Ram Charan statement about prabhas marriage: ತೆಲುಗು ಟಾಕ್ ಶೋಗಳಲ್ಲಿ ಬಾಲಯ್ಯ ಮಾತು ಕೇಳೋದೇ ಅಭಿಮಾನಿಗಳಿಗೆ ಖುಷಿ. ಸ್ಟೇಜ್ ಮೇಲೆ ಹತ್ತು ನಿಮಿಷ ಮಾತನಾಡಿದ್ರೂ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ. ಇನ್ನು ಗಂಟೆಗಳ, ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ತುಂಬಿರುವ ಈ ಕಾರ್ಯಕ್ರಮದಲ್ಲಿ ಬಾಲಯ್ಯ ಜೊತೆ ಸಂಭಾಷಣೆ ಮಾಡೋದು ಅಂದ್ರೆ ಅಲ್ಲಿ ಕುತೂಹಲ ಸ್ವಲ್ಪ ಹೆಚ್ಚೇ ಇರುತ್ತದೆ.
ಇದನ್ನೂ ಓದಿ: ದಲಿತ ಮುಖಂಡ, ಪ್ರಗತಿಪರ ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ನಿಧನ
ಈ ಶೋನಲ್ಲಿ ಪ್ರಭಾಸ್, ಮಹೇಶ್ ಬಾಬು, ವೆಂಕಟೇಶ್, ಅಲ್ಲು ಅರ್ಜುನ್, ರಣಬೀರ್ ಕಪೂರ್, ಸೂರ್ಯ ಮುಂತಾದ ದೊಡ್ಡ ತಾರೆಯರು ಆಗಮಿಸಿ ಮಾತುಕತೆ ನಡೆಸಿದ್ದರು. ಇದೀಗ, ರಾಮ್ ಚರಣ್ ಸರದಿ. ರಾಮ್ ಚರಣ್ ಅವರ ಹೊಸ ಚಿತ್ರ ಗೇಮ್ ಚೇಂಜರ್ ಜನವರಿ 10 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದ ಪ್ರಚಾರದ ಭಾಗವಾಗಿ ಆಗಮಿಸಿದ್ದರು ಆದರೆ, ಈ ಸಂಚಿಕೆ ಇನ್ನೂ ಬಿಡುಗಡೆಯಾಗಿಲ್ಲ.
ಅಂದಹಾಗೆ, ಈ ಸಂಚಿಕೆಯಲ್ಲಿ ರಾಮಚರಣ್ ಜೊತೆಗೆ ಶರ್ವಾನಂದ್ ಕೂಡ ಆಗಮಿಸಿದ್ದಾರೆ. ಆದರೆ, ಚರಣ್ ಹಾಗೂ ಬಾಲಯ್ಯ ನಡುವಿನ ಮಾತುಕತೆ ಹೇಗೆ ನಡೆದಿದೆ ಎಂಬ ಕುತೂಹಲ ಮೂಡಿದೆ.
ಈ ಹಿಂದೊಮ್ಮೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭಾಸ್, ಬಾಲಯ್ಯ ಕೋರಿಕೆ ಮೇಲೆ ರಾಮ್ ಚರಣ್‌ಗೆ ಕರೆ ಮಾಡಿದ್ದರು. ಆ ನಂತರ ಪ್ರಭಾಸ್ ರಹಸ್ಯಗಳು, ಮದುವೆ ಮತ್ತು ಇತರ ವಿಷಯಗಳ ಬಗ್ಗೆ ಚರಣ್ ಮಾತನಾಡಿ ಪ್ರಭಾಸ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು.
ಪ್ರಭಾಸ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಾಲಯ್ಯ ಜೊತೆ ಫೋನ್ ನಲ್ಲಿ ಮಾತನಾಡಿದ ಚರಣ್, "ಸದ್ಯದಲ್ಲೇ ಪ್ರಭಾಸ್ ಒಂದು ಗುಡ್ ನ್ಯೂಸ್ ಹೇಳಲಿದ್ದಾರೆ ಎಂದು ಹೇಳುತ್ತಾರೆ. ಇದರಿಂದ ಶಾಕ್ ಆದ ಪ್ರಭಾಸ್.. ತುಂಬಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಬಾಲಯ್ಯ ಸರ್, ಚರಣ್ ನನ್ನ ಫ್ರೆಂಡ್ ಅಲ್ಲ.. ಓಯ್ ಚರಣು.. ಸ್ಯಾಡಿಸ್ಟ್, ನೀನು ನನ್ನ ಸ್ನೇಹಿತನಾ? ಅಥವಾ ಶತ್ರುವಾ..ಯಾಕೆ ಪ್ರಿಯತಮೆಯಂತಿದ್ದೀಯಾ..ಯಾಕೆ ನನ್ನ ಮೇಲೆ ಕೋಪಗೊಂಡಿದ್ದೀಯಾ?" ಎಂದು ಪ್ರಭಾಸ್ ತುಂಬಾ ತಮಾಷೆಯಾಗಿ ಮಾತನಾಡಿದ್ದರು.
ಇದನ್ನೂ ಓದಿ: Zomatoದಲ್ಲಿ 'Girl Friend' ಸಿಗ್ತಾರಾ... ಹೊಸ ವರ್ಷದ ಹೊತ್ತಲ್ಲಿ ಆಗಿದ್ದೇನು...?
ಅಂದು ರಾಮ್ ಚರಣ್ ಹೇಳಿದ ಆ ಒಂದು ಮಾತಿಗೆ, ಭಾವಿ ಪತ್ನಿಯ ಹೆಸರು ಹೇಳದೆ ಪ್ರಭಾಸ್ ಗೆ ಬಾಲಯ್ಯ ತಮಾಷೆ ಮಾಡಿದ್ದರು. ಈ ಬಾರಿಯ ಕಾರ್ಯಕ್ರಮಕ್ಕೆ ಚರಣ್ ಆಗಮಿಸಿದ್ದು, ಪ್ರಭಾಸ್ ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ