"ಅವರೊಂದಿಗೆ ಮಲಗೋಕೆ ಒಪ್ಪುತ್ತಿಲ್ಲ ಅಂತ ಹೆದರಿಸಿದ್ರು.." ಕೆಜಿಎಫ್ ನಟಿ ಸೆನ್ಸೇಷನಲ್ ಕಾಮೆಂಟ್!

KGF Actress: ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್‌ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..    

Written by - Savita M B | Last Updated : Dec 28, 2024, 06:08 PM IST
  • ಚಿತ್ರರಂಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಶಾಪವಾಗಿ ಪರಿಣಮಿಸಿದೆ
  • ದೊಡ್ಡ ಕುಟುಂಬದಿಂದ ಬಂದವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ.
"ಅವರೊಂದಿಗೆ ಮಲಗೋಕೆ ಒಪ್ಪುತ್ತಿಲ್ಲ ಅಂತ ಹೆದರಿಸಿದ್ರು.." ಕೆಜಿಎಫ್ ನಟಿ ಸೆನ್ಸೇಷನಲ್ ಕಾಮೆಂಟ್!  title=

Raveena tandon: ಚಿತ್ರರಂಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಶಾಪವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ... ಸುಶಾಂತ್ ರಜಪೂತ್ ನಿಧನದ ನಂತರ, ಜನಪ್ರಿಯ ನಟಿ ರವೀನಾ ಟಂಡನ್, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಮತ್ತು ಕಾಸ್ಟಿಂಗ್ ಕೌಚ್‌ನಿಂದ ಪ್ರತಿಭೆ ಇರುವ ನಟರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ.. ದೊಡ್ಡ ಕುಟುಂಬದಿಂದ ಬಂದವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ.. ಎಂದು ಸೆನ್ಸೇಷನಲ್ ಕಾಮೆಂಟ್‌ವೊಂದನ್ನು ಮಾಡಿದ್ದರು..

ಇತ್ತೀಚಗೆ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸಿದ ರವೀನಾ ಟಂಡನ್ "ನನ್ನ ವೃತ್ತಿಜೀವನವನ್ನು ನಾಶಮಾಡಲು ಅನೇಕರು ಪಿತೂರಿಗಳನ್ನು ಮಾಡಿದ್ದಾರೆ.. ಇದರ ಹಿಂದೆ ದೊಡ್ಡ ಕಾರಣವಿದೆ. ಅದೇ ನಾನು ಅವರು ಮಲಗುವ ಕೋಣೆಗೆ ಹೋಗಲಿಲ್ಲ ಎನ್ನುವುದು.. ಕೇವಲ ಹಾಸಿಗೆಯ ಸುಖಕ್ಕಾಗಿ ನಾಯಕಿಯರ ವೃತ್ತಿ ಜೀವನವನ್ನೇ ಹಾಳು ಮಾಡುವ ಬ್ಯಾಚ್ ಬಾಲಿವುಡ್ ನಲ್ಲಿ ಈಗಲೂ ಇದೆ" ಎಂದು ನಟಿ ಚಿತ್ರರಂಗದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.. 

ಇನ್ನು ರವೀನಾ ಟಂಡನ್ ಅವರು ಬಾಲಯ್ಯ ಅವರೊಂದಿಗೆ 'ಬಂಗಾರು ಬುಲ್ಲೋಡು' ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ಇವರು ಅಭಿಮಾನಿಗಳ ಮನ ಕದ್ದಿದ್ದಾರೆ... ಕಳೆದ ವರ್ಷ ಕೇಂದ್ರವು ರವೀನಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 

ರವೀನಾ ಟಂಡನ್ .. ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು.. ಸಲ್ಮಾನ್ ಅಭಿನಯದ ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, 'ಮೊಹ್ರಾ', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ದಿಲ್ ವಾಲೆ' ನಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ.. ಆದರೆ ನಟಿ ಕೆಜಿಎಫ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳ ಮನಸೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News