ಟೀಂ ಇಂಡಿಯಾದ ಸ್ಟಾರ್‌ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..?

Isha Sharvani: ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್‌ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್‌ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ  ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್‌ ಮಾಡಿ ಬ್ರೇಕ್‌ ಅಪ್‌ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು.  

Written by - Zee Kannada News Desk | Last Updated : Dec 21, 2024, 11:37 AM IST
  • ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್‌ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ.
  • ಜಹೀರ್ ಖಾನ್ ಮತ್ತು ಇಶಾ ಶರ್ವಾಣಿ ಮೊದಲು ಭಾರತೀಯ ಕ್ರಿಕೆಟ್ ತಂಡದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು.
  • ನಟಿ ಇಶಾ ಶರ್ವಾನಿ ಅವರು ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಜಹೀರ್‌ ಖಾನ್‌ ಅವರೊಂದಿಗೆ ಸಂಬಂಧ ಹೊಂದಿದ್ದರು.
ಟೀಂ ಇಂಡಿಯಾದ ಸ್ಟಾರ್‌ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..?  title=

Isha Sharvani: ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್‌ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್‌ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ  ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್‌ ಮಾಡಿ ಬ್ರೇಕ್‌ ಅಪ್‌ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು.

ಇಶಾ ಶರ್ವಾನಿ, ಬಾಲಿವುಡ್‌ನಲ್ಲಿ ಒಳ್ಳೆ ಹೆಸರು ಹಾಗೂ ಖ್ಯಾತಿ ಪಡೆದಿದ್ದ ನಟಿ. ತಮ್ಮ ನಟನೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ನಟಿ ನಂತರ ಪ್ರೇಕ್ಷಕರ ನಿರೀಕ್ಷೆಯಂತೆ ಹೆಸರು ಮಾಡಲಿಲ್ಲ. ಅದಕ್ಕೆ ಕಾರಣ ಅವರ ವೈಯಕ್ತಿಕ ಜೀವನದಲ್ಲಿ ಎದುರಾದ ಕೆಲವೊಂದು ಸಮಸ್ಯೆಗಳು. 

ಹೌದು, ನಟಿ ಇಶಾ ಶರ್ವಾನಿ ಅವರು ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಜಹೀರ್‌ ಖಾನ್‌ ಅವರೊಂದಿಗೆ ಸಂಬಂಧ ಹೊಂದಿದ್ದರು. ಈ ಸುದ್ದಿ ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಾರ್ವಜನಿಕವಾಗಿ ಜೋಡಿ ತಮ್ಮ ಡೇಟಿಂಗ್‌ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿಲ್ಲವಾದರೂ, ಇವರಿಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಂಡು ಈ ಸುದ್ದಿಗೆ ಪುಷ್ಠಿ ನೀಡುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಜಹೀರ್ ಖಾನ್ ಮತ್ತು ಇಶಾ ಶರ್ವಾಣಿ ಮೊದಲು ಭಾರತೀಯ ಕ್ರಿಕೆಟ್ ತಂಡದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. 

ಇಶಾ ಶರ್ವಾನಿ ಹಾಗೂ ಜಾಹೀರ್‌ ಖಾನ್‌ ಇಬ್ಬರು ಕೂಡ ಎಂಟು ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು ಎಂದು ಹೇಳಲಾಗುತ್ತದೆ. ಈ ಜೋಡಿ ನಂತರ 2012 ರಲ್ಲಿ ಬ್ರೇಕ್‌ ಅಪ್‌ ಮಾಡಿಕೊಂಡು ದೂರವಾದರು. ನಂತರ ಜಾಹೀರ್‌ ಖಾನ್‌ ಗುಡಿ ಪಾಡ್ವಾ ಎಂಬುವವರನ್ನು ಮದುವೆಯಾದರು. ಆದರೆ, ನಟಿ ಮಾತ್ರ ಇಂದಿಗೂ ಕೂಡ ಮದುವೆಯಾಗದೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಇಷ್ಟು ದಿನ ಸೈಲೆಂಟ್‌ ಆಗಿದ್ದ ಈ ನಟಿಯ ಹೆಸರು ಮತ್ತೆ ಮುಂಚೂಣಿಗೆ ಬರುತ್ತಿದೆ. ನಾಯಕ ನಟನೊಬ್ಬ ಸಿನಿಮಾದಲ್ಲಿ ಚ್ಯಾನ್ಸ್‌ ಬೇಕೆಂದರೆ ತನ್ನ ಜೊತೆ ಮಲಗಬೇಕು ಎಂದು ಕೇಳಿರುವುದನ್ನು ಇಶಾ ಇದೀಗ ಬಹಿರಂಗ ಪಡಿಸಿದ್ದು, ಈ ಸುದ್ದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಸಿದ್ಧಾರ್ಥ್ ಕಣ್ಣನ್ ಅವರ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಈ ಹೇಳಿಕೆಯನ್ನು ನೀಡಿದ್ದು ಸದ್ಯ ಈ ವಿಚಾರ ಬಿ ಟೌನ್‌ನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News