ಬೆಂಗಳೂರು: ಟ್ರೇಲರ್ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದಿರುವ ‘ವ್ಹೀಲ್ ಚೇರ್ ರೋಮಿಯೋ’ ಮೇ 27ಕ್ಕೆ ರಿಲೀಸ್ ಆಗಲಿದೆ. ವಿಲಕಚೇತನ ವ್ಯಕ್ತಿಯೊಬ್ಬ ವೇಶ್ಯೆಯ ಪ್ರೀತಿಯಲ್ಲಿ ಬೀಳುವ ಸೂಕ್ಷ್ಮ ಎಳೆಯ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಗಸ್ತ್ಯ ಬ್ಯಾನರ್‍ನಡಿ ವೆಂಕಟಾಚಲಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಟ್ರೇಲರ್ ಮೆಚ್ಚಿದ ಶಿವಣ್ಣ
‘ವ್ಹೀಲ್ ಚೇರ್ ರೋಮಿಯೋ’ ಸಿನಿಮಾದ ಟ್ರೇಲರ್ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್ ನೋಡಿ ನನಗೆ ಖುಷಿಯಾಯಿತು. ಡೈಲಾಗ್ಸ್ ನನಗೆ ಇಷ್ಟವಾಯಿತು. ಚಿತ್ರದ ಕಥೆ ತುಂಬಾ ಇಂಟರಸ್ಟಿಂಗ್ ಆಗಿದೆ. ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಕಾಣಲಿ. ಚಿತ್ರತಂಡದ ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದು ಶಿವಣ್ಣ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ʼವಿಕ್ರಾಂತ್ ರೋಣಾʼ ನೋಡಿದ ರಾಮ್‌ಗೋಪಾಲ್ ವರ್ಮಾ ಸಿನಿರಂಗಕ್ಕೆ ಎಚ್ಚರಿಕೆ ಕೊಟ್ಟಿದ್ಯಾಕೆ?
ಕಳೆದ ವರ್ಷ ‘ವ್ಹೀಲ್ ಚೇರ್ ರೋಮಿಯೋ’ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ವಿಶೇಷ ಕಥೆಯನ್ನು ಹೊಂದಿರುವ ಈ ಸಿನಿಮಾದ 3 ನಿಮಿಷದ ಟ್ರೇಲರ್ ಸಂಭಾಷಣೆ ಮೂಲಕ ಗಮನ ಸೆಳೆದಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್‍ನ್ನು 4.41ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್ ನೋಡಿ ಫಿದಾ ಆಗಿರುವ ಸಿನಿಪ್ರೇಮಿಗಳು ಇದೀಗ ಸಿನಿಮಾ ನೋಡಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ತಮ್ಮ ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆ ನೋಡಿ ನಿರ್ದೇಶಕ ನಟರಾಜ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಚಂದನವನದ ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ನಟರಾಜ್ ಅವರು ಜೂಮ್, ಆರೆಂಜ್, ರೋಮಿಯೋ ಸೇರಿ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಅಪಾರ ಅನುಭವ ಹೊಂದಿರುವ ಅವರು ತುಂಬಾ ಶ‍್ರಮವಹಿಸಿ ‘ವ್ಹೀಲ್ ಚೇರ್ ರೋಮಿಯೋ’ ಸಿನಿಮಾ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು ವಸಿಷ್ಠ ಎಂಟ್ರಿ.. ʻLove..ಲಿʼ ರಾ ಲುಕ್‌ಗೆ ಫ್ಯಾನ್ಸ್ ಫಿದಾ!
ಕಾಲು ಕಳೆದುಕೊಂಡ ವ್ಹೀಲ್ ಚೇರ್ ರೋಮಿಯೋ ಆಗಿ ಹೊಸಮುಖ ರಾಮ್ ಚೇತನ್ ಮತ್ತು ವೇಶ್ಯಯ ಪಾತ್ರದಲ್ಲಿ ನಟಿ ಮಯೂರಿ ಕ್ಯಾತರಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡಿದ್ದು, ಸಂತೋಷ್ ಪಾಂಡಿ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಗುರು ಕಶ್ಯಪ್ ಅವರು ಬರೆದಿರುವ ಸಂಭಾಷಣೆಯು ‘ವ್ಹೀಲ್ ಚೇರ್ ರೋಮಿಯೋ’ ಪ್ರೇಕ್ಷಕರಿಗೆ ಇಷ್ಟವಾಗುಂತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.