Bengalore Crime News: ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ನಾನಾ ರೀತಿಯಲ್ಲಿ ಸೈಬರ್ ಕ್ರೈಮ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಸಿಲಿಕಾನ್ ಸಿಟಿಯ ಜನ ಮೋಸದ ಜಾಲಕ್ಕೆ ಬೀಳುವುದು ಕಮ್ಮಿಯಾಗಿಲ್ಲ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿನಂತೆ ಸೈಬರ್ ಕ್ರೈಮ್ ಮಾಡುವ ಪಾತಕಿಗಳು ಹೊಸ ಹೊಸ ಹಾದಿಗಳ ಮೂಲಕ ಜನರನ್ನು ಯಾಮಾರಿಸುತ್ತಲೇ ಇದ್ದಾರೆ.
ಸೈಬರ್ ಕ್ರೈಮ್ ತಡೆಗಟ್ಟುವುದು ಬೆಂಗಳೂರು ಪೊಲೀಸರಿಗೆ ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ. ಸುಶಿಕ್ಷಿತರಿರುವ ನಗರ ಎನಿಸಿಕೊಂಡಿರುವ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಲ್ಲಿ ಸುಮಾರು ಒಂದು ಸಾವಿರ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ಕಿರಾತಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ವೋಚರ್, ಎಪಿಕೆ ಫೈಲ್ ಮತ್ತಿತರ ರೂಪದಲ್ಲಿ ವಂಚನೆ ಎಸೆಗಿದ್ದಾರೆ. ಸೈಬರ್ ವಂಚನೆಯ ಬಲೆಗೆ ಬಿದ್ದಿರುವ ಜನ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ನಿಜ ಹೇಳಬೇಕು ಅಂದ್ರೆ ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಅನ್ನು ಮಟ್ಟ ಹಾಕಬೇಕು ಎನ್ನುವ ಕಾರಣಕ್ಕಾಗಿಯೇ 8 ಠಾಣೆಗಳಿವೆ. ಇವಲ್ಲದೆ ಪ್ರತಿ ಪೊಲೀಸ್ ಸ್ಟೇಷನ್ ನಲ್ಲೂ ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತವೆ. ಆ ಠಾಣಾಧಿಕಾರಿಗಳೂ ತನಿಖೆ ನಡೆಸುತ್ತಾರೆ, ಕ್ರಮ ಕೈಗೊಳ್ಳುತ್ತಾರೆ. ಜೊತೆಗೆ ಕಾಲರ್ ಟ್ಯೂನ್, ಸೊಷಿಯಲ್ ಮೀಡಿಯಾ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಇಷ್ಟಾದರೂ ಸೈಬರ್ ಕ್ರೈಮ್ ನಿಯಂತ್ರಣಕ್ಕೆ ಬರುತ್ತಿಲ್ಲ.
ಇದನ್ನೂ ಓದಿ- ಮ್ಯಾಟ್ರಿಮೋನಿಯಲ್ಲಿ ಹುಡುಕಿ ಎರಡನೇ ಮದುವೆಯಾದ 60ರ ವ್ಯಕ್ತಿಗೆ ಶಾಕ್! ವಿಷಯ ತಿಳಿದ್ರೆ ನೀವೂ ಬೆಚ್ಚಿ ಬೀಳ್ತಿರಾ..!
ಪರಿಸ್ಥಿತಿ ಹೇಗಿದೆ ಎಂದರೆ ಸೈಬರ್ ಖದೀಮರ ದಾರಿಗಳ ಬಗ್ಗೆ ಪೊಲೀಸರಿಗೆ ಶಾಕ್ ಆಗಿದೆ. ಪೊಲೀಸರಂತೆ ಕಾಲ್ ಮಾಡುವ ವಂಚಕರು ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ. ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಅಂತಾ ಹೆದರಿಸುತ್ತಾರೆ. ಈಶಾನ್ಯ ವಿಭಾಗದಲ್ಲಿ ಟೆಕ್ಕಿಯೊಬ್ಬನಿಗೆ ಇದೇ ರೀತಿ ಬ್ಲಾಕ್ ಮೇಲ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿ 11 ಕೋಟಿ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದಾರೆ.
ಇದಲ್ಲದೆ ಪೋಸ್ಟ್ ಮೂಲಕ ಗಿಫ್ಟ್ ವಿನ್ನಿಂಗ್ ವೋಚರ್ ಕಳಿಸುತ್ತಾರೆ. ವೋಚರ್ ಸ್ಕ್ರಾಚ್ ಮಾಡಿದರೆ ನಿಮಗೆ 51 ಲಕ್ಷ ರೂಪಾಯಿ ರಿವಾರ್ಡ್ ಸಿಗುತ್ತೆ, ವೋಚರ್ ಕೆಳಗೆ ಇರುವ ನಂಬರ್ ಗೆ ಕಾಲ್ ಮಾಡಿ ಅಂತಾ ತಿಳಿಸುತ್ತಾರೆ. ಆ ನಂಬರ್ ಗೆ ಕಾಲ್ ಮಾಡಿದ್ರೆ ನಿಮ್ಮ ಗೂಗಲ್ ಪೇ, ಫೋನ್ ಪೇ ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಯಾಮಾರಿಸುತ್ತಾರೆ.
ಇದನ್ನೂ ಓದಿ- ಸಾಲ ಕೊಟ್ಟ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿದ ಭೂಪ! ದುಡ್ಡು, ಹೆಂಡ್ತಿ ಕಳೆದುಕೊಂಡ ವ್ಯಕ್ತಿ ಕಂಗಾಲು!!
ಕೊರಿಯರ್ ಮೂಲಕ ಮೊಬೈಲ್ ಅನ್ನು ಗಿಫ್ಟ್ ಕಳಿಸುವ ಮೂಲಕವೂ ವಂಚನೆ ಮಾಡಲಾಗುತ್ತದೆ. ಇದೇ ರೀತಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಮೊಬೈಲ್ ಗಿಫ್ಟ್ ಕಳಿಸಿದ್ದಾರೆ. ಮೊಬೈಲ್ ಸಿಕ್ಕ ಖುಷಿಯಲ್ಲಿ ಟೆಕ್ಕಿ ತಮ್ಮ ಸಿಮ್ ಅನ್ನು ಆ ಮೊಬೈಲ್ ಗೆ ಹಾಕಿದ್ದಾರೆ. ಆ ಮೊಬೈಲ್ ನಲ್ಲಿ ಮೊದಲೇ ಕೆಲವು ಆ್ಯಪ್ ಇನ್ಸ್ಟಾಲ್ ಮಾಡಿದ್ದ ಖದೀಮರು ಸಿಮ್ ಹಾಕುತ್ತಿದ್ದಂತೆ ಅವರ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಗಳನ್ನು ಹಣವನ್ನು ಕದ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವೈಟ್ ಫಿಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಜೊತೆಗೆ ಎಪಿಕೆ ಫೈಲ್ ಕಳಿಸಿ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡ್ತಾರೆ. ವರ್ಕ್ ಫ್ರಮ್ ಹೋಮ್ ಅಂತಾ ಮಾಹಿತಿ ತೆಗೆದುಕೊಂಡು ಮೋಸ ಮಾಡ್ತಾರೆ. ರೇಟಿಂಗ್ ನೀಡುವುದಾಗಿ ಆಮಿಷವೊಡ್ಡಿ ಯಾಮಾರಿಸುತ್ತಾರೆ. ಹೀಗೆ ಸೈಬರ್ ಕಳ್ಳರು ನಾನಾ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.