ಅಂದು ಪ್ಲಾಪ್‌ ಸಿನಿಮಾ​​... ಇಂದು ರಿ-ರಿಲೀಸ್​​ನಲ್ಲಿ ಸೂಪರ್​ಹಿಟ್! ಕೇವಲ 2 ದಿನದಲ್ಲಿ 9 ವರ್ಷ ಹಳೆಯ ದಾಖಲೆಗಳನ್ನೇ ಮುರಿದ ಆ ಸಿನಿಮಾ ಯಾವುದು ಗೊತ್ತಾ?

Sanam Teri Kasam Re-Release Box Office:ಈ ಚಿತ್ರವನ್ನು ಫೆಬ್ರವರಿ 7 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ 2 ದಿನಕ್ಕೆ ಸನಮ್ ತೇರಿ ಕಸಮ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಲ್ಲದೆ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ.

Written by - Bhavishya Shetty | Last Updated : Feb 9, 2025, 08:08 PM IST
    • 2016 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್‌ ಸಿನಿಮಾ ʼಸನಮ್ ತೇರಿ ಕಸಮ್
    • ಫೆಬ್ರವರಿ 7ರಂದು ಮತ್ತೆ ದೊಡ್ಡ ಪರದೆಯ ಮೇಲೆ ಮರು-ಬಿಡುಗಡೆ
    • ಬಿಡುಗಡೆಯಾದ 2 ದಿನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ
ಅಂದು ಪ್ಲಾಪ್‌ ಸಿನಿಮಾ​​... ಇಂದು ರಿ-ರಿಲೀಸ್​​ನಲ್ಲಿ ಸೂಪರ್​ಹಿಟ್! ಕೇವಲ 2 ದಿನದಲ್ಲಿ 9 ವರ್ಷ ಹಳೆಯ ದಾಖಲೆಗಳನ್ನೇ ಮುರಿದ ಆ ಸಿನಿಮಾ ಯಾವುದು ಗೊತ್ತಾ?  title=
Sanam Teri Kasam

Sanam Teri Kasam Re-Release Box Office: 2016 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್‌ ಸಿನಿಮಾ ʼಸನಮ್ ತೇರಿ ಕಸಮ್ʼ, ಫೆಬ್ರವರಿ 7ರಂದು ಮತ್ತೆ ದೊಡ್ಡ ಪರದೆಯ ಮೇಲೆ ಮರು-ಬಿಡುಗಡೆಯಾಗಿದೆ. 2016 ರಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಪ್ಲಾಪ್‌ ಆಗಿತ್ತು. ಆದರೆ ಈಗ ಮರುಬಿಡುಗಡೆಯಾದ ಭಾರೀ ಸದ್ದು ಮಾಡುತ್ತಿದೆ. ಇಷ್ಟೇ ಅಲ್ಲ, ಈ ಚಿತ್ರ ತನ್ನದೇ ಆದ ದಾಖಲೆಗಳನ್ನು ಮುರಿದಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.. 8,650 ರೂ.ಗೆ ಇಳಿದ 1 ಗ್ರಾಂ ಬಂಗಾರದ ದರ! ಇಂದು 10 ಗ್ರಾಂ ಆಭರಣ ಚಿನ್ನದ ದರ ಎಷ್ಟಾಗಿದೆ ನೋಡಿ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್
ಈ ಚಿತ್ರವನ್ನು ಫೆಬ್ರವರಿ 7 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ 2 ದಿನಕ್ಕೆ ಸನಮ್ ತೇರಿ ಕಸಮ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಲ್ಲದೆ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಮೌರಾ ಹೊಕೇನ್ ಮತ್ತು ನಟ ಹರ್ಷವರ್ಧನ್ ರಾಣೆ ಕೂಡ ಚಿತ್ರದ ಯಶಸ್ಸನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ದಾಖಲೆಯ ಗಳಿಕೆ
ಮೊದಲ ದಿನ ಈ ಚಿತ್ರ 5.14 ಕೋಟಿ ರೂ.ಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ತೆರೆಕಂಡಿತು. ಈಗ ಎರಡನೇ ದಿನವೂ ಅದ್ಭುತವಾದ ಕಲೆಕ್ಷನ್ ಮಾಡಿದೆ. ಮಾಹಿತಿಯ ಪ್ರಕಾರ, ಸನಮ್ ತೇರಿ ಕಸಮ್ ಎರಡನೇ ದಿನ ಅಂದರೆ ಶನಿವಾರ 6.22 ಕೋಟಿ ರೂ.ಗಳನ್ನು ಕೊಳ್ಳೆಹೊಡೆದಿದೆ. ಈ ನಿಟ್ಟಿನಲ್ಲಿ, ಚಿತ್ರದ ಎರಡು ದಿನಗಳ ಕಲೆಕ್ಷನ್ ಸುಮಾರು 11.36 ಕೋಟಿ ರೂ.ಗಳಾಗಿದೆ.

ನಟ ಹರ್ಷವರ್ಧನ್ ರಾಣೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, "ಈ ಚಿತ್ರವು ತನ್ನದೇ ಆದ ದಾಖಲೆಯನ್ನು ಮುರಿದಿದೆ. ಏಕೆಂದರೆ 9 ವರ್ಷಗಳ ಹಿಂದೆ ಈ ಚಿತ್ರವು 9 ಕೋಟಿ ರೂ. ಕಲೆಕ್ಷನ್ ಅನ್ನು ಹೊಂದಿತ್ತು. ಇಷ್ಟೇ ಅಲ್ಲ, ಈ ಚಿತ್ರವು ಹೊಸದಾಗಿ ಬಿಡುಗಡೆಯಾದ Loveyapa ಬಾಕ್ಸ್ ಆಫೀಸ್ ಕಲೆಕ್ಷನ್ ಗಳನ್ನು ಸಹ ಹಿಂದಿಕ್ಕಿದೆ" ಎಂದಿದ್ದಾರೆ.

ಇದನ್ನೂ ಓದಿ: ಮಿಥುನ ರಾಶಿಗೆ ಗುರುವಿನ ಸಂಚಾರ: ಈ ಮೂರು ರಾಶಿಗಳಿಗೆ ಹಠಾತ್‌ ಧನಲಾಭ, ಅದೃಷ್ಟದ ಬೆಂಬಲದಿಂದ ಬದಲಾಗಲಿದೆ ಲಕ್!

ಚಿತ್ರದ ಬಗ್ಗೆ ಹೇಳುವುದಾದರೆ, ದೀಪಕ್ ಮುಕುಟ್ ಸನಮ್ ತೇರಿ ಕಸಮ್ ಚಿತ್ರವನ್ನು ನಿರ್ಮಿಸಿದ್ದಾರೆ. ಇದರ ಬಜೆಟ್ 25 ಕೋಟಿ ರೂ.ಗಳಾಗಿತ್ತು. ಹರ್ಷವರ್ಧನ್ ರಾಣೆ ಮತ್ತು ಮೌರಾ ಹೊಕೇನ್ ಅವರಲ್ಲದೆ, ಅನುರಾಗ್ ಸಿನ್ಹಾ, ಮನಶ್ ಚೌಧರಿ, ಮುರಳಿ ಶರ್ಮಾ ಮತ್ತು ಸುದೇಶ್ ಬೆರ್ರಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನಮ್ ತೇರಿ ಕಸಮ್ ಮೌರಾ ಹೊಕೇನ್ ಅವರ ಮೊದಲ ಬಾಲಿವುಡ್ ಚಿತ್ರ ಮತ್ತು ಈ ಚಿತ್ರದ ಮೂಲಕವೇ ಅವರಿಗೆ ಮನ್ನಣೆ ಸಿಕ್ಕಿತು. ಆ ಚಿತ್ರದಲ್ಲಿ ಅವರು ಸರಸ್ವತಿ ಅಕಾ ಸರು ಪಾತ್ರವನ್ನು ನಿರ್ವಹಿಸಿದರು. ಇತ್ತೀಚೆಗೆ, ನಟಿ ತನ್ನ ಗೆಳೆಯ ಅಮೀರ್ ಗಿಲಾನಿ ಅವರನ್ನು ವಿವಾಹವಾದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News