳೆ : ಮೊಸಬಿಯಂತೆ ಕಿತ್ತಳೆ ರಸವು ಮೂತ್ರಪಿಂಡಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಮೂತ್ರಪಿಂಡವು ಹಾನಿಗೊಳಗಾಗಿದ್ದರೆ ಮತ್ತು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದಿದ್ದರೆ ಕಿತ್ತಳೆ ರಸ ಸೇವಿಸದಿರುವುದು ಒಳ್ಳೆಯದು.
ಸ್ಟಾರ್ ಫ್ರೂಟ್ : ಸ್ಟಾರ್ ಫ್ರೂಟ್ ತುಂಬಾ ಹುಳಿ. ಇದರಲ್ಲಿ ಹಲವು ರೀತಿಯ ಜೀವಸತ್ವಗಳು ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಆದರೆ ನಿಮ್ಮ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಸ್ಟಾರ್ ಫ್ರೂಟ್ ಸೇವನೆ ಸರಿಯಾದ ಆಯ್ಕೆ ಅಲ್ಲ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.