Darshan Kranti movie : ಎಲ್ಲವೂ ಸರಿಯಾಗಿತ್ತು ಎನ್ನುತ್ತಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹೇಳಿಕೆ ʼಕ್ರಾಂತಿʼ ಚಿತ್ರಕ್ಕೆ ಮುಳುವಾಗುವಂತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ʼಬಾಯ್ಕಾಟ್ ಕ್ರಾಂತಿʼ ಎಂಬ ಹ್ಯಾಷ್ ಟ್ಯಾಗ್ ಸದ್ದು ಮಾಡಲು ಪ್ರಾರಂಭಿಸುತ್ತಿದೆ. ಇದು ಹೀಗೆ ಮುಂದುವರೆದ್ರೆ ದಚ್ಚು ಸಿನಿಮಾದ ವಿರುದ್ಧ ಬಾಯ್ಕಾಟ್ ʼಕ್ರಾಂತಿʼ ಶುರುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.
ಕ್ರಾಂತಿ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆ ತಾನೇ ಚಿತ್ರದ ʼಧರಣಿʼ ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಿರುವಾಗ ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ ಮಾತು ಹಿಂದೂ ಪರ ಸಂಘಟನೆ ಸೇರಿದಂತೆ ಕೆಲವು ಜನರ ಕೋಪಕ್ಕೆ ಗುರಿಯಾಗಿದೆ. ಅಲ್ಲದೆ, ದರ್ಶನ್ ಸಿನಿಮಾ ಕ್ರಾಂತಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಎಂಬ ಪದ ಕೇಳಿ ಬರುವಂತೆ ಮಾಡಿದೆ.
ಇದನ್ನೂ ಓದಿ: Shruti Haasan Breakup : ಬ್ರೇಕಪ್ ಫೀಲಿಂಗ್ನಲ್ಲಿದ್ದಾರಾ ನಟಿ ಶ್ರುತಿ ಹಾಸನ್? ಯಾರಾನಾ ಸಾಂತ್ವನ ಹೇಳ್ರಪ್ಪೋ!
ಹೌದು, ಸಂದರ್ಶನವೊಂದರಲ್ಲಿ ದರ್ಶನ ಅವರು, ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತ ಸಮಯ ಬಂದ್ರೆ ಅದೃಷ್ಟ ದೇವತೆಯನ್ನು ಬೆಡ್ ರೂಮ್ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸಿಬಿಡಬೇಕು ಎಂದು ಹೇಳಿದ್ದರು. ಅವರು ಹೇಳಿದ್ದರ ಉದ್ದೇಶವೇ ಬೆರೆಯಾಗಿತ್ತು. ಅಂದ್ರೆ ಒಳ್ಳೆಯ ಅವಕಾಶ ಒಂದಾಗ ಅದರ ಉಪಯೋಗ ಪಡೆಯಬೇಕು ಅಂತ ಅರ್ಥ. ಆದ್ರೆ ಅವರು ಹೇಳಿದ ವಿಧಾನ ಕೆಲವರ ಮನಸ್ಸಿಗೆ ನೋವು ಉಂಟು ಮಾಡಿದೆ. ಇನ್ನು ಟ್ಟಿಟರ್ನಲ್ಲಿ ದಚ್ಚು ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಅದೃಷ್ಟ ದೇವತೆಯನ್ನು ಮನೆಯ ಬೆಡ್ ರೂಮನಲ್ಲಿ ಕುಳ್ಳರಿಸಿ, ಬಿಟ್ಟಿ ಬಿಚ್ಚಬೇಕು ಎಂದು ಹೇಳಿ ಕೊಟ್ಯಾಂತರ ಹಿಂದೂ ಮಾತೆಯರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುವ ದೇವತೆಗಳ ಅಪಮಾನ ಅಲ್ಲವೇ?.
ಕೊಟ್ಯಾಂತರ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದು ಎಷ್ಟು ಸರಿ? ಶೋಭೆ ತರುವುದೇ?.
ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಲಿ. @dasadarshan pic.twitter.com/w7xJ0rHbcS
— 🚩Mohan gowda🇮🇳 (@Mohan_HJS) December 10, 2022
#BoycottKranti pic.twitter.com/KCyyVlaETs
— Manju Bhat (@manju_kodangala) December 10, 2022
ಹಲವಾರು ನೆಟ್ಟಿಗರು ಗಜನ ವಿರುದ್ಧ ಕಿಡಿಕಾರಿದ್ದರೆ. ಅದೃಷ್ಟ ದೇವತೆ ಅಂದ್ರೆ ಮಹಾಲಕ್ಷ್ಮಿ, ದರ್ಶನ ಅವರು ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಗೂಗಲ್ನಲ್ಲಿ ಅದೃಷ್ಟ ದೇವತೆ ಎಂದು ಸರ್ಚ್ ಮಾಡಿ ನೆಟ್ಟಿಗರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ʼಅದೃಷ್ಟ ದೇವತೆಯನ್ನು ಮನೆಯ ಬೆಡ್ ರೂಮನಲ್ಲಿ ಕುಳ್ಳರಿಸಿ, ಬಿಟ್ಟಿ ಬಿಚ್ಚಬೇಕು ಎಂದು ಹೇಳಿ ಕೊಟ್ಯಾಂತರ ಹಿಂದೂ ಮಾತೆಯರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುವ ದೇವತೆಗಳ ಅಪಮಾನ ಅಲ್ಲವೇ?.ʼ ಎಂದು ಕಿಡಿಕಾರಿದ್ದಾರೆ. ಇನ್ನು ಹಲವರು ಕೆಟ್ಟದಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.