ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಬಿಗ್​ಬಾಸ್​ ಸ್ಪರ್ಧಿ ಭವ್ಯಾ ಗೌಡ ಮಧ್ಯೆ ಇರೋ ಸಂಬಂಧವೇನು ಗೊತ್ತಾ...!

Bhavya Gowda Amulya Relationship: ಕಲರ್ಸ್ ಕನ್ನಡ ವಾಹಿನಿ ಪ್ರಸ್ತುತ ಪಡಿಸುವ ಬಿಗ್​ಬಾಸ್ ರಿಯಾಲಿಟಿ ಷೋ ಟಿಆರ್ ಪಿ ಗಳಿಕೆಯಲ್ಲೂ  ಸಕ್ಸಸ್ ಕಂಡಿದೆ. ಸೀಸನ್ 11ರಲ್ಲಿ ಫಿನಾಲೆವರೆಗೆ ಬಂದಿದ್ದ ನಟಿ ಭವ್ಯಾ ಗೌಡ ತೀವ್ರ ಕುತೂಹಲ ಮೂಡಿಸಿದ್ದರು. ಅವರು ಫಿನಾಲೆ ಗೆಲ್ಲಬಹುದು ಎಂದು ಹೇಳಲಾಗಿತ್ತು.

Written by - Yashaswini V | Last Updated : Jan 31, 2025, 12:25 PM IST
  • ಭವ್ಯಾ ಗೌಡ ಅತ್ಯಂತ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು. ಗೀತಾ ಧಾರವಾಹಿ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು.
  • ಸೀಸನ್ 11ರಲ್ಲಿ ಮೂರೂ ಬರಿ ಮಹಿಳಾ ಕ್ಯಾಪ್ಟನ್ ಆಗಿದ್ದರು. ನಿರೂಪಕ ಕಿಚ್ಚ ಸುದೀಪ್ ಮೆಚ್ಚುಗೆಗೂ ಪಾತ್ರರಾಗಿದ್ದರು.
  • ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ವೋಟ್ ಮಾಡುವಂತೆ ಸ್ಯಾಂಡಲ್ ವುಡ್ ಕ್ಯೂಟ್ ಬ್ಯೂಟಿ ಅಮೂಲ್ಯ ಮನವಿ ಮಾಡಿದ್ದರು.
ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಬಿಗ್​ಬಾಸ್​ ಸ್ಪರ್ಧಿ ಭವ್ಯಾ ಗೌಡ ಮಧ್ಯೆ ಇರೋ ಸಂಬಂಧವೇನು ಗೊತ್ತಾ...!  title=

Bhavya Gowda Amulya Relationship: ತೀವ್ರ ಚರ್ಚೆಗೆ ಗ್ರಾಸವಾಗಿದ್ದ  ಬಿಗ್​ಬಾಸ್ ರಿಯಾಲಿಟಿ ಷೋನಾ ಸೀಸನ್ 11 ಅಂತ್ಯಗೊಂಡಿದೆ. ಇದೀಗ ಬಿಗ್​ಬಾಸ್ ಸೀಸನ್ 11ರ ಫಿನಾಲೆವರೆಗೆ ಬಂದಿದ್ದ 6 ಫೈನಲಿಸ್ಟಗಳ ಪೈಕಿ ಭವ್ಯಾ ಗೌಡ ಬಗ್ಗೆ ಚರ್ಚೆಯಾಗುತ್ತಿದೆ. ನಟಿ ಅಮೂಲ್ಯ ಮತ್ತು ಭವ್ಯಾ ಗೌಡ ನಡುವಿನ ಸಂಬಂಧ ಏನು? ಅಮೂಲ್ಯ ಏಕೆ ಭವ್ಯಾಗೌಡಗೆ ಸಪೋರ್ಟ್ ಮಾಡಿ ಅಂತಾ ಮನವಿ ಮಾಡಿದ್ದರು ಎಂಬ ಚರ್ಚೆ ಬಲು ಜೋರಾಗಿದೆ. 

ಕಲರ್ಸ್ ಕನ್ನಡ ವಾಹಿನಿ ಪ್ರಸ್ತುತ ಪಡಿಸುವ ಬಿಗ್​ಬಾಸ್ ರಿಯಾಲಿಟಿ ಷೋ ಟಿ‌ಆರ್‌ಪಿ ಗಳಿಕೆಯಲ್ಲೂ  ಸಕ್ಸಸ್ ಕಂಡಿದೆ. ಪ್ರತಿ ಸಲದಂತೆ ಈ ಬಾರಿಯೂ ಕೆಲವು ವಿವಾದವಾಗಿದ್ದರೂ ಯಶಸ್ವಿಯಾಗಿ ಮುಗಿದಿದೆ. ಬಿಗ್​ಬಾಸ್ ಸೀಸನ್ 11ರಲ್ಲಿ ಫಿನಾಲೆವರೆಗೆ ಬಂದಿದ್ದ ನಟಿ ಭವ್ಯಾ ಗೌಡ ತೀವ್ರ ಕುತೂಹಲ ಮೂಡಿಸಿದ್ದರು. ಅವರು ಫಿನಾಲೆಯಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಏಕೆಂದರೆ…

ಇದನ್ನೂ ಓದಿ- ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ

ಭವ್ಯಾ ಗೌಡ ಅತ್ಯಂತ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು. ಗೀತಾ ಧಾರವಾಹಿ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಸೀಸನ್ 11ರಲ್ಲಿ ಮೂರೂ ಬಾರಿ ಮಹಿಳಾ ಕ್ಯಾಪ್ಟನ್ ಆಗಿದ್ದರು. ನಿರೂಪಕ ಕಿಚ್ಚ ಸುದೀಪ್ ಮೆಚ್ಚುಗೆಗೂ ಪಾತ್ರರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಪರವಾಗಿ ಮತ ಹಾಕಿ ಅಂತಾ ಸ್ಯಾಂಡಲ್ ವುಡ್ ಕ್ಯೂಟ್ ಬ್ಯೂಟಿ ಅಮೂಲ್ಯ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. 

ಚೆಲುವಿನ ಚಿತ್ತಾರ ಚೆಲುವೆ ನಟಿ ಅಮೂಲ್ಯ ಅವರು ಭವ್ಯಾ ಗೌಡ ಬೆಂಬಲಿಸಿ ಅಂತಾ ಮನವಿ ಮಾಡಿದ್ದೇ ತಡ ನಟಿ ಅಮೂಲ್ಯ ಮತ್ತು ಬಿಗ್​ಬಾಸ್ ಸ್ಪರ್ಧಿ ಭವ್ಯಾ ಗೌಡ ನಡುವಿನ ಸಂಬಂಧ ಏನು? ಅಮೂಲ್ಯ ಏಕೆ ಭವ್ಯಾ ಗೌಡಗೆ ಸಪೋರ್ಟ್ ಮಾಡಿ ಅಂತಾ ಮನವಿ ಮಾಡಿದರು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡವು. ಈಗ ಸ್ವತಃ ಭವ್ಯಾ ಗೌಡ ತಮ್ಮ ಮತ್ತು ಅಮೂಲ್ಯ ನಡುವಿನ ಸಂಬಂಧ ಏನು ಮತ್ತು ಅವರು ಏಕೆ ತನ್ನ ಪರವಾಗಿ ಮನವಿ ಮಾಡಿದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ- ದರ್ಶನ್ ರಿಲೀಸ್ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಲಕ್ಷ್ಮಿ..! ಫೋಟೋ ವೈರಲ್

ಅಮೂಲ್ಯ ನನಗೆ ಅತ್ತಿಗೆಯಾಗಬೇಕು. ಅಮೂಲ್ಯ ಅವರ ಪತಿ ಜಗದೀಶ್ ನನ್ನ ದೊಡ್ಡಪ್ಪನ ಮಗ. ಒಬ್ಬ ಅತ್ತಿಗೆಯಾಗಿ ಅಮೂಲ್ಯ ಅವರು ತುಂಬಾ ಸಪೋರ್ಟಿವ್ ಆಗಿದ್ದಾರೆ. ನನಗೆ ಏನೇ ಅನುಮಾನ ಇದ್ದರೂ, ಗೊಂದಲ ಇದ್ದರೂ ಅತ್ತಿಗೆ ಅಮೂಲ್ಯ ಬಳಿ ಹೇಳಿಕೊಳ್ಳುತ್ತೇನೆ. ಅವರು ನನಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ.  ಅಣ್ಣ ಜಗದೀಶ್ ಕೂಡ ನನಗೆ ಚೆನ್ನಾಗಿ ಸಪೋರ್ಟ್ ಮಾಡುತ್ತಾರೆ ಎಂದು ಭವ್ಯಾ ಗೌಡ ಹೇಳಿಕೊಂಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News