Aishwarya Rai and Abhishek Bachchan: ಒಂದೆಡೆ ಅಭಿಷೇಕ್ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದರು. ಹಾಗಾದ್ರೆ ಐಶ್ವರ್ಯಾ ಈವರೆಗೂ ಮೌನ ವಹಿಸಿದ್ದೇಕೆ ಎಂಬುದು ಕೆಲ ಅಭಿಮಾನಿಗಳ ಗೊಂದಲ. ಇದೆಲ್ಲದರ ಮಧ್ಯೆ ಪತ್ನಿ ಐಶ್ವರ್ಯಾ ರೈ ಅವರ ವೃತ್ತಿಜೀವನವನ್ನು ಅಭಿಷೇಕ್ ಹಾಳುಮಾಡಿದ್ದಾರೆ ಎಂದು ಹೇಳಲಾದ ಪೋಸ್ಟ್ ವೈರಲ್ ಆಗುತ್ತಿದೆ.
ಇದನ್ನೂ ಓದಿ-ʼಆʼ ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾ ರಿಜೆಕ್ಟ್ ಮಾಡಿದ ಕೀರ್ತಿ ಸುರೇಶ್..! ಅಷ್ಟಕ್ಕೂ ಯಾರು ಆ ನಟ?!
ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ... ಶಾರುಖ್ ಖಾನ್ ಜೊತೆಗಿನ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೊದಲು ಐಶ್ವರ್ಯಾ ರೈಗೆ ಪಾತ್ರವನ್ನು ನೀಡಲಾಯಿತು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅಭಿಷೇಕ್ ತುಂಬಾ ಪೊಸೆಸಿವ್ ಆಗಿದ್ದು, ಶಾರುಖ್ ಖಾನ್ ಅವರೊಂದಿಗೆ ಐಶ್ವರ್ಯಾ ಕೆಲಸ ಮಾಡುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ, ಪ್ರಿಯಾಂಕಾ ಚೋಪ್ರಾ ಮೊದಲು ಐಶ್ವರ್ಯಾಗೆ ದೋಸ್ತಾನಾ ಚಿತ್ರದ ಆಫರ್ ಬಂದಿತ್ತು ಎಂದು ಪೋಸ್ಟ್ ಹೇಳಿಕೊಂಡಿದೆ. ಆದರೆ ಅಭಿಷೇಕ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಅದಕ್ಕೆ ಕಾರಣ ಅವರ ಪಾತ್ರ ಬೇರೆಯವರ ಪಾಲಾಯಿತು.. ಇಷ್ಟೇ ಅಲ್ಲ, ಐಶ್ವರ್ಯಾ ರೈಗೆ ಅನೇಕ ದೊಡ್ಡ ಚಿತ್ರಗಳ ಆಫರ್ ಬಂದಿತ್ತು, ಅವರು ಕೆಲವು ಕಾರಣಗಳಿಂದ ಮಾಡಲು ನಿರಾಕರಿಸಿದರು ಎಂದು ಬರೆಯಲಾಗಿದೆ..
ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದ್ದರು. ಅಲ್ಲಿ ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ಜೊತೆ ಕಾಣಿಸಿಕೊಂಡರು. ಅಭಿಷೇಕ್ ಬಚ್ಚನ್ ಅವರ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡರು. ಇದರಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಇದಾದ ನಂತರ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ