"ನನ್ನ ಜೀವನದ ಅತ್ಯಂತ..."- ನಾಗಚೈತನ್ಯ 2ನೇ ಮದುವೆಯಲ್ಲಿ ಸಮಂತಾ..! ವಧು ಶೋಭಿತಾರನ್ನು ನೋಡ್ತಿದ್ದಂತೆ ಭಾವುಕಳಾಗಿ ಹೇಳಿದ್ದೇನು?

Samantha statement about Sobhita Dhulipala: ನಟಿ ಶೋಭಿತಾ ಧೂಳಿಪಾಲ ಅವರ ಸಹೋದರಿ ಸಮಂತಾ, ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ನವಜೋಡಿಗೆ ಶುಭಕೋರಿದ್ದಾರೆ.  

Written by - Bhavishya Shetty | Last Updated : Dec 4, 2024, 03:26 PM IST
    • ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
    • ಈ ಅದ್ದೂರಿ ಮದುವೆಗೆ ಕುಟುಂಬದವರು ಹಾಗೂ ಆಪ್ತರು ಆಗಮಿಸುತ್ತಿದ್ದಾರೆ
    • ಶೋಭಿತಾ ಮತ್ತು ಅವರ ಪೋಷಕರ ಫೋಟೋಗಳನ್ನು ಹಂಚಿಕೊಂಡಿದ್ದಾರೆ
"ನನ್ನ ಜೀವನದ ಅತ್ಯಂತ..."- ನಾಗಚೈತನ್ಯ 2ನೇ ಮದುವೆಯಲ್ಲಿ ಸಮಂತಾ..! ವಧು ಶೋಭಿತಾರನ್ನು ನೋಡ್ತಿದ್ದಂತೆ ಭಾವುಕಳಾಗಿ ಹೇಳಿದ್ದೇನು? title=
Samantha statement about Sobhita Dhulipala

Samantha statement about Sobhita Dhulipala: ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಇಂದು (ಡಿಸೆಂಬರ್ 4) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಅದ್ದೂರಿ ಮದುವೆಗೆ ಕುಟುಂಬದವರು ಹಾಗೂ ಆಪ್ತರು ಆಗಮಿಸುತ್ತಿದ್ದಾರೆ. ಇನ್ನು ಈ ಎಲ್ಲದರ ಮಧ್ಯೆ ಸಮಂತಾ ಕೂಡ ನವಜೋಡಿ ಬಗ್ಗೆ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ಮನಗೆದ್ದಿದೆ.

ನಟಿ ಶೋಭಿತಾ ಧೂಳಿಪಾಲ ಅವರ ಸಹೋದರಿ ಸಮಂತಾ, ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ನವಜೋಡಿಗೆ ಶುಭಕೋರಿದ್ದಾರೆ.

ಇದನ್ನೂ ಓದಿ: ಒಂದು ಲೋಟ ನೀರಿಗೆ ಈ ಪದಾರ್ಥ ಮಿಕ್ಸ್‌ ಮಾಡಿ ಕುಡಿದರೆ ಕ್ಷಣದಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ

ಸಮಂತಾ ಇನ್ಸ್ಟಾಗ್ರಾಂನಲ್ಲಿ ಶೋಭಿತಾ ಮತ್ತು ಅವರ ಪೋಷಕರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ನೀನು ತುಂಬಾ ಸುಂದರವಾಹಿ ಕಾಣಿಸುತ್ತಿದ್ದೀಯಾ. ಅತ್ಯಂತ ಸುಂದರ ಮದುಮಗಳು, ನನ್ನ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿಗೆ ಚೀಯರ್ಸ್. ನನ್ನ ಪ್ರೀತಿ ಸಹೋದರಿ" ಎಂದಿದ್ದಾರೆ. ಇದರ ಜೊತೆಗೆ #SoChay ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಮಂತಾ ಸೇರಿಸಿದ್ದಾರೆ.

 

ನಾಗ ಚೈತನ್ಯ ಮತ್ತು ಶೋಭಿತಾ ತಮ್ಮ ನಿಶ್ಚಿತಾರ್ಥವನ್ನು ಆಗಸ್ಟ್‌ನಲ್ಲಿ ಮಾಡಿಕೊಂಡಿದ್ದರು. ಈ ಜೋಡಿ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ತಮ್ಮ ಸಂಬಂಧವನ್ನು ಎಂದಿಗೂ ದೃಢಪಡಿಸಿರಲಿಲ್ಲ. ನಂತರ, ಆಗಸ್ಟ್ 8, 2024 ರಂದು, ನಾಗಾರ್ಜುನ ಅವರು ತಮ್ಮ ಮಗ ನಾಗ ಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದರು.

ಫೋಟೋ ಶೇರ್‌ ಮಾಡಿ ನಾಗಾರ್ಜುನ ಹೀಗೆ ಬರೆದಿದ್ದರು, “ನನ್ನ ಮಗ ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಜೊತೆ ಇಂದು ಬೆಳಿಗ್ಗೆ 9:42ಕ್ಕೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಷಯವನ್ನು ಘೋಷಿಸಲು ಸಂತೋಷಪಡುತ್ತೇನೆ! ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಹ್ಯಾಪಿ ಕಪಲ್ಸ್‌ಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನಷ್ಟೇ ಹಾರೈಸುತ್ತೇನೆ. ದೇವರ ಆಶೀರ್ವಾದವಿರಲಿ!" ಎಂದಿದ್ದರು.

ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಅವರು ಶೋಭಿತಾ ಅವರೊಂದಿಗಿನ ಮದುವೆಯ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೆ ನೀಡಿದ್ದರು. ಶೋಭಿತಾ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆಯೇ ಎಂದು ಕೇಳಿದಾಗ, "ಹೌದು" ಎಂದು ಚೈತನ್ಯ ಹೇಳಿದ್ದಾರೆ.

ಇದನ್ನೂ ಓದಿ: ಮಧುಮೇಹಕ್ಕೆ ವರದಾನ ʼಈʼ ಬೀಜ.. ಬಿಸಿಲಲ್ಲಿ ಒಣಗಿಸಿ ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್!‌ ಕೊಲೆಸ್ಟ್ರಾಲ್‌ ಕೂಡಾ ಕರಗಿಹೋಗುತ್ತೆ!!

ಇದಾದ ಬಳಿಕ ಶೋಭಿತಾ ಕುಟುಂಬದ ಬಗ್ಗೆ ಮಾತನಾಡಿದ ಅವರು, “ಪ್ರತಿ ತೆಲುಗು ಮನೆಯಂತೆ, ಶೋಭಿತಾ ಅವರ ಕುಟುಂಬವೂ ತುಂಬಾ ಸುಸಂಸ್ಕೃತ ಮತ್ತು ಪ್ರೀತಿಯಿಂದ ಕೂಡಿದೆ. ನನ್ನನ್ನು ಮಗನಂತೆ ನಡೆಸಿಕೊಳ್ಳುತ್ತಾರೆ. ಶೋಭಿತಾ ಫ್ಯಾಮಿಲಿ ಗರ್ಲ್‌, ನಾವೆಲ್ಲರೂ ಒಟ್ಟಿಗೆ ಒಂದೆರಡು ಹಬ್ಬಗಳನ್ನು ಆಚರಿಸಿದ್ದೇವೆ. ಕಾಲಾನಂತರದಲ್ಲಿ ನಮ್ಮ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News