TDS Rules: ಸಂಬಳದ ಮೇಲೆ ಟಿಡಿಎಸ್ ಕಡಿತ ಮಾಡುವ ನಿಯಮಗಳಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಸಂಬಳದ ಮೇಲಿನ ಟಿಡಿಎಸ್ ವಾಪಸ್ ಕೊಡುವ ಸಂದರ್ಭದಲ್ಲಿ ಸಂಬಳವಲ್ಲದ ಬ್ಯಾಂಕ್ ಬಡ್ಡಿ, ಬಾಡಿಗೆ ಮತ್ತಿತರ ಆದಾಯಗಳ ಮೇಲಿನ ಟಿಡಿಎಸ್/ಟಿಸಿಎಸ್ ಲಾಭವನ್ನೂ ನೀಡುವಂತಹ ಹೊಸ ನಿಯಮವನ್ನು ರೂಪಿಸಲಾಗಿದೆ. ಇದರಿಂದಾಗಿ ಸಂಬಳ ಪಡೆಯುವ ಉದ್ಯೋಗಿಗಳ ಮೇಲಿನ ಎರಡು ರೀತಿಯ ತೆರಿಗೆ ಕಡಿತವನ್ನು ಕಡಿಮೆ ಮಾಡಿದಂತಾಗುತ್ತದೆ.
ಏನದು ಮಹತ್ವದ ಬದಲಾವಣೆ?
ಹಿಂದೆ ಸಂಬಳ ಪಡೆಯುವ ನೌಕರರು ಮತ್ತು ಸಂಬಳದ ಜೊತೆಗೆ ಸಂಬಳೇತರ ಆದಾಯದ ಮೇಲೆ ಪ್ರತ್ಯೇಕವಾಗಿ ಟಿಡಿಎಸ್ ಪಾವತಿಸಬೇಕಾಗಿತ್ತು. ಆದರೆ ಹೊಸ ನಿಯಮದ ಅನುಸಾರ ಈಗಾಗಲೇ ಸಂಬಳೇತರ ಆದಾಯದ ಮೇಲೆ ಕಡಿತಗೊಳಿಸಲಾಗಿರುವ TDS/TCS ಅನ್ನು ಗಣನೆಗೆ ತೆಗೆದುಕೊಂಡು ಸಂಬಳದ ಮೇಲೆ TDS ಕಡಿತಗೊಳಿಸಲಾಗುತ್ತದೆ.ಇದು ಸಂಬಳ ಪಡೆಯುವ ನೌಕರರು ಪಾವತಿಸುವ ಒಟ್ಟು ಟಿಡಿಎಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ- ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್, ಎಲ್ಪಿಜಿ ಬೆಲೆಯಲ್ಲಿ ಭಾರೀ ಇಳಿಕೆ
ಉದಾಹರಣೆಗೆ ನಿಮ್ಮ ಸಂಬಳ ವಾರ್ಷಿಕ 10 ಲಕ್ಷ ರೂಪಾಯಿ ಮತ್ತು ಸಂಬಳೇತರ ಆದಾಯ 5 ಲಕ್ಷ ರೂಪಾಯಿ ಆಗಿದ್ದು ಅದರಲ್ಲಿ ಈಗಾಗಲೇ ಟಿಡಿಎಸ್/ಟಿಸಿಎಸ್ ಕಡಿತಗೊಳಿಸಿದ್ದರೆ ಮೊದಲು 15 ಲಕ್ಷ ರೂಪಾಯಿ ಮೇಲೆ ಟಿಡಿಎಸ್ ಕಡಿತ ಮಾಡಲಾಗಿತ್ತು. ಈಗ 15 ಲಕ್ಷದಿಂದ 5 ಲಕ್ಷ ರೂಪಾಯಿವನ್ನು ಪ್ರತ್ಯೇಕಿಸಿ ಕೇವಲ 10 ಲಕ್ಷ ರೂಪಾಯಿ ಆದಾಯದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ಇದನ್ನೂ ಓದಿ- Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5 ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..!
ಹೊಸ ನಿಯಮದ ಲಾಭಗಳೇನು?
ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಸಂಬಳೇತರ ಆದಾಯದ ಮೇಲೆ ಕಡಿತಗೊಳಿಸಲಾದ ಟಿಡಿಎಸ್ ಲಾಭವನ್ನು ತಕ್ಷಣವೇ ಪಡೆಯಬಹುದು. ನೌಕರರಿಗೆ ಇನ್ನು ಮುಂದೆ ಹೆಚ್ಚುವರಿ ತೆರಿಗೆ ಕಡಿತದ ಸಮಸ್ಯೆ ಇರುವುದಿಲ್ಲ. 2024ರ ಡಿಸೆಂಬರ್ 27ರಿಂದ ಟಿಡಿಎಸ್ ಸಾಫ್ಟ್ವೇರ್ ನವೀಕರಿಸಿರುವುದರಿಂದ Q4 ರಿಂದ (ಜನವರಿ 2025), ಸಂಬಳ ಪಡೆಯುವ ಉದ್ಯೋಗಿಗಳು ಸರಿಯಾದ ಟಿಡಿಎಸ್ ಪ್ರಮಾಣಪತ್ರ ಪಡೆಯಬಹುದು. ಹೊಸ ನಿಯಮ ತೆರಿಗೆ ವ್ಯವಸ್ಥೆಯನ್ನು ಸರಳ ಮತ್ತು ತೆರಿಗೆದಾರ ಸ್ನೇಹಿಯನ್ನಾಗಿ ಮಾಡುತ್ತದೆ. 2024ರ ಅಕ್ಟೊಬರ್ 1ರಿಂದಲೇ ಹೊಸ ನಿಯಮವು ಜಾರಿಗೆ ಬಂದಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.