ʼಪಿಎಂ ಕಿಸಾನ್ ಯೋಜನೆʼಯ 19ನೇ ಕಂತು ರೈತರ ಖಾತೆಗಳಿಗೆ ಯಾವಾಗ ಬರುತ್ತೆ? ಸರ್ಕಾರವು ಈ ಮಾಹಿತಿ ನೀಡಿದೆ!!

PM Kisan Samman Nidhi Scheme: ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನವು ಈ ಯೋಜನೆಯಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ರೈತರಿಗೆ ಮಾತ್ರ ಲಭ್ಯವಿದೆ.

Written by - Puttaraj K Alur | Last Updated : Feb 8, 2025, 07:13 PM IST
  • ʼಪಿಎಂ ಕಿಸಾನ್ ಸಮ್ಮಾನ್ ನಿಧಿʼಗೆ ಅರ್ಹರಾಗಿರುವ ರೈತರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ
  • ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ಅರ್ಹ ರೈತರಿಗೆ 19ನೇ ಕಂತಿನ ಹಣ ವಿತರಣೆ
  • ʼಪಿಎಂ ಕಿಸಾನ್ ಯೋಜನೆʼಯಲ್ಲಿ ನೋಂದಾಯಿಸಲಾದ ರೈತರಿಗೆ ಇ-ಕೆವೈಸಿ ಕಡ್ಡಾಯ
ʼಪಿಎಂ ಕಿಸಾನ್ ಯೋಜನೆʼಯ 19ನೇ ಕಂತು ರೈತರ ಖಾತೆಗಳಿಗೆ ಯಾವಾಗ ಬರುತ್ತೆ? ಸರ್ಕಾರವು ಈ ಮಾಹಿತಿ ನೀಡಿದೆ!! title=
ಪಿಎಂ ಕಿಸಾನ್ 19ನೇ ಕಂತು

PM Kisan 19th Installment: ʼಪಿಎಂ ಕಿಸಾನ್ ಸಮ್ಮಾನ್ ನಿಧಿʼಗೆ ಅರ್ಹರಾಗಿರುವ ರೈತರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ʼಪ್ರಧಾನ ಮಂತ್ರಿ ಕಿಸಾನ್ ಯೋಜನೆʼಯ 19ನೇ ಕಂತು ರೈತರ ಖಾತೆಗಳಿಗೆ ಯಾವಾಗ ಜಮಾ ಆಗಲಿದೆ ಎಂಬುದರ ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ʼಪಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆʼಯ 19ನೇ ಕಂತನ್ನು ಫೆಬ್ರವರಿ 2025ರ ಅಂತ್ಯದ ವೇಳೆಗೆ ಅರ್ಹ ರೈತರಿಗೆ ವಿತರಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ಫೆಬ್ರವರಿ 24ರಂದು ಬಿಹಾರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ವೈಯಕ್ತಿಕವಾಗಿ ಹಣವನ್ನು ವರ್ಗಾಯಿಸಲಿದ್ದಾರೆಂದು ಹೇಳಲಾಗಿದೆ. 

ಇ-ಕೆವೈಸಿ ಮಾಡಿಸಿ

ʼಪಿಎಂ ಕಿಸಾನ್ ಯೋಜನೆʼಯಲ್ಲಿ ನೋಂದಾಯಿಸಲಾದ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ, ನೀವು ʼಪಿಎಂ ಕಿಸಾನ್ʼ ಕಂತಿನ ಹಣ ಪಡೆಯಲು ಸಾಧ್ಯವಾಗುವುದಿಲ್ಲ. OTP ಆಧಾರಿತ eKYC PMKISAN ಪೋರ್ಟಲ್‌ನಲ್ಲಿ ಲಭ್ಯವಿದೆ. ಬಯೋಮೆಟ್ರಿಕ್ ಆಧಾರಿತ eKYCಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದು. ಇದಲ್ಲದೆ ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಬಿಗ್‌ ಶಾಕ್! Namma Metro ಪ್ರಯಾಣ ದರದಲ್ಲಿ ಭಾರೀ ಏರಿಕೆ, ನಾಳೆಯಿಂದಲೇ ಜಾರಿ!!

ಫಲಾನುಭವಿಗಳ ಪಟ್ಟಿಯಲ್ಲಿ ಈ ರೀತಿ ನಿಮ್ಮ ಹೆಸರು ನೋಡಿ

ಹಂತ 1: ಅಧಿಕೃತ ʼಪಿಎಂ ಕಿಸಾನ್ʼ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಫಲಾನುಭವಿಗಳ ಪಟ್ಟಿ ಪುಟವನ್ನು ಪ್ರವೇಶಿಸಿ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
ಹಂತ 4: 'ವರದಿ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ ಮತ್ತು ಫಲಾನುಭವಿ ಪಟ್ಟಿಯಿಂದ ನಿಮ್ಮ ಹೆಸರನ್ನು ಪರಿಶೀಲಿಸಿ.

2019ರಲ್ಲಿ ಯೋಜನೆ ಪ್ರಾರಂಭ

ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯನ್ನು 2019ರ ಫೆಬ್ರವರಿ 24ರಂದು ಪ್ರಾರಂಭಿಸಲಾಯಿತು. ಅಂದಿನಿಂದ ಸರ್ಕಾರವು ಈ ಯೋಜನೆಯ ಪ್ರಯೋಜನಗಳನ್ನು ದೇಶದ ಲಕ್ಷಾಂತರ ರೈತರಿಗೆ ನೀಡುತ್ತಿದೆ. 

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.. 8,650 ರೂ.ಗೆ ಇಳಿದ 1 ಗ್ರಾಂ ಬಂಗಾರದ ದರ! ಇಂದು 10 ಗ್ರಾಂ ಆಭರಣ ಚಿನ್ನದ ದರ ಎಷ್ಟಾಗಿದೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News