ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್ ! ಇನ್ನು ಇವರು ತೆರಿಗೆ ಪಾವತಿಸುವಂತಿಲ್ಲ

FM Nirmala sitharaman update on Income Tax: ಹೊಸ ತೆರಿಗೆ ಪದ್ಧತಿಯ ಮೇಲೆ ಗಮನ ಕೇಂದ್ರೀಕರಿಸಿದ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ 7 ಲಕ್ಷದವರೆಗಿನ ತೆರಿಗೆ ವಿನಾಯಿತಿ ನೀಡಿದೆ. ಇದರೊಂದಿಗೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯವಿವೆ. 

Written by - Ranjitha R K | Last Updated : Apr 3, 2023, 12:00 PM IST
  • ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ
  • ಸಿಗುತ್ತಿದೆ ಅನೇಕ ರೀತಿಯ ತೆರಿಗೆ ವಿನಾಯಿತಿ
  • ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್ !  ಇನ್ನು ಇವರು ತೆರಿಗೆ ಪಾವತಿಸುವಂತಿಲ್ಲ  title=

Income Tax Slab : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಬಹಳ ಒಳ್ಳೆಯ ಸುದ್ದಿ ನೀಡಿದ್ದಾರೆ. ಇದೀಗ ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಈ ವರ್ಷ ತೆರಿಗೆ ಉಳಿಸುವ ಯೋಚನೆ ನಿಮದಾಗಿದ್ದರೆ ಈ ಸುದ್ದಿ ನಿಮಗಾಗಿ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಸೀತಾರಾಮನ್ ಈ ಬಾರಿ ಬಜೆಟ್ ನಲ್ಲಿ ಘೋಷಿಸಿದ್ದರು. ಹೊಸ ಹಣಕಾಸು ವರ್ಷದಲ್ಲಿ ಜಾರಿಗೆ ತಂದಿರುವ ಆದಾಯ ತೆರಿಗೆ ನಿಯಮಗಳಲ್ಲಿ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. ಹಾಗಿದ್ದರೆ ಯಾವ ನಿಯಮಗಳು ಈಗ ಬದಲಾಗಿವೆ  ನೋಡೋಣ. 

ಸಿಗುತ್ತಿದೆ ಅನೇಕ ರೀತಿಯ ತೆರಿಗೆ ವಿನಾಯಿತಿ : 
ಹೊಸ ತೆರಿಗೆ ಪದ್ಧತಿಯ ಮೇಲೆ ಗಮನ ಕೇಂದ್ರೀಕರಿಸಿದ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ 7 ಲಕ್ಷದವರೆಗಿನ ತೆರಿಗೆ ವಿನಾಯಿತಿ ನೀಡಿದೆ. ಇದರೊಂದಿಗೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯವಿವೆ. ಏಪ್ರಿಲ್ 1, 2023 ರಿಂದ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿದೆ. ಇನ್ನು ಮುಂದೆ, ಐಟಿಆರ್ ಪೋರ್ಟಲ್‌ನ ಸಂಪೂರ್ಣ ಸ್ವರೂಪವು ಹೊಸ ತೆರಿಗೆ ಆಡಳಿತ ವ್ಯವಸ್ಥೆಗೆ ಅನುಗುಣವಾಗಿರುತ್ತದೆ. 

ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಖರೀದಿಸುವುದಾದರೇ ಇಂದೇ ಖರೀದಿಸಿ

ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ :  
ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆಯನ್ನು ಸಲ್ಲಿಸಿದ್ದರೆ, ಅದನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಬೇಕಾಗುತ್ತದೆ. ಯಾಕೆಂದರೆ ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆಯನ್ನು ಸಲ್ಲಿಸುವ ಆಯ್ಕೆ ಕೂಡಾ ಇರುತ್ತದೆ.  ಪ್ರಸ್ತುತ, ಹೂಡಿಕೆ ಮತ್ತು ಎಚ್‌ಆರ್‌ಎಯಂತಹ ವಿನಾಯಿತಿಗಳೊಂದಿಗೆ ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ :  
ಹೊಸ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ, 7 ಲಕ್ಷದವರೆಗಿನ ಆದಾಯವನ್ನು ವಾರ್ಷಿಕವಾಗಿ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಅಂದರೆ ನಿಮ್ಮ ವಾರ್ಷಿಕ ಆದಾಯ 7 ಲಕ್ಷ ರೂ ಆಗಿದ್ದರೆ, ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಯಾವ್ಯಾವ ಮಾರುಕಟ್ಟೆಯಲ್ಲಿ ದರ ಹೇಗಿದೆ..?

ಮೂಲ ವಿನಾಯಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ : 
ಹೊಸ ತೆರಿಗೆ ಪದ್ಧತಿಯಲ್ಲಿ, ಮೂಲ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ 2.5 ಲಕ್ಷ  ವರೆಗಿನ ಆದಾಯದ ಮೇಲೆ ತೆರಿಗೆ ಇರಲಿಲ್ಲ. 6 ತೆರಿಗೆ ಸ್ಲ್ಯಾಬ್‌ಗಳ ಬದಲಿಗೆ, ಈಗ 5 ತೆರಿಗೆ ಸ್ಲ್ಯಾಬ್‌ಗಳು ಇರಲಿದ್ದು, ಇದರಲ್ಲಿ 7 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಇದಲ್ಲದೇ, ಹೊಸ ತೆರಿಗೆ ಪದ್ಧತಿಯಲ್ಲಿ ರೂ.15.5 ಲಕ್ಷ ಆದಾಯ ಇರುವವರಿಗೆ 52,500 ರೂಪಾಯಿಯ ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಪ್ರಯೋಜನ  ಸಿಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News