ʻನನಗೆ ನಟ ಪ್ರಭಾಸ್‌ ಬೇಕು, ಅವರನ್ನು ನಾನು ಮದುವೆಯಾಗಲು ಸಿದ್ದʼ..! ಅಭಿಮಾನಿಗಳಿಗೆ ಶಾಕ್‌ ಕೊಟ್ಟ ನಟಿಯ ಸೆನ್ಸೇಷನಲ್‌ ಕಾಮೆಂಟ್ಸ್‌

Actress Divi: ಟಾಲಿವುಡ್‌ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಮೊದಲಿಗೆ ನೆನಪಿಗೆ ಬರುವ ಹೆಸರು ನಟ ಡಾರ್ಲಿಂಗ್‌ ಪ್ರಭಾಸ್‌ ಅವರದ್ದು. ನಟ ಪ್ರಭಾಸ್‌ ಅವರಿಗೆ ಬೀಳದ ಹುಡುಗಿಯರೇ ಇಲ್ಲ, ಅವರನ್ನು ಮದುವೆಯಾಗೋಕೆ ಸಾಕಷ್ಟು ಹುಡುಗಿಯರಯ ಸಾಲು ಗಟ್ಟಿ ನಿಲ್ಲುತ್ತಾರೆ ಆದರೆ, ಅದ್ಯಾಕೋ ಏನೋ ಪ್ರಭಾಸ್‌ ಮಾತ್ರ ಮದುವೆಯಾಗೋ ಮನಸ್ಸೆ ಮಾಡ್ತಾ ಇಲ್ಲ.   

Written by - Zee Kannada News Desk | Last Updated : Jan 7, 2025, 08:12 PM IST
  • ಅದ್ಯಾಕೋ ಏನೋ ಪ್ರಭಾಸ್‌ ಮಾತ್ರ ಮದುವೆಯಾಗೋ ಮನಸ್ಸೆ ಮಾಡ್ತಾ ಇಲ್ಲ.
  • ನಟ ಪ್ರಭಾಸ್‌ ಅಂದ್ರೆ ಹುಚ್ಚು, ಅವರನ್ನು ಮದುವೆಯಾಗಬೇಕು ಎಂಬುದೆ ಈಕೆಯ ಕನಸು.
  • ಕಾಮೆಂಟ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
ʻನನಗೆ ನಟ ಪ್ರಭಾಸ್‌ ಬೇಕು, ಅವರನ್ನು ನಾನು ಮದುವೆಯಾಗಲು ಸಿದ್ದʼ..! ಅಭಿಮಾನಿಗಳಿಗೆ ಶಾಕ್‌ ಕೊಟ್ಟ ನಟಿಯ ಸೆನ್ಸೇಷನಲ್‌ ಕಾಮೆಂಟ್ಸ್‌ title=

Actress Divi: ಟಾಲಿವುಡ್‌ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಮೊದಲಿಗೆ ನೆನಪಿಗೆ ಬರುವ ಹೆಸರು ನಟ ಡಾರ್ಲಿಂಗ್‌ ಪ್ರಭಾಸ್‌ ಅವರದ್ದು. ನಟ ಪ್ರಭಾಸ್‌ ಅವರಿಗೆ ಬೀಳದ ಹುಡುಗಿಯರೇ ಇಲ್ಲ, ಅವರನ್ನು ಮದುವೆಯಾಗೋಕೆ ಸಾಕಷ್ಟು ಹುಡುಗಿಯರಯ ಸಾಲು ಗಟ್ಟಿ ನಿಲ್ಲುತ್ತಾರೆ ಆದರೆ, ಅದ್ಯಾಕೋ ಏನೋ ಪ್ರಭಾಸ್‌ ಮಾತ್ರ ಮದುವೆಯಾಗೋ ಮನಸ್ಸೆ ಮಾಡ್ತಾ ಇಲ್ಲ. 

ಸಾವಿರಾರು ಹುಡುಗಿಯರು ಪ್ರಭಾಸ್ ಗೆ ಲವ್ ಪ್ರಪೋಸ್ ಮಾಡಿ ಮದುವೆಯಾಗಲು ರೆಡಿಯಾಗಿದ್ದಾರೆ. ರೆಬೆಲ್ ಸ್ಟಾರ್ ಜೊತೆ ಒಮ್ಮೆಯಾದರೂ ಮಾತನಾಡಲು, ಒಟ್ಟಿಗೆ ಕಾಫಿ ಕುಡಿಯಲು ಮತ್ತು ಡೇಟಿಂಗ್ ಮಾಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಅದರಲ್ಲಿ ಈ ಬಿಗ್‌ ಬಾಸ್‌ ಬ್ಯೂಟಿಗೂ ಕೂಡ ನಟ ಪ್ರಬಾಸ್ ಅಂದ್ರೆ ಹುಚ್ಚು, ಅವರನ್ನು ಮದುವೆಯಾಗಬೇಕು ಎಂಬುದೆ ಈಕೆಯ ಕನಸು. ಅಷ್ಟಕ್ಕೂ ಈಕೆ ಬೇರೆ ಯಾರೂ ಅಲ್ಲ, ಬಿಗ್‌ ಬಾಸ್‌ ಖ್ಯಾತಿಯ ದಿವಿ ಅದ್ಯ. 

ದಿವಿ ಅದ್ಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ, ಈಕೆ ಬಿಗ್‌ ಬಾಸ್‌ ಅಷ್ಟೆ ಅಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಾಡಿದ್ದು ಕೆಲವೇ ಸಿನಿಮಾಗಳಾದರೂ ನಟಿ ದಿವಿ ಅದ್ಯ ಸಾವಿರಾರು ಅಭಿಮಾನಿಗನ್ನು ಸಂಪಾದಿಸಿಕೊಂಡಿದ್ದಾರೆ. ಸದ್ಯ ಇತ್ತೀಚೆಗೆ ದಿವಿ ಅವರು ಸಂದರ್ಶನವೊಂದರಲ್ಲಿ ನಟ ಪ್ರಭಾಸ್‌ ಅವರ ಕುರಿತು ಮಾಡಿರುವ ಕಾಮೆಂಟ್‌ಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ದಿವಿ ಅವರು ನಟ ಪ್ರBಸ್‌ ಅವರ ಬಗ್ಗೆ ಬಹಿರಂಗವಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ " ಪ್ರಭಾಸ್‌  ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಹಲವರು ಹೇಳಿರುವುದನ್ನು ನಾನು ಕೇಳಿದ್ದೇನೆ, ಮನೆಗೆ ಬಂದವರಿಗೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ ಎಂಬುದನ್ನು ನಾನು ಕೇಳಿದ್ದೇನೆ, ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು" ಎಂದು ದಿವಿ ಹೇಳಿದ್ದಾರೆ.

ಅಷ್ಟೆ ಅಲ್ಲ "ನಾನು ಪ್ರಬಾಸ್‌ ಅವರನ್ನು ಪ್ರೀತಿಸುತ್ತೇನೆ, ಅವರೊಂದಿಗೆ ಡೇಟ್‌ ಮಾಡಲು ಬಯಸುತ್ತೇನೆ, ಕಾಫಿ ಕುಡಿಯುತ್ತಾ ಅವರೊಂದಿಗೆ ಸಮಯ ಕಳೆಯುತ್ತೇನೆ, ಅವರೊಂದಿಗೆ ಮದುವೆಯಾಗಲು ಕೂಡ ನಾನು ಸಿದ್ದ" ಎಂದು ಬಹಿರಂಗವಾಗಿ ನಟಿ ಹೇಳಿಕೆ ನೀಡಿದ್ದಾರೆ, ಸದ್ಯ ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದು, ಪ್ರಭಾಸ್‌ ಅವರ ಉತ್ತರಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News