ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ :ಹಿರಿಯ ನಟಿ ತಾರಾ

ಭಾರತೀಯ ಚಿತ್ರರಂಗದ ದಿಗ್ಗಜರಾದ ದಿವಂಗತ ಪುಟ್ಟಣ್ಣ ಕಣಗಾಲ್ ಜಯಂತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು. 

Written by - Ranjitha R K | Last Updated : Dec 3, 2024, 03:03 PM IST
  • ದಿವಂಗತ ಪುಟ್ಟಣ್ಣ ಕಣಗಾಲ್ ಜಯಂತಿ ಕಾರ್ಯಕ್ರಮ
  • ನಿರ್ದೇಶಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಆಚರಣೆ
  • ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ
ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ :ಹಿರಿಯ ನಟಿ ತಾರಾ title=

ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರಾದ ದಿವಂಗತ ಪುಟ್ಟಣ್ಣ ಕಣಗಾಲ್ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರ ಕುಟುಂಬಸ್ಥರಿಗೆ ಉಚಿತ  ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯನಟಿ ತಾರ ಅನುರಾಧ ಮಾತನಾಡಿ, ಇಲ್ಲಿ‌ ಕೆಟ್ಟ ನಿರ್ದೇಶಕರು, ಒಳ್ಳೆ ನಿರ್ದೇಶಕರು ಇಲ್ಲ. ಎಲ್ಲರೂ‌ ಒಂದಲ್ಲ ಒಂದು ರೀತಿಯಲ್ಲಿ ಪಾಠ ಹೇಳಿಕೊಟ್ಟವರೆ.ನನಗೆ ನಿರ್ಮಾಪಕ ಅಪ್ಪನಂತಿದ್ದರೆ, ನಿರ್ದೇಶಕ  ಅಮ್ಮನಿದ್ದಂತೆ ಎಂದು ಹೇಳಿದ್ದಾರೆ. ವಿಶ್ವನಾಥ್ ನೇತೃತ್ವದಲ್ಲಿ ನಿರ್ದೇಶಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ನಾನು ಎಂದಿಗೂ ಸಂಘದ ಜೊತೆ ಇದ್ದೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಇದನ್ನೂ ಓದಿ : ಭಕ್ತ ಪ್ರಹ್ಲಾದ ಚಿತ್ರಕ್ಕೆ ನಟ ಪುನೀತ್‌ರಾಜ್‌ ಕುಮಾರ್‌ ಅವರು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋಲ್ಲ!!

ಇನ್ನು ಉಚಿತ ಆರೋಗ್ಯ ಶಿಬಿರಕ್ಕೆ ಹಿರಿಯ ನಿರ್ದೇಶಕರಾದ ಸಾಯಿಪ್ರಕಾಶ್ ಚಾಲನೆ ನೀಡಿದರು. ಇದೇ ಸಮಾರಂಭದಲ್ಲಿ  ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ ವಿ ಚಂದ್ರಶೇಖರ್, ಹಳೆಯ ಪದ್ದತಿಯನ್ನು‌ ಬದಲಾಯಿಸಲು‌ ಹೊಸ ಯುಗದಲ್ಲಿ ಆಗಲ್ಲ. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ನಿರ್ಮಾಪಕರು ಎರಡು ದಿನ ಚಿತ್ರಮಂದಿರಗಳಲ್ಲಿ ಚಿತ್ರ ಓಡಿಸಿ ನಂತರ ದೃಶ್ಯಕ್ಕೆ ಕತ್ತರಿ ಹಾಕುತ್ತಾರೆ. ಆದರೆ ಅದಾಗಲೇ ಚಿತ್ರದ ಬಗ್ಗೆ ಹೊರಗಡೆ ಬಾಯಿಯಿಂದ ಬಾಯಿಗೆ ತಲುಪಿರುತ್ತದೆ. ಅಂತಹ ಕೆಲಸ ನಂತರ ಮಾಡುವ ಬದಲು ಮೊದಲೇ ಎರಡು ಬಾರಿ ಚಿತ್ರ ನೋಡಿ  ಸರಿಯಾಗಿ ಎಡಿಟ್  ಮಾಡಿ ಚಿತ್ರಮಂದಿರಕ್ಕೆ ಚಿತ್ರ ತನ್ನಿ ಎಂದು ನಿರ್ದೇಶಕರಿಗೆ ಸಲಹೆ ನೀಡಿದರು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲಾ ಗಣ್ಯರು ದೀಪ ಬೆಳಗಿಸಿ ಪುಟ್ಟಣ್ಣನವರ ಬಾವ ಚಿತ್ರಕ್ಕೆ ಪುಷ್ಪ ನಮನ ಮಾಡಿದರು.ನಂತರ ಪುಟ್ಟಣ್ಣ ಕಣಗಾಲ್ ಅವರ ಮಗಳಾದ ಶ್ರೀಮತಿ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಸಂಘದ ಉಪಾಧ್ಯಕ್ಷರಾದ ಜೋಸೈಮನ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರೆ, ಸಂಘದ ಕಾರ್ಯದರ್ಶಿಗಳಾದ ಸೆಬಾಸ್ಟಿನ್ ಡೇವಿಡ್ ಸ್ವಾಗತ ಭಾಷಣ, ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರು ಪ್ರಾಸ್ತಾವಿಕ ನುಡಿ ಮತ್ತು ಸಂಘದ ಮತ್ತೊಬ್ಬ ಉಪಾಧ್ಯಕ್ಷರಾದ ಜಗದೀಶ್ ಕೊಪ್ಪರವರು ವಂದನಾರ್ಪಣೆ ಮಾಡಿದರು. ಸಂಘದ ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣನವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರೆ ಸಂಘದ ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ  ಸಾಯಿಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮರಡಿಹಳ್ಳಿ ನಾಗಚಂದ್ರ, ಟಾಪ್ ಸ್ಟಾರ್ ರೇಣು ಕುಮಾರ್, ಎಸ್ ಆರ್ ಪ್ರಮೋದ್, ಅನುತೇಜಾ ಮತ್ತು ನಟರಾಜ್ ಅವರು ಸಹಕಾರ ನೀಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News