ಸ್ಟಾರ್‌ ನಟರ ಮನೆಯಲ್ಲಿ ಅಲ್ಲೋಲ ಕಲ್ಲೋಲ... ತಂದೆ ಮಗನ ನಡುವೆ ಮಾರಾ ಮಾರಿ! ರಾತ್ರೋ ರಾತ್ರಿ ಪೋಲಿಸ್‌ ಠಾಣಾ ಮೆಟ್ಟಿಲೇರಿದೆ ಕುಟುಂಬ

Manchu manoj: ಟಾಲಿವುಡ್‌ನಲ್ಲಿ ತಮ್ಮ ನಟನೆಯ ಮೂಲಕ ಅಷ್ಟೆ ಅಲ್ಲದೆ ಒಳ್ಳೆ ಸಿನಿಮಾಗಳ ಮೂಲಕ ಜನರ ಮನ ಗೆದ್ದಿರುವ ಮೋಹನ್‌ ಬಾಬು ಅವರ ಕುಟುಂಬದಲ್ಲಿ ಮನಸ್ಥಾಪ ಶುರುವಾಗಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಇದೀಗ ಪೋಲಿಸ್‌ ಠಾಣಾ ಮೆಟ್ಟಿಲು ಏರುವಂತೆ ಮಾಡಿದೆ. ತಡ ರಾತ್ರಿ ಆದರೂ ಕೂಡ ಮೋಹನ್‌ ಬಾಬು ಅವರ ಕುಟುಂಬ ದೂರು ದಾಕಲಿಸುವ ಮೂಕ ವಾದ ವಿವಾದಗಳನ್ನು ಸೃಷ್ಟಿಸಿದೆ.  

Written by - Zee Kannada News Desk | Last Updated : Dec 11, 2024, 08:32 AM IST
  • ಟನೆಯ ಮೂಲಕ ಅಷ್ಟೆ ಅಲ್ಲದೆ ಒಳ್ಳೆ ಸಿನಿಮಾಗಳ ಮೂಲಕ ಜನರ ಮನ ಗೆದ್ದಿರುವ ಮೋಹನ್‌ ಬಾಬು ಅವರ ಕುಟುಂಬದಲ್ಲಿ ಮನಸ್ಥಾಪ ಶುರುವಾಗಿದೆ.
  • ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಇದೀಗ ಪೋಲಿಸ್‌ ಠಾಣಾ ಮೆಟ್ಟಿಲು ಏರುವಂತೆ ಮಾಡಿದೆ.
ಸ್ಟಾರ್‌ ನಟರ ಮನೆಯಲ್ಲಿ ಅಲ್ಲೋಲ ಕಲ್ಲೋಲ... ತಂದೆ ಮಗನ ನಡುವೆ ಮಾರಾ ಮಾರಿ! ರಾತ್ರೋ ರಾತ್ರಿ ಪೋಲಿಸ್‌ ಠಾಣಾ ಮೆಟ್ಟಿಲೇರಿದೆ ಕುಟುಂಬ title=

Manchu manoj: ಟಾಲಿವುಡ್‌ನಲ್ಲಿ ತಮ್ಮ ನಟನೆಯ ಮೂಲಕ ಅಷ್ಟೆ ಅಲ್ಲದೆ ಒಳ್ಳೆ ಸಿನಿಮಾಗಳ ಮೂಲಕ ಜನರ ಮನ ಗೆದ್ದಿರುವ ಮೋಹನ್‌ ಬಾಬು ಅವರ ಕುಟುಂಬದಲ್ಲಿ ಮನಸ್ಥಾಪ ಶುರುವಾಗಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಇದೀಗ ಪೋಲಿಸ್‌ ಠಾಣಾ ಮೆಟ್ಟಿಲು ಏರುವಂತೆ ಮಾಡಿದೆ. ತಡ ರಾತ್ರಿ ಆದರೂ ಕೂಡ ಮೋಹನ್‌ ಬಾಬು ಅವರ ಕುಟುಂಬ ದೂರು ದಾಕಲಿಸುವ ಮೂಕ ವಾದ ವಿವಾದಗಳನ್ನು ಸೃಷ್ಟಿಸಿದೆ.

ಒಂದು ವಾರದ ಹಿಂದೆ ಶುರುವಾದ ಈ ಜಗಳ, ಇದೀಗ ತಾರಕಕ್ಕೇರಿದೆ. ಮನೆಯ ವಿಚಾರಕ್ಕೆ ಶುರುವಾದ ಈ ಜಗಳದಿಂದಾಗಿ ಇದೀ ಇಡೀ ಕುಟುಂಬ ಪೋಲಿಸ್‌ ಠಾಣೆಯ ಮೆಟ್ಟಿಲು ಏರುವ ಪರಿಸ್ಥಿತಿ ಎದುರಾಗಿದೆ. ಮಂಚು ಮನೋಜ್‌ ಅವರು ಮೋಹನ್‌ ಬಾಬು ಅವರ ಕಿರಿಯ ಪುತ್ರು, ಇವರು ಕೂಡ ಟಾಲಿವುಡ್‌ನಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ.

ಹೀಗಿರುವಾಗ ಒಂದು ವಾರದ ಹಿಂದೆ ಮಂಚು ಮನೋಜ್‌ ಅವರು ವಾಸಿಸುತ್ತಿರುವ ಮನೆಯ ಕಾರಣಕ್ಕಾಗಿ ಮಂಚು ಮನೋಜ್‌ ಹಾಗೂ ಮೋಹನ್‌ ಬಾಬು ಅವರ ವಿರುದ್ಧ ಗಲಾಟೆ ಶುರುವಾಗಿದೆ. ಮಂಚು ಮನೋಜ್‌ ಅವರು ಎಸ್ಟೇಟ್‌ನಲ್ಲಿರುವ ಮನೆಯಲ್ಲಿ ಒಂದು ವರ್ಷದಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇನೆ, ಆದರೆ ನನ್ನ ತಂದೆ ಅವರ ಅಂಗರಕ್ಷಕರನ್ನು ಕಳುಹಿಸಿ ಮನೆಯಲ್ಲಿ ನನ್ನ ಮೇಲೆ ಹಲ್ಲೆ ನಡೆಸುವಂತೆ ಮಾಡಿದ್ದಾರೆ. ಡಾಕ್ಟರ್‌ ಬಳಿ ಹೋದರೆ ಎಲ್ಲೆಲ್ಲಿ ಇಂಜುರಿ ಆಗಿದೆ ಎಂಬುದು ಗೊತ್ತಾಗುತ್ತದೆ. ನನ್ನ ತಂದೆ ನನ್ನ ಮೇಲೆ ಅಂಗರಕ್ಷಕರನ್ನು ಬಿಟ್ಟು ಒಡೆಸುತ್ತಿದ್ದಾರೆ ಎಂದು ಮೂರು ಪುಟಗಳ ಕಂಪ್ಲೆಂಟ್‌ ಅನ್ನು ದಾಖಲಿಸಿದ್ದಾರೆ. ಮತ್ತೊಂದೆಡೆ ನಾನು ಹಾಗೆ ಮಾಡಲೆ ಇಲ್ಲ, ಮನೆಗೆ ಹೋದರೆ ನನ್ನ ಮಗನಾದ ಮಂಚು ಮನೋಚ್‌ ಅಂಗರಕ್ಷಕರು ನನ್ನ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದಾರೆ. ನನಗೆ ಏನಾದರು ಆದರೆ ಯಾರು ಹೊಣೆ ನನ್ನ ಮೇಲೆ ಕೊಲೆ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ.

ಸದ್ಯ, ಮನೆಯ ಕಾರಣಕ್ಕೆ ಶುರುವಾದ ಈ ಜಗಳ ತಾರಕ್ಕೇರಿದೆ. ಅಪ್ಪ ಮಗ ಕ್ಷುಲ್ಲಕ ಕಾರಣಕ್ಕೆ ಒಡೆದಾಡಿಕೊಂಡಿದ್ದು, ಇದು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೂ, ಇದನ್ನು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೂ ಮೋಹನ್‌ ಬಾಬು ಅವರು ಹಲ್ಲೆ ನಡೆಸಿದ್ದು, ಕೆಲವರಿಗೆ ಗಾಯಗಳಾಗಿದೆ, ಸದ್ಯ ಮೋಹನ್‌ ಬಾಬು ಅವರ ವರ್ತನೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಅಭಿಮಾನಿಗಳು ಅವರ ಮೇಲೆ ಕಿಡಿ ಕಾರುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News