ಸಿನಿಮಾದಲ್ಲಿ ತನಗೆ ತಾಯಿಯಾಗಿ ನಟಿಸಿದ್ದ ಖ್ಯಾತ ನಟಿಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾಗಿದ್ದ ಈ ನಟ! ಆಕೆಗಾಗಿ ಪ್ರಾಣವನ್ನೆ ಪಣಕ್ಕಿಟ್ಟಿದ್ದ, ಪ್ರೀತಿಯಂದ್ರೆ ಇದು ಕಣ್ರಿ!

Sunil Dutt: ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಬಾಲನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಈ ನಾಯಕ, ಸ್ಟಾರ್ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ತಂದೆ-ತಾಯಿ ಸುನಿಲ್ ದತ್ ಮತ್ತು ನರ್ಗಿಸ್ ಕೂಡ ಒಳ್ಳೆಯ ನಟರು.   

Written by - Zee Kannada News Desk | Last Updated : Feb 18, 2025, 09:11 PM IST
  • ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.
  • ಸಂಜಯ್ ದತ್ ಅವರ ಪೋಷಕರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
  • ಆ ಚಿತ್ರದ ನಿರ್ಮಾಣದ ಸಮಯದಲ್ಲಿ ಅವರ ಸ್ನೇಹ ಬೆಳೆದು ಕೊನೆಗೆ ಪ್ರೀತಿಯಾಗಿ ಬದಲಾಯಿತು.
ಸಿನಿಮಾದಲ್ಲಿ ತನಗೆ ತಾಯಿಯಾಗಿ ನಟಿಸಿದ್ದ ಖ್ಯಾತ ನಟಿಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾಗಿದ್ದ ಈ ನಟ! ಆಕೆಗಾಗಿ ಪ್ರಾಣವನ್ನೆ ಪಣಕ್ಕಿಟ್ಟಿದ್ದ, ಪ್ರೀತಿಯಂದ್ರೆ ಇದು ಕಣ್ರಿ! title=

Sunil Dutt: ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಬಾಲನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಈ ನಾಯಕ, ಸ್ಟಾರ್ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ತಂದೆ-ತಾಯಿ ಸುನಿಲ್ ದತ್ ಮತ್ತು ನರ್ಗಿಸ್ ಕೂಡ ಒಳ್ಳೆಯ ನಟರು. 

ಇತ್ತೀಚೆಗೆ, ಸಂಜಯ್ ದತ್ ಅವರ ಪೋಷಕರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇವರಿಬ್ಬರದ್ದು ಪ್ರೇಮ ವಿವಾಹ, ಸುನಿಲ್ ದತ್ ನರ್ಗಿಸ್ ಅವರನ್ನು ಪ್ರೀತಿಸಿ ಮದುವೆಯಾದರು.

ಸುನಿಲ್‌ ದತ್‌ ಹಾಗೂ ನರ್ಗಿಸ್‌ ಅನೇಕ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು, ಇಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು, ಒಬ್ಬರನ್ನೊಬ್ಬರ ಪರಸ್ಪರ ಪ್ರೀತಿಸಿದ ಈ ಜೋಡಿ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಅವರ ಆಸೆಯಂತೆಯೇ ಮದುವೆ ಕUಡ ಆದರು. ನರ್ಗಿಸ್‌ ಹಾಗೂ ಸುನಿಲ್‌ ದತ್‌ ಅವರು ಜೋಡಿಯಾಗಿ ಅಷ್ಟೆ ಅಲ್ಲದೆ ತಾಯಿ ಮಗನಾಗಿಯೂ ಸಿನಿಮಾದಲ್ಲಿ ತೆರೆ ಹಂಚಿಕೊಂಡವರು. ಅಷ್ಟೇ ಅಲ್ಲ, ಆ ಚಿತ್ರದ ನಿರ್ಮಾಣದ ಸಮಯದಲ್ಲಿ ಅವರ ಸ್ನೇಹ ಬೆಳೆದು ಕೊನೆಗೆ ಪ್ರೀತಿಯಾಗಿ ಬದಲಾಯಿತು.

ಈ ಸಿನಿಮಾದಲ್ಲಿ ತಾಯಿ ಮಗನಾಗಿ ನಟಿಸಿದ ನಂತರ ಇವರಿಬ್ಬರ ಸ್ನೇಹ, ಪ್ರೀತಿಗೆ ತಿರುಗಿತ್ತು, ನಂತರ ಹಲವು ದಿನಗಳ ಕಾಲ ಡೇಟಿಂಗ್‌ ಮಾಡಿದ್ದ ಇವರು, ಎಲ್ಲರನ್ನು ಒಪ್ಪಿಸಿ, ಕುಟುಂಬ ಹಾಗೂ ಸ್ನೇಹಿತರ ಸಮ್ಮುಕದಲ್ಲಿ ಮದುವೆಯಾಗಿದ್ದರು. ಈ ಜೋಡಿಯ ಮದುವೆ ಬಾಲಿವುಡ್‌ನಲ್ಲಿ ಚರ್ಚೆಯ ಬಿಸಿ ವುಚಾರವಾಯಿತು. ಆದಾಗ್ಯೂ, ಅವರು ಮದರ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿರುವಾಗ, ವೆಲ್ಡಿಂಗ್ ಯಂತ್ರದಿಂದಾಗಿ ಸೆಟ್‌ನಲ್ಲಿ ಸಣ್ಣ ಬೆಂಕಿ ಅವಘಡ ಸಂಭವಿಸಿತು. ನಟಿ ನರ್ಗಿಸ್ ಬೆಂಕಿಯಲ್ಲಿ ಸಿಲುಕಿಕೊಂಡರು, ಮತ್ತು ಸುನಿಲ್ ದತ್ ಅವರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ಇದಲ್ಲದೆ, ಪತ್ನಿಯನ್ನು ಉಳಿಸಲು ಹೋದ ಸುನಿಲ್‌ ಅವರಿಗೆ ಅನೇಕ ಗಾಯಗಳಾದವು, ಮುಖ ಸುಟ್ಟು ಹೋಗಿತ್ತು. ತನ್ನ ಪ್ರಾಣವನ್ನು ಕಾಪಾಡಿದ್ದ ಸುನಿಲ್‌ ಅವರನ್ನು ನರ್ಗಿಸ್‌ ಹತ್ತಿರವಿದ್ದು ನೋಡಿಕೊಂಡಿದ್ದರು. ಸದ್ಯ ಇವರಿಬ್ಬರ ಈ ಅದ್ಭುತ ಹಾಗೂ ನಿಶ್ಕಲ್ಮಷ ಪ್ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್

Trending News