Bank Rules: ಚೆಕ್‌ ಮೇಲೆ ಒಟ್ಟು ಹಣದ ಮುಂದೆ ''Only'' ಪದ ಬರೆಯೋದು ಯಾಕೆ ಗೊತ್ತಾ?

bank rules cheque: ಇಂದಿನ ಕಾಲದಲ್ಲಿ ಆನ್‌ಲೈನ್ ವಹಿವಾಟುಗಳ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಚೆಕ್‌ಗಳ ಮಹತ್ವ ಕಡಿಮೆಯಾಗಿಲ್ಲ. ಎಲ್ಲಾ ವ್ಯವಹಾರಗಳು ಇನ್ನೂ ಚೆಕ್‌ಗಳ ಮೂಲಕವೇ ನಡೆಯುತ್ತವೆ. 

Written by - Chetana Devarmani | Last Updated : Jan 14, 2025, 11:14 AM IST
  • ಬ್ಯಾಂಕ್ ನಿಯಮಗಳು
  • ಚೆಕ್‌ ಭರ್ತಿ ಮಾಡುವಾಗ 'Only' ಎಂದು ಬರೆಯೋದೇಕೆ?
  • ನೀವು ಎಂದಾದರೂ ಯೋಚಿಸಿದ್ದೀರಾ?
Bank Rules: ಚೆಕ್‌ ಮೇಲೆ ಒಟ್ಟು ಹಣದ ಮುಂದೆ ''Only'' ಪದ ಬರೆಯೋದು ಯಾಕೆ ಗೊತ್ತಾ?  title=
bank rules cheque

bank rules cheque: ಇಂದಿನ ಕಾಲದಲ್ಲಿ ಆನ್‌ಲೈನ್ ವಹಿವಾಟುಗಳ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಚೆಕ್‌ಗಳ ಮಹತ್ವ ಕಡಿಮೆಯಾಗಿಲ್ಲ. ಎಲ್ಲಾ ವ್ಯವಹಾರಗಳು ಇನ್ನೂ ಚೆಕ್‌ಗಳ ಮೂಲಕವೇ ನಡೆಯುತ್ತವೆ. ಚೆಕ್ ಮೂಲಕ ಪಾವತಿ ಮಾಡುವಾಗ, ಸ್ವೀಕರಿಸುವವರ ಹೆಸರು, ಬ್ಯಾಂಕ್ ವಿವರಗಳು ಮತ್ತು ವರ್ಗಾಯಿಸಬೇಕಾದ ಮೊತ್ತವನ್ನು ಅದರಲ್ಲಿ ಬರೆಯಲಾಗುತ್ತದೆ. ಬಳಿಕ ಸಹಿ ಮಾಡಲಾಗುತ್ತದೆ. 

ಚೆಕ್‌ನಲ್ಲಿ ಹಣದ ಒಟ್ಟು ಮೊತ್ತವನ್ನು ಭರ್ತಿ ಮಾಡಿದ ನಂತರ, "ONLY" ಎಂದು ಬರೆಯಲ್ಪಟ್ಟಿರುವುದನ್ನು ಮತ್ತು "/-" I ಗೆರೆ ಎಳೆಯುವುದನ್ನು ನೀವು ಗಮನಿಸಿರಬೇಕು. ಆದರೆ ಇದನ್ನು ಯಾಕೆ ಮಾಡಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕಾರಣ ಇಲ್ಲಿದೆ ನೋಡಿ

ಇದನ್ನೂ ಓದಿ: ಸಂಕ್ರಾಂತಿ ಹೊತ್ತಿನಲ್ಲಿ ಸರ್ಕಾರಿ ನೌಕರರಿಗೆ ತ್ರಿಬಲ್ ಧಮಾಕ! ಡಿಎ ಹೆಚ್ಚಳ, ಅರಿಯರ್ಸ್, ವೇತನ ಹೆಚ್ಚಳದ ಅಪ್ಡೇಟ್

ಚೆಕ್ ಮೇಲೆ ಮೊತ್ತ ಬರೆದ ನಂತರ 'ONLY' ಎಂದು ಬರೆಯದಿದ್ದರೆ, ಚೆಕ್‌ನಲ್ಲಿ ದೊಡ್ಡ ತಪ್ಪು ಆದಂತೆ ಅಥವಾ ಅದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅರ್ಥವಲ್ಲ. ಅಂತಹ ಯಾವುದೇ ನಿಯಮವಿಲ್ಲ. ಚೆಕ್‌ನಲ್ಲಿ ಮೊತ್ತವನ್ನು ಬರೆದ ನಂತರ, 'ONLY' ಎಂದು ಬರೆಯುವುದರಿಂದ ಚೆಕ್ ಒಂದು ರೀತಿಯಲ್ಲಿ ಸುರಕ್ಷಿತವಾಗುತ್ತದೆ.

ಚೆಕ್‌ನಲ್ಲಿ ಮೊತ್ತವನ್ನು ಭರ್ತಿ ಮಾಡಿದ ನಂತರ, ನೀವು 'ONLY' ಎಂದು ಬರೆದು ನಂತರ "/-" ಹೀಗೆ ಎಳೆದಾಗ, ಮೊತ್ತದ ನಂತರ ಏನನ್ನೂ ಸೇರಿಸಲು ಸ್ಥಳಾವಕಾಶವಿರುವುದಿಲ್ಲ. ಇದರಿಂದ ಖಾತೆಯ ಮೂಲಕ ನಡೆಯುವ ವಂಚನೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ನೀವು ಯಾರೊಬ್ಬರ ಹೆಸರಿನಲ್ಲಿ 20,000 ರೂ.ಗಳ ಚೆಕ್ ಅನ್ನು ನೀಡುತ್ತೀರಿ ಮತ್ತು ಮೊತ್ತವನ್ನು ನಮೂದಿಸಿದ ನಂತರ ಏನನ್ನೂ ಬರೆಯದೆ ಬಿಟ್ಟಿದ್ದೀರಿ ಎಂದು ಭಾವಿಸೋಣ. 20,000 ದ ನಂತರ ಯಾವುದೇ ಸಂಖ್ಯೆಯನ್ನು ಸೇರಿಸಬಹುದು. ಇಲ್ಲಿ ಅವಕಾಶ ಸುಲಭವಾಗಿರುತ್ತದೆ. ಆದರೆ ನೀವು ʻ20,000/- Onlyʼ ಎಂದು ಬರೆದಾಗ ಮೊತ್ತದ ನಂತರ ಬೇರೆ ಏನನ್ನೂ ಬರೆಯಲು ಜಾಗವಿರುವುದಿಲ್ಲ. ಇದು ನಿಮ್ಮ ಚೆಕ್ ಅನ್ನು ಸ್ವಲ್ಪ ಮಟ್ಟಿಗೆ ಸುರಕ್ಷಿತಗೊಳಿಸುತ್ತದೆ.

ಇದನ್ನೂ ಓದಿ: ಭಾರತದ ಈ 7 ರೈಲು ನಿಲ್ದಾಣಗಳಿಂದ ವಿದೇಶಗಳಿಗೂ ಪ್ರಯಾಣ ಮಾಡಬಹುದು...

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News