Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ

Aishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.  

Written by - Nitin Tabib | Last Updated : Apr 20, 2024, 07:28 PM IST
  • 2007 ರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ವಿವಾಹವಾದಾಗ,
  • ಅವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿಡು ಹೋಗಿವೆ.
  • ಮದುವೆಯಾದ ಹಲವು ದಿನಗಳ ಕಾಲ ಈ ಜೋಡಿ ಸುದ್ದಿಯಲ್ಲಿತ್ತು.
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ title=

Aishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ. ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವೆ ಮನಸ್ತಾಪ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

20 ಏಪ್ರಿಲ್ 2007 ರಂದು ಅಭಿಷೇಕ್ ಬಚ್ಚನ್ ಜೊತೆ ಹಸೆಮಣೆ ತುಳಿದ ಐಶ್ವರ್ಯಾ ರೈ
ಅಭಿಷೇಕ್ ಬಚ್ಚನ್ ಅವರು 20 ಏಪ್ರಿಲ್ 2007 ರಂದು ತಾನು ಮನಸಾರೆ ಪ್ರೀತಿಸಿದ ಐಶ್ವರ್ಯ ರೈ ಅವರನ್ನು ವರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಅವರ ವಿವಾಹ ವಾರ್ಷಿಕೋತ್ಸವ. ಐಶ್ವರ್ಯಾ-ಅಭಿಷೇಕ್ ದಾಂಪತ್ಯ ಜೀವನಕ್ಕೆ 17 ವರ್ಷ ಪೂರೈಸಿದೆ. ಇಬ್ಬರಿಗೂ 12 ವರ್ಷದ ಮುದ್ದಾದ ಆರಾಧ್ಯಾ ಹೆಸರಿನ ಮಗಳೂ ಇದ್ದಾಳೆ.

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿವಾಹ ವಾರ್ಷಿಕೋತ್ಸವ
 2007 ರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ವಿವಾಹವಾದಾಗ, ಅವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿಡು ಹೋಗಿವೆ. ಮದುವೆಯಾದ ಹಲವು ದಿನಗಳ ಕಾಲ ಈ ಜೋಡಿ ಸುದ್ದಿಯಲ್ಲಿತ್ತು. ಈ ಜೋಡಿಯ ಬಗ್ಗೆ ಜನರು ಎಲ್ಲಾ ರೀತಿಯ ವಿಷಯಗಳನ್ನು ಚರ್ಚಿಸುತ್ತಿರುವುದು ಕಂಡುಬಂತು. ಮದುವೆಯ ನಂತರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಹನಿಮೂನ್‌ಗಾಗಿ ಬೋರಾ ಬೋರಾಗೆ ಹೋಗುತ್ತಿದ್ದಾಗ, ವಿಚಿತ್ರ ಘಟನೆಯೊಂದು ಸಂಭವಿಸಿತ್ತು.

ಇದನ್ನೂ ಓದಿ-ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!

‘ಮಿಸೆಸ್ ಬಚ್ಚನ್’ ಎಂದು ಕರೆದ ಗಗನಸಖಿ 
ಈ ಘಟನೆಯ ಕುರಿತು ಖುದ್ದು ಐಶ್ವರ್ಯಾ ರೈ ಅವರೇ ಖುದ್ದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕುರಿತು ಹೇಳಿಕೊಂಡ ಐಶ್ವರ್ಯ,  ನಾವಿಬ್ಬರೂ ಫ್ಲೈಟ್‌ನಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಗಗನಸಖಿ ನನ್ನ ಬಳಿ ಬಂದು 'ಮಿಸೆಸ್ ಬಚ್ಚನ್' ಎಂದು ಕರೆದರು. ಇದನ್ನು ಕೇಳಿದ ನಂತರ ನನಗೆ ಸ್ವಲ್ಪ ಆಶ್ಚರ್ಯವಾಯಿತು. ಅಭಿಷೇಕ್ ಮತ್ತು ನಾನು ತಕ್ಷಣ ಒಬ್ಬರನ್ನೊಬ್ಬರು ನೋಡಿದೆವು ಮತ್ತು ನಾವು ಜೋರಾಗಿ ನಗಲಾರಂಭಿಸಿದೆವು. 'ನಾನು ಬಚ್ಚನ್ ಕುಟುಂಬಕ್ಕೆ ಸೊಸೆಯಾಗಿದ್ದೇನೆ' ಎಂದು ಐಶ್ವರ್ಯಾ ರೈ ಆ ಸಂದರ್ಶನದಲ್ಲಿ ಹೇಳಿದ್ದರು, ಬಚ್ಚನ್ ಕುಟುಂಬದಲ್ಲಿ ಮದುವೆಯಾಗಿದ್ದರೂ, ನಾನು ಮದುವೆಯಾಗಿದ್ದೇನೆ ಎಂಬುದು ನನಗೆ ಮಾನವರಿಕೆಯಾಗಿರಲಿಲ್ಲ. ನಾನು ಪ್ರಸಿದ್ಧ ಕುಟುಂಬದ ಸೊಸೆಯಾಗಿದ್ದೆ, ಓರ್ವ ಖ್ಯಾತ ನಟನ ಪತ್ನಿಯಾಗಿದ್ದೆ. ಮದುವೆಯ ನಂತರವೂ ನನಗೆ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯಲು ಸಾಧ್ಯವಾಗಲಿಲ್ಲ ಎಂದು ಐಶ್ವರ್ಯಾ ರೈ ಹೇಳಿದ್ದರು. ಆದರೆ ಗಗನಸಖಿ ನನ್ನನ್ನು 'ಮಿಸೆಸ್ ಬಚ್ಚನ್' ಎಂದು ಕರೆದಾಗ ಇದ್ದಕ್ಕಿದ್ದಂತೆ ನಾನು ಮದುವೆಯಾಗಿದ್ದೇನೆ ಎಂದು ನನಗೆ ಮಾನವರಿಕೆಯಾಗಿತು. 

ಇದನ್ನೂ ಓದಿ-Bollywood Actress: ವಿಚ್ಛೇದನೆಯ ವದಂತಿಗಳ ಬೆನ್ನಲ್ಲೇ ಮಂಗಳಸೂತ್ರ ಬದಲಾಯಿಸಿದ ಐಶ್ವರ್ಯಾ ರೈ! ಕಾರಣ?

 'ಧೂಮ್ 2' ಚಿತ್ರೀಕರಣದ ಸಂದರ್ಭದಲ್ಲಿ ಪರಸ್ಪರರ ಪ್ರೀತಿಯಲ್ಲಿ ಬಿದ್ದ ಐಶ್ವರ್ಯಾ-ಅಭಿಷೇಕ್: 
ಮಾಹಿತಿಯ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಐಶ್ವರ್ಯಾ ಎಂದಿಗೂ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಲಿಲ್ಲ. ‘ಧೂಮ್ 2’ ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಜೊತೆ ಪ್ರೀತಿಯಲ್ಲಿ ಬೀಳಲು ಪ್ರಾರಂಭಿಸಿದರು. ಇದಾದ ನಂತರ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಆದರೆ, ಅಭಿಷೇಕ್ ಬಚ್ಚನ್ ಮೊದಲು ಪ್ರೀತಿಯಲ್ಲಿ ಬಿದ್ದಿದ್ದರು ಮತ್ತು ಇದು ಏಕಪಕ್ಷೀಯ ಪ್ರೀತಿಯಾಗಿತ್ತು. ನಂತರ, ಒಟ್ಟಿಗೆ ಕೆಲಸ ಮಾಡುವಾಗ, ಐಶ್ವರ್ಯಾ ರೈ ಕೂಡ ಅಭಿಷೇಕ್ ಬಚ್ಚನ್ ಅನ್ನು ಇಷ್ಟಪಡಲು ಪ್ರಾರಂಭಿಸಿದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News