Karni Sena on Pushpa 2 : ಪುಷ್ಪ 2 ಬಿಡುಗಡೆಯಾದಾಗಿನಿಂದ ವಿವಾದಗಳಲ್ಲಿ ಮುಳುಗಿದೆ. ಇದರ ನಡುವೆ ಚಿತ್ರಕ್ಕೆ ಸಂಬಂಧಿಸಿದಂತೆ ಕ್ಷತ್ರಿಯ ಕರ್ಣಿ ಸೇನೆಯು ವಿರೋಧ ವ್ಯಕ್ತಪಡಿಸಿದೆ. ಈ ಚಿತ್ರದಲ್ಲಿ ಭವರಸಿಂಗ್ ಶೇಖಾವತ್ ಎಂಬ ಪಾತ್ರವನ್ನು ಸೃಷ್ಟಿಸುವ ಮೂಲಕ, ಸಮುದಾಯವನ್ನು ಅವಳಹೇಳನ ಮಾಡಲಾಗಿದೆ ಎಂದು ದೂರಿದೆ.
ಇದರಿಂದಾಗಿ ಚಿತ್ರ ನಿರ್ಮಾಪಕರು ಎಲ್ಲಿ ಕಾಣಿಸಿಕೊಂಡರೂ ಅವರನ್ನು ಹೊಡೆಯಿರಿ ಎಂದು ಕ್ಷತ್ರಿಯ ಕರ್ಣಿ ಸೇನೆಯ ರಾಜ್ ಶೇಖಾವತ್ ರಜಪೂತರಲ್ಲಿ ಮನವಿ ಮಾಡಿದ್ದಾರೆ.. ಪುಷ್ಪಾ-2 ಚಿತ್ರದಲ್ಲಿ ಶೇಖಾವತ್ ಎಂಬ ಪದವನ್ನು ಕೀಳು ಮಟ್ಟದಲ್ಲಿ ಬಳಸಲಾಗಿದೆ ಎಂದು ಸೇನೆ ಆರೋಪಿಸಿದೆ..
ಸೌತ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರ ಥಿಯೇಟರ್ ಗಳಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಚಿತ್ರದಲ್ಲಿ ಫಹಾದ್ ಫಾಸಿಲ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಭನ್ವರ್ ಸಿಂಗ್ ಶೇಖಾವತ್.
During a visit to Surat, Raj Shekhawat urged the Rajput community to oppose the filmmakers and warned of protests against Pushpa 2, similar to those seen during Padmaavat.
પુષ્પા ટુ ફિલ્મને લઈને ક્ષત્રિય કરણી સેનાનો વિરોધ pic.twitter.com/hhkHArP1vf
— Our Surat (@oursuratcity) December 10, 2024
ಈಗ ಈ ಚಿತ್ರದಲ್ಲಿನ ಖಳನಾಯಕನ ಹೆಸರು ಶೇಖಾವತ್ ಕರ್ಣಿ ಸೇನೆಯನ್ನು ಕೆರಳಿಸಿದೆ. ಅಲ್ಲದೆ, ವಿಲನ್ ಹೆಸರನ್ನು ಬದಲಾವಣೆ ಮಾಡುವಂತೆ ಕರ್ಣಿ ಸೇನಾ ನಾಯಕ ಹೇಳಿದ್ದು ಇಲ್ಲದಿದ್ದರೆ ಹಲ್ಲೆ ಮಾಡುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ.
ಕರ್ಣಿ ಸೇನಾ ನಾಯಕ ರಾಜ್ ಶೇಖಾವತ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, 'ಇತ್ತೀಚೆಗೆ ಪುಷ್ಪ 2 ಎಂಬ ಚಿತ್ರ ಬಿಡುಗಡೆಯಾಗಿದೆ. ಇದರಲ್ಲಿ ಮತ್ತೊಮ್ಮೆ ಕ್ಷತ್ರಿಯ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಕ್ಷತ್ರಿಯ ಸಮುದಾಯದೊಂದಿಗೆ ಸಂಬಂಧ ಹೊಂದಿರುವ ಶೇಖಾವತ್ ಜಾತಿಯನ್ನು ಕೆಳಮಟ್ಟದಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ಅಲ್ಲದೆ, ವಿಚಾರಗಳ ಅಭಿವ್ಯಕ್ತಿಯ ಹೆಸರಲ್ಲಿ ಚಿತ್ರರಂಗದ ಇವರು ಕ್ಷತ್ರಿಯರ ಮಾನಹಾನಿ ಮಾಡುತ್ತಾ ಬಂದಿದ್ದಾರೆ. ಚಿತ್ರ ನಿರ್ಮಾಪಕರು ಇದನ್ನು ಸಾವಧಾನವಾಗಿ ಆಲಿಸಿ ಶೇಖಾವತ್ ಪದ ಬಳಕೆಯನ್ನು ಆದಷ್ಟು ಬೇಗ ತೆಗೆದು ಹಾಕಬೇಕು. ಇಲ್ಲವಾದಲ್ಲಿ ಕರ್ಣಿ ಸೇನೆ ಮನೆಗೆ ನುಗ್ಗಿ ಹೊಡೆದು ಹಾಕುತ್ತದೆ, ಅಲ್ಲದೆ, ಈ ವಿಚಾರದಲ್ಲಿ ಕರ್ಣಿ ಸೇನೆ ಯಾವ ಹಂತಕ್ಕೂ ಹೋಗಲು ಸಿದ್ದವಿದೆ ಎದ್ದಿದ್ದಾರೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.