ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಟ್ರೆಂಡ್ ಈಗ ಶೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರುತ್ತಿದೆ. ಹೌದು, ಚುನಾವಣೋತ್ತರ ಸಮೀಕ್ಷೆಗೆ ಅನುಗುಣವಾಗಿ ಫಲಿತಾಂಶದ ಟ್ರೆಂಡ್ ಇರದ ಕಾರಣ ಏಕಾಏಕಿ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.
ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್‌ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್‌ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು.
ಇದನ್ನೂ ಓದಿ: Karnataka Lok Sabha Election Results 2024: ಕರ್ನಾಟಕದ 'ಲೋಕ' ಸಮರದಲ್ಲಿ ಗೆದ್ದವರು ಯಾರು ಸೋತವರು ಯಾರು?
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್ "ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈ ತೀವ್ರ ಕುಸಿತವು ಮುಖ್ಯವಾಗಿ ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿನ ನಿರಾಶಾದಾಯಕ ಆರಂಭಿಕ ಟ್ರೆಂಡ್ ಗಳಿಂದಾಗಿ ಹೀಗಾಗಿದೆ. ಈ ಟ್ರೆಂಡ್ ಅಂತೂ ಖಂಡಿತವಾಗಿಯೂ ಅಲ್ಲ." ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಆದಾಗ್ಯೂ, ಇವು ಆರಂಭಿಕ ಟ್ರೆಂಡ್ ಗಳು ಮತ್ತು ಮುಂದಿನ ಒಂದರಿಂದ ಎರಡು ಗಂಟೆಗಳಲ್ಲಿ ಚಿತ್ರವು ಹೆಚ್ಚು ಸ್ಪಷ್ಟವಾಗುತ್ತದೆ ಎಂದು ಅವಿನಾಶ್ ಗೋರಕ್ಷಕ್ ಸಮರ್ಥಿಸಿಕೊಂಡಿದ್ದಾರೆ.ಹೂಡಿಕೆದಾರರಿಗೆ 'ಕಟ್ಟುನಿಟ್ಟಾದ ಸ್ಟಾಪ್ ಲಾಸ್' ಅನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ