ಒಟಿಟಿಯಲ್ಲಿ ಯಾವಾಗ ಬರುತ್ತೆ ಕೆಜಿಎಫ್ ಚಾಪ್ಟರ್ 2..?

 ಯಶ್ ಅಭಿನಯದ ಕೆಜಿಎಫ್: ಚಾಪ್ಟರ್  2 ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 14 ರಂದು ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ ಚಿತ್ರ ಬಿಡುಗಡೆಯಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 700 ಕ್ಕೂ ಅಧಿಕ ಕೋಟಿ.ರೂ ಬಾಚಿಕೊಂಡಿದೆ. 

Written by - Zee Kannada News Desk | Last Updated : Apr 22, 2022, 05:15 PM IST
  • ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 2 ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 14 ರಂದು ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
  • ಈ ಚಿತ್ರ ಬಿಡುಗಡೆಯಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 700 ಕ್ಕೂ ಅಧಿಕ ಕೋಟಿ.ರೂ ಬಾಚಿಕೊಂಡಿದೆ.
ಒಟಿಟಿಯಲ್ಲಿ ಯಾವಾಗ ಬರುತ್ತೆ ಕೆಜಿಎಫ್ ಚಾಪ್ಟರ್ 2..? title=

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್: ಚಾಪ್ಟರ್  2 ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 14 ರಂದು ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ ಚಿತ್ರ ಬಿಡುಗಡೆಯಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 700 ಕ್ಕೂ ಅಧಿಕ ಕೋಟಿ.ರೂ ಬಾಚಿಕೊಂಡಿದೆ. 

ಅದರಲ್ಲೂ ಹಿಂದಿ ಆವೃತ್ತಿಯೊಂದರಲ್ಲೇ ಕೇವಲ ಏಳು ದಿನಗಳಲ್ಲಿ 255 ಕೋಟಿ ರೂ.ಗಳಿಸಿದೆ.ಆ ಮೂಲಕ ಅತಿ ಕಡಿಮೆ ಸಮಯದಲ್ಲಿ 250 ಕೋಟಿ ರೂ ಗಳಿಸಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ 2 ಚಿತ್ರ ಪಾತ್ರವಾಗಿದೆ.ಅಷ್ಟೇ ಅಲ್ಲದೆ ಬಾಹುಬಲಿ 2, ದಂಗಲ್, ಸಂಜು ಮತ್ತು ಟೈಗರ್ ಜಿಂದಾ ಹೈ ಮುಂತಾದ ಚಿತ್ರಗಳ ದಾಖಲೆಯನ್ನು ಅಳಿಸಿ ಹಾಕಿದೆ.

ಇದನ್ನೂ ಓದಿ: ರಾಜಧಾನಿಯ ಮೊತ್ತೊಂದು ಪ್ರಸಿದ್ಧ ದೇವಸ್ಥಾನಕ್ಕೆ ಪೊಲೀಸ್ ನೋಟಿಸ್- ಕೆಂಪಾಯ್ತು ಭಕ್ತರ ಕಣ್ಣು

ಆದರೆ ಈಗ ಅಭಿಮಾನಿಗಳಿಗೆ ಈ ಚಿತ್ರವು ಒಟಿಟಿ ವೇದಿಕೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲವಿದೆ. ಒಂದು ಮೂಲಗಳ ಪ್ರಕಾರ ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಬರುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ- Surya Grahan 2022 : ಈ 3 ರಾಶಿಯವರು ಎಚ್ಚರದಿಂದಿರಿ! ಇವರ ಜೀವನಕ್ಕೆ 'ಸೂರ್ಯ ಗ್ರಹಣ' ಪ್ರವೇಶ

ಈಗ ಮಾಹಿತಿ ಲಭ್ಯವಾಗಿರುವ ಪ್ರಕಾರ ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಬೇಕಾದರೆ ಕನಿಷ್ಠ 90 ದಿನಗಳ ವರೆಗೆ ಕಾಯಬೇಕಾಗುತ್ತದೆ, ಈಗಾಗಲೇ ಕೆಜಿಎಫ್ ಚಿತ್ರ ಮೊದಲನೇ ಚಾಪ್ಟರ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೆ ಯುಟ್ಯೂಬ್ ನಲ್ಲಿ ಉಚಿತ ಸ್ಟ್ರಿಮಿಂಗ್ ಆಗುತ್ತಿದೆ.ಕೆಜಿಎಫ್ 2 ಚಿತ್ರವು ಈಗಿನ ಟ್ರೆಂಡ್ ರೀತಿಯಲ್ಲಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುಂದುವರೆದಿದ್ದೆ ಆದಲ್ಲಿ ದಂಗಲ್ ದಾಖಲೆಯನ್ನು ಸುಲಭವಾಗಿ ಮುರಿಯಲಿದೆ ಎನ್ನಲಾಗುತ್ತಿದೆ.ಆದರೆ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿಯುವುದು ಕಷ್ಟಕರ ಎನ್ನಲಾಗುತ್ತಿದೆ. ಏಕೆಂದರೆ ಹಿಂದಿ ಆವೃತ್ತಿಯಲ್ಲಿ 510 ಕೋಟಿ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿರುವ ದಂಗಲ್ ಸಿನಿಮಾ 387 ಕೋಟಿ.ರೂ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News