ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ, ಸಂಸತ್ತಿನಲ್ಲಿ "ನನ್ನ ಹೆಸರು ಜಯಾ ಅಷ್ಟೆ, ಜಯಾ ಅಮಿತಾಬ್‌ ಬಚ್ಚನ್‌ ಅಲ್ಲ" ಎಂದು ಕಿಡಿಕಾರಿದ್ದೇಕೆ ಜಯಾ ಬಚ್ಚನ್‌..?

Jaya Bachchan: ಇತ್ತೀಚೆಗೆ ಬಚ್ಚನ್‌ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದಲ್ಲ ಒಂದು ಕಾರಣದಿಂದ ಬಚ್ಚನ್‌ ಕುಟುಂಬ ಸದ್ದು ಮಾಡುತ್ತಿರುತ್ತದೆ. ಹಲವು ದಿನಗಳಿಂದ ಬಚ್ಚನ್‌ ಕುಟುಂಬಕ್ಕೆ ಸಂಬಂಧಿಸಿದಂತೆ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಇಬ್ಬರು ಕೂಡ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್‌ ಅವರ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

Written by - Zee Kannada News Desk | Last Updated : Jan 5, 2025, 03:30 PM IST
  • ಇತ್ತೀಚೆಗೆ ಬಚ್ಚನ್‌ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
  • ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್‌ ಅವರ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
  • ಸಂಸತ್ತಿನಲ್ಲಿ ಜಯಾ ಬಚ್ಚನ್‌ ಅವರು ಕೊಟ್ಟಿರುವ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿ ಬಿಟ್ಟಿದೆ.
 ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ, ಸಂಸತ್ತಿನಲ್ಲಿ "ನನ್ನ ಹೆಸರು ಜಯಾ ಅಷ್ಟೆ, ಜಯಾ ಅಮಿತಾಬ್‌ ಬಚ್ಚನ್‌ ಅಲ್ಲ" ಎಂದು ಕಿಡಿಕಾರಿದ್ದೇಕೆ ಜಯಾ ಬಚ್ಚನ್‌..? title=

Jaya Bachchan: ಇತ್ತೀಚೆಗೆ ಬಚ್ಚನ್‌ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದಲ್ಲ ಒಂದು ಕಾರಣದಿಂದ ಬಚ್ಚನ್‌ ಕುಟುಂಬ ಸದ್ದು ಮಾಡುತ್ತಿರುತ್ತದೆ. ಹಲವು ದಿನಗಳಿಂದ ಬಚ್ಚನ್‌ ಕುಟುಂಬಕ್ಕೆ ಸಂಬಂಧಿಸಿದಂತೆ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಇಬ್ಬರು ಕೂಡ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್‌ ಅವರ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಹೌದು, ಕೆಲವು ತಿಂಗಳುಗಳಿಂದ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಅವರು ತಮ್ಮ ವಿಚ್ಛೇದನ ವದಂತಿಯ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಈ ನಡುವೆ ಇಬ್ಬರು ಕೂಡ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಂತರ ಈ ವದಂತಿಗಳು ಸ್ವಲ್ಪದರ ಮಟ್ಟಿಗೆ ಕಡಿಮೆಯಾಗಿದೆ. ಇದರ ಬೆನ್ನಲ್ಲೆ ಸಂಸತ್ತಿನಲ್ಲಿ ಜಯಾ ಬಚ್ಚನ್‌ ಅವರು ಕೊಟ್ಟಿರುವ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿ ಬಿಟ್ಟಿದೆ. 

ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಅಧಿವೇಶನದಲ್ಲಿ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್‌ ಕೂಡ ಭಗಿಯಾಗಿದ್ದರು. ಅಲ್ಲಿ ರಾಜ್ಯಸಭಾ ಯಪಾಧ್ಯಕ್ಷ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರು ಜಯಾ ಬಚ್ಚನ್‌ ಅವರನ್ನು "ಜಯಾ ಅಮಿತಾಬ್‌ ಬಚ್ಚನ್‌" ಕರೆದರು. ಇದೇ ಕಾರಣದಿಂದಾಗಿ ಜಯಾ ಬಚ್ಚನ್‌ ಸಂಸತ್ತಿನಲ್ಲಿ ಎಲ್ಲರ ಮುಂದೆ ಸಿಡಿಮಿಡಿಗೊಂಡರು.

ಸೋಮವಾರ ನಡೆದ ಅಧಿವೇಶನಲ್ಲಿ ಈ ಘಟನೆ ನಡೆಯಿತು ಉಪಾಧ್ಯಕ್ಷರು " ಜಯಾ ಅಮಿತಾಬ್‌ ಬಚ್ಚನ್‌" ಎಂದು ಕರೆದ ಕಾರಣಕ್ಕೆ ಕೋಪಗೊಂಡ ಜಯಾ ಅವರು "ನನ್ನನ್ನು ಜಯಾ ಬಚ್ಚನ್‌ ಎಂದು ಮಾತ್ರ ಕರೆದರೆ ಸಾಕು, ಅದುವೇ ನನ್ನ ಹೆಸರು, ಜಯಾ ಅಮಿತಾಬ್‌ ಬಚ್ಚನ್‌ ಎಂದು ಕರೆಯುವ ಅಗತ್ಯವಿಲ್ಲ" ಎಂದಿದ್ದಾರೆ.

ಇನ್ನೂ, ಮಾತು ಮುಂದುವರೆಸಿದ ಅವರು " ಇತ್ತೀಚೆಗೆ ತಮ್ಮ ಹೆಸರಿನೊಂದಿಗೆ ತಮ್ಮ ಪತಿಯ ಹೆಸರನ್ನು ಸೇರಿಸಿಕೊಂಡು, ಗುರುತಿಸಿಕೊಳ್ಳುವುದು ಫ್ಯಾಶನ್‌ ಆಗಿ ಬಿಟ್ಟಿದೆ, ಆದರೆ ನನಗೆ ನನ್ನ ಸ್ವಂತ ವ್ಯಕ್ತಿತ್ವ ಇದೆ, ಜಯಾ ಅಮಿತಾಬ್‌ ಬಚ್ಚನ್‌ ಎಂದು ಕರೆದಸಿಕೊಳ್ಳುವ ಅಗತ್ಯ ನನಗಿಲ್ಲ, ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು" ಎಂದಿದ್ದಾರೆ ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News