ಫೋಟೋ ಆಯ್ತು, ಈಗ ವಿಡಿಯೋ ಕಾಲ್..! ಜೈಲಿನಿಂದಲೇ ಅಭಿಮಾನಿಗೆ ಚೆನ್ನಾಗಿದ್ದೀನಿ ಚಿನ್ನ.. ಎಂದ ದರ್ಶನ್

Darshan jail viral photos : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್‌ ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋ ಲಭ್ಯವಾಗಿತ್ತು. ಇದು ಸಾಕಷ್ಟು ಚರ್ಚೆಗೂ ಸಹ ಕಾರಣವಾಗಿತ್ತು. ಆದರಿ ಸದ್ಯ ದಾಸ ಅಭಿಮಾನಿಯ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ಸಹ ವೈರಲ್ ಆಗಿದೆ. ನಟ ದರ್ಶನ್‌ನಿಂದ ವೀಡಿಯೊ ಕಾಲ್ ನಲ್ಲಿ ಅಭಿಮಾನಿ ಜೊತೆ ಮಾತನಾಡಿರುವ ವೀಡಿಯೋ ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ. ಇದರಿಂದ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ.

ಜೈಲಿನಲ್ಲಿರುವ ದರ್ಶನ್‌ ಮೊಬೈಲ್‌ನಲ್ಲಿ ವಿಡಿಯೋ ಕಾಲ್‌ ಮೂಲಕ ಆಪ್ತರೊಬ್ಬರ ಜೊತೆ ವೀಡಿಯೊ ಮಾತನಾಡಿದ್ದಾರೆ. ಅತ್ಯಾಪ್ತವಾಗಿ ಮಾತಾಡಿರೊ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಎಂದು ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಸುಮಾರು 25 ಸೆಕೆಂಡುಗಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:14 ವರ್ಷಗಳ ಸಿನಿಜರ್ನಿ, ಖಾನ್‌ಗಳ ಜೊತೆ ಒಂದೂ ಸಿನಿಮಾ ಮಾಡಿಲ್ಲ ಈ ಸ್ಟಾರ್‌ ನಟಿ..! ಕಾರಣವೇನು ಗೊತ್ತೆ.?

ಹಾಗಾದ್ರೆ ಜೈಲಿನ ನಿಯಮಾವಳಿಗಳೇನು.? ಆರೋಪಿಗಳು ಹೇಗಿರಬೇಕು ಎಂಬ ಮಾಹಿತಿಯನ್ನು ನೋಡುವುದಾರೆ,  ಆರೋಪಿಗಳನ್ನು ಭೇಟಿ ಮಾಡಬೇಕಾದರೇ ವಾರದಲ್ಲಿ ಎರಡು ದಿನ ಕುಟುಂಬದವರಿಗೆ ಅವಕಾಶವಿರುತ್ತೆ.
ಕುಟುಂಬ ಹೊರತುಪಡಿಸಿ ಅಡ್ವೋಕೇಟ್ ಒಬ್ಬರಿಗೆ ಆರೋಪಿಯನ್ನು ಭೇಟಿ ಮಾಡಲು ಅವಕಾಶವಿರುತ್ತೆ. ಇದನ್ನ ಹೊರತುಪಡಿಸಿ ಮತ್ತ್ಯಾರಿಗೂ ಭೇಟಿಗೆ ಅವಕಾಶ ಕೊಡುವುದಿಲ್ಲ. ಕುಟುಂಬದವರು ಭೇಟಿಯಾಗುವ ವೇಳೆ ಬಟ್ಟೆ ಮತ್ತು ಹಣ್ಣುಗಳನ್ನು ಮಾತ್ರ ಕೊಡಲು ಅವಕಾಶರುತ್ತೆ. ಬೇಕರಿ ಐಟಂ ಅಥವಾ ಊಟ ಕೊಡುವುದಕ್ಕೆ ಜೈಲಲ್ಲಿ ಅವಕಾಶವಿಲ್ಲ.

ದಿಂಬು ಅಥವಾ ಬೆಡ್ ಶೀಟ್ ಚಾಪೆ ಬೆಡ್ ಇದ್ಯಾವುದಕ್ಕೂ ಅವಕಾಶವಿರುವುದಿಲ್ಲ. ಸಾಮಾನ್ಯ ಖೈದಿಗಳು ಮತ್ತು ಆರೋಪಿಗಳು ಸಾಮಾನ್ಯವಾಗಿ ಊಟದ ಅಥವಾ ತಿಂಡಿ ಸಮಯದಲ್ಲಿ ಭೇಟಿ ಮಾಡಬಹುದು. ಇನ್ನೂ ವಿಐಪಿ ಆರೋಪಿಗಳು ಬೇರೆ ರೌಡಿಶೀಟರ್‌ಗಳ ಜೊತೆ ಭೇಟಿ ಮಾಡಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ:ʼರಣಬೀರ್ ಕಪೂರ್ ನನ್ನ ಮನೆಗೆ ಬಂದು.. ನನ್ನೊಂದಿಗೆ..! ಆಘಾತಕಾರಿ ವಿಚಾರ ಬಹಿರಂಗಪಡಿಸಿದ ಕಂಗನಾ

ಅದರಲ್ಲೂ ವಿಶೇಷ ಭದ್ರತಾ ಕೊಠಡಿಯಲ್ಲಿ ಇರಬೇಕಾದರೆ ಅಲ್ಲಿ ಬೇರೆ ಆರೋಪಿಗಳಿಗೆ ಅವಕಾಶ ಇರುವಿರಲ್ಲ. ವಿಐಪಿ ಕೊಠಡಿ ಜೈಲಿನ ಮುಖ್ಯ ದ್ವಾರದ ಬಳಿ ಇರುವುದರಿಂದ ಉಳಿದ ಖೈದಿಗಳು ಭೇಟಿ ಮಾಡಲು ಅವಕಾಶ ಕೊಡುವುದಿಲ್ಲ. ವಿಐಪಿ ಸೆಲ್‌ನಲ್ಲಿರುವ ವಿಐಪಿಗಳನ್ನ ಜೈಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹ ಮಾತನಾಡಲು ಅವಕಾಶವಿರುವುದಿಲ್ಲ.

ಸಾಮಾನ್ಯ ಖೈದಿಗಳು ಬ್ಯಾರಕ್ ಇರುವ ಕೊಠಡಿಗಳ ಬಳಿ ಭೇಟಿ ಮಾಡಬಹುದು. ಆದರೆ ಅತಿ ಸೂಕ್ಷ್ಮ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಖೈದಿಗಳನ್ನ ಬೇರೆ ಯಾರು ಭೇಟಿ ಮಾಡೋದಕ್ಕೆ ಅನುವು ಮಾಡಿಕೊಡಲ್ಲ. ನ್ಯಾಯಾಲಯದ ಅನುಮತಿ ಇದ್ದರೇ ಮಾತ್ರ ಮನೆ ಊಟ ಅಥವಾ ಬೇರೆ ಆರೋಗ್ಯದ ವಿಚಾರವಾಗಿ ಕುಟುಂಬಸ್ಥರು ಭೇಟಿಯಾಗಲು ಅವಕಾಶ ಮಾಡಿಕೊಡಲಾಗುತ್ತೆ. 

ಇದನ್ನೂ ಓದಿ:50ರ ಹರೆಯ, ಮೊದಲು ಡಿವೋರ್ಸ್‌, ಇತ್ತೀಚೆಗೆ ಲವ್‌ ಬ್ರೇಕಪ್‌..! ನೋ ಟೆನ್ಷನ್ ಅಂತ ಬಿಕಿನಿ ಧರಿಸಿ ಬೀಚ್‌ಗಿಳಿದ ನಟಿ..

ಇನ್ನೂ ಬ್ಯಾರಕ್ ಹಾಗೂ ಹೊರಗೆ ಜೈಲಿನೊಳಗು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಇವತ್ತು ವೈರಲ್ ಆಗಿರುವ ಫೋಟೋದಲ್ಲಿರುವಂತೆ ಟೀ ಕಪ್ ಸಹ ಬಳಸಲು ಜೈಲಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಈ ಎಲ್ಲಾ ನಿಯಮಗಳ ವಿರುದ್ಧವಾಗಿ ನಟ ದರ್ಶನ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.‌ ಇಷ್ಟೆಲ್ಲಾ ಫೆಸಿಲಿಟಿ ಕೊಡಲು ಏನೂ ಕಾರಣ ಎಂದು ಜೈಲಾಧಿಕಾರಿಗಳೇ ಉತ್ತರ ಕೊಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Darshan video call to fan video goes viral after his jail photo leak
News Source: 
Home Title: 

ಫೋಟೋ ಆಯ್ತು, ಈಗ ವಿಡಿಯೋ ಕಾಲ್..! ಜೈಲಿನಿಂದಲೇ ಅಭಿಮಾನಿಗೆ ಚೆನ್ನಾಗಿದ್ದೀನಿ ಚಿನ್ನ.. ಎಂದ ದರ್ಶನ್

ಫೋಟೋ ಆಯ್ತು, ಈಗ ವಿಡಿಯೋ ಕಾಲ್..! ಜೈಲಿನಿಂದಲೇ ಅಭಿಮಾನಿಗೆ ಚೆನ್ನಾಗಿದ್ದೀನಿ ಚಿನ್ನ.. ಎಂದ ದರ್ಶನ್
Caption: 
Darshan video call
Yes
Is Blog?: 
No
Facebook Instant Article: 
Yes
Highlights: 
  • ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್‌.
  • ಜೈಲಿನಲ್ಲಿ ದಾಸ ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋ ಲಭ್ಯವಾಗಿತ್ತು.
  • ಸದ್ಯ ದಾಸ ಅಭಿಮಾನಿಯ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ಸಹ ವೈರಲ್ ಆಗಿದೆ. 
Mobile Title: 
ಫೋಟೋ ಆಯ್ತು, ಈಗ ವಿಡಿಯೋ ಕಾಲ್..! ಜೈಲಿನಿಂದಲೇ ಅಭಿಮಾನಿಗೆ ಚೆನ್ನಾಗಿದ್ದೀನಿ ಚಿನ್ನ.. ಎಂದ ದರ್ಶನ್
Krishna N K
VISHWANATH HARIHARA
Publish Later: 
No
Publish At: 
Sunday, August 25, 2024 - 21:54
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
347