ಕೋಟಿ ಕೋಟಿ ಆಸ್ತಿ ಇದ್ದರೂ ಕೂಡ ಖರ್ಚಿನ ಹಣಕ್ಕಾಗಿ ʻಈʼ ವ್ಯಕ್ತಿಯ ಮುಂದೆ ಕೈ ಒಡ್ಡುತ್ತಾರಂತೆ ಅಮಿತಾಬ್‌ ಬಚ್ಚನ್‌!!

Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ಅವರು ʻಕೌನ್‌ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್‌ ಬಚ್ಚನ್‌ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.   

Written by - Zee Kannada News Desk | Last Updated : Dec 30, 2024, 02:14 PM IST
  • ಇತ್ತೀಚಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ಅವರು ʻಕೌನ್‌ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ.
  • ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.
  • ಮುದ್ದಾದ ಮಡದಿಯ ಕುರಿತಾದ ಮತ್ತೊಂದು ಇನ್‌ಟ್ರೆಸ್ಟಿಂಗ್‌ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ.
ಕೋಟಿ ಕೋಟಿ ಆಸ್ತಿ ಇದ್ದರೂ ಕೂಡ ಖರ್ಚಿನ ಹಣಕ್ಕಾಗಿ ʻಈʼ ವ್ಯಕ್ತಿಯ ಮುಂದೆ ಕೈ ಒಡ್ಡುತ್ತಾರಂತೆ ಅಮಿತಾಬ್‌ ಬಚ್ಚನ್‌!! title=

Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ಅವರು ʻಕೌನ್‌ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್‌ ಬಚ್ಚನ್‌ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. 

ಸಿನಿಮಾ ಕುರಿತ ವಿಚಾರಗಳನ್ನು ಅಷ್ಟೆ ಅಲ್ಲದೆ ಅಮಿತಾಬ್‌ ಬಚ್ಚನ್‌ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾ ಇರುತ್ತಾರೆ. ಅದರಲ್ಲೂ ತಮ್ಮ ಪತ್ನಿ ಜಯಾ ಬಚ್ಚನ್‌ ಅವರ ಕುರಿತು ಸದಾ ಮಾತನಾಡುವ ಅಮಿತಾಬ್‌ ಅವರು, ತಮ್ಮ ಮುದ್ದಾದ ಮಡದಿಯ ಕುರಿತಾದ ಮತ್ತೊಂದು ಇನ್‌ಟ್ರೆಸ್ಟಿಂಗ್‌ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ.

ಸದ್ಯ, ಇತ್ತೀಚೆಗೆ ಸಂಚಿಕೆಯೊಂದರಲ್ಲಿ ಮಾತನಾಡಿದ ಅಮಿತಾಬ್‌ ಬಚ್ಚನ್‌ ಅವರು "ನನಗೆ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವುದು ಹೇಗೆ ಎಂಬುದು ಇಂದಿಗೂ ಕೂಡ ಗೊತ್ತಿಲ್ಲ. ಆದ್ದರಿಂದ ನನಗೆ ಹಣದ ಅವಶ್ಯಕತೆ ಇರುವಾಗಲೆಲ್ಲಾ ನಾನು ನನ್ನ ಪತ್ನಿ ಜಯಾ ಬಚ್ಚನ್‌ ಅವರ ಬಳಿಯೇ ಹಣವನ್ನು ಕೇಳುತ್ತೇನೆ" ಎಂದಿದ್ದಾರೆ. 

ಇತ್ತೀಚಿನ ಎಪಿಸೋಡ್‌ನಲ್ಲಿ ಪ್ರಿಯಾಂಕ ಎಂಬ ಸ್ಪರ್ಧಿ ʻಕೌನ್‌ ಬನೇಗ ಕರೋಡ್‌ಪತಿʼ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕ ಎಂಬ ಸ್ಪರ್ಧಿ " ಸರ್‌, ನೀವು ಎಂದಾದರೂ ಎಟಿಎಂನಿಂದ ಹಣ ಡ್ರಾ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದೀರಾ" ಎಂದು ಕೇಳಿದಾಗ, ಅಮಿತಾಬ್‌ ಬಚ್ಚನ್‌ ಅವರು "ನಾನು ನನ್ನ ಬಳಿ ಸಾಮನ್ಯವಾಗಿ ಹಣವನ್ನು ಇಟ್ಟುಕೊಳ್ಳುವುದಿಲ್ಲ, ಎಟಿಎಂಗೂ ಕೂಡ ಹೋಗುವುದಿಲ್ಲ. ಏಕೆಂದರೆ ನನಗೆ ಎಟಿಎಂ ಹೇಗೆ ಬಳಸಬೇಕು ಎಂಬ ಅರಿವು ಇಲ್ಲ. ಇದೇ ಕಾರಣಕ್ಕಾಗಿ ನಾನು ಜಯಾ ಜಿ ಅವರ ಬಳಿ ಹಣವನ್ನು ಕೇಳಿ ಪಡೆಯುತ್ತೇನೆ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News