ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ

Ramachari Serial Director: ಯುವತಿಯರಿಗೆ ಲೈಂಗಿಕ ಕಿರುಕುಳ‌ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ ಕೆ.ಎಸ್. ರಾಮ್ ಜೀ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

Written by - Yashaswini V | Last Updated : Jan 31, 2025, 09:11 AM IST
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ
  • ರಾಮಾಚಾರಿ ಧಾರಾವಾಹಿ ನಿರ್ದೇಶಕ ಕೆ.ಎಸ್ ರಾಮ್ ಜೀ ಯಿಂದ ದೂರು
  • ರಾಮಾಚಾರಿ, ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ, ನಾಗಿಣಿ ಧಾರಾವಾಹಿ ನಿರ್ದೇಶನ ಮಾಡಿರುವ ಪ್ರಖ್ಯಾತ ನಿರ್ದೇಶಕ ರಾಮ್ ಜಿ
ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಪ್ರಖ್ಯಾತ ಧಾರಾವಾಹಿ ನಿರ್ದೇಶಕ  title=

Ramachari Serial Director: ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ, ನಾಗಿಣಿ, ರಾಮಾಚಾರಿಯಂತಹ ಜನಪ್ರಿಯ ಧಾರವಾಹಿಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಕೆ.ಎಸ್. ರಾಮ್ ಜೀ ಯುವತಿಯರಿಗೆ ಲೈಂಗಿಕ ಕಿರುಕುಳ‌ ಆರೋಪಕ್ಕೆ ಸಂಬಂಧಿಸಿದಂತೆ  ಸುಳ್ಳು ಆರೋಪದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.  

ಯುವತಿಯರಿಗೆ ಲೈಂಗಿಕ ಕಿರುಕುಳ‌ ನೀಡುತ್ತಿದ್ದರೆಂದು ನಕಲಿ ಇನ್ಸ್ಟಾಗ್ರಾಂ ಖಾತೆಯಿಂದ ಫೋಸ್ಟ್ ಮಾಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸೈಬರ್ ಕ್ರೈಂಗೆ ದೂರು ನೀಡಿರುವ ಧಾರಾವಾಹಿ ನಿರ್ದೇಶಕ ರಾಮ್ ಜಿ ನಕಲಿ ಖಾತೆಯಿಂದ ಫೋಸ್ಟ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳವಂತೆ ದೂರು ನೀಡಿದ್ದಾರೆ. 

ಇದನ್ನೂ ಓದಿ- ಬಿಡುಗಡೆಯಾಗಲಿರುವ `ನೋಡಿದವರು ಏನಂತಾರೆ' ಚಿತ್ರಕ್ಕೆ ನವೀನ್ ಶಂಕರ್ ತಯಾರಿ ಹೇಗಿತ್ತು? ನೋಡಿ

ದೂರಿನಲ್ಲಿ ಏನಿದೆ..?
ಜನವರಿ 24ರಂದು Exposing_Ram_ji ಎಂಬ ಇನ್ಸ್ಟಾ ಖಾತೆ ಕ್ರಿಯೇಟ್ ಆಗಿದೆ. ಈ ಇನ್ಸ್ಟಾ ಪೇಜ್ ನಲ್ಲಿ ನಿರ್ದೇಶಕ ರಾಮ್ ಜೀ ಫೋಟೋ ಬಳಸಿಕೊಂಡು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ನಿರ್ದೇಶಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ಫೋಟೋ ಬಳಸಿ ಇಲ್ಲಸಲ್ಲದ ಆರೋಪ ಮಾಡಲಾಗಿದೆ. 

ಇನ್ಸ್ಟಾ ಪೇಜ್ ನಲ್ಲಿ, ರಾಮಾಚಾರಿ ಧಾರಾವಾಹಿಯ ನಿರ್ದೇಶಕ ರಾಮ್ ಜಿ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ನಟನೆಯಲ್ಲಿ ಅವಕಾಶ ಕೊಡುತ್ತೇನೆ ಎಂದು ನಿರ್ದೇಶಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಮಧ್ಯರಾತ್ರಿಯಲ್ಲಿ ವಿಡಿಯೋ ಕಾಲ್ ಮಾಡಿ ಹ್ದುಗಿಯರ ಖಾಸಗಿ ಭಾಗಗಳನ್ನು ತೋರಿಸಲು ಹೇಳುತ್ತಿದ್ದ. ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲು ಬಯಸಿದರೆ ನಾನು ಕರೆದಾಗಲೆಲ್ಲಾ ನೀವು ಬರಬೇಕು... ರಾಮ್ ಜಿ ಮತ್ತವರ ಸಹೋದ್ಯೋಗಿಗಳು ಅವಕಾಶದ ಹೆಸರಿನಲ್ಲಿ ಹುಡುಗಿಯರನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಈ ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಆರೋಪಿಸಲಾಗಿದೆ. 

ಇದನ್ನೂ ಓದಿ- ದರ್ಶನ್ ರಿಲೀಸ್ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಲಕ್ಷ್ಮಿ..! ಫೋಟೋ ವೈರಲ್

ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐ‌ಆರ್ ದಾಖಲಿಸಿರುವ ನಿರ್ದೇಶಕ ರಾಮ್ ಜಿ, ತಮ್ಮ ಬೆಳವಣಿಗೆಯನ್ನು ಸಹಿಸದೆ ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ. ತಕ್ಷಣವೇ ಈ ಪೋಸ್ಟ್ ಡಿಲೀಟ್ ಮಾಡಿ, ಈ ಕೃತ್ಯ ಎಸಗಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News