Union Budget Expectations: ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ಅಪಾರ ನಿರೀಕ್ಷೆಗಳಿವೆ. ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ, ವಿಪರೀತವಾಗಿರುವ ತೆರಿಗೆಗಳಿಂದ ಕಂಗಾಲಾಗಿರುವ ಜನ ಕೇಂದ್ರ ಬಜೆಟಿನಲ್ಲಿ ಸ್ವಲ್ಪವಾದರೂ ಸುಧಾರಣಾ ಕ್ರಮಗಳಾಗಬಹುದು ಎನ್ನುವ ಆಶಾಭಾವನೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ನಿರೀಕ್ಷೆಗಳು ಏನೇನು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.
ಹಿಂದಿನ ಕೇಂದ್ರ ಬಜೆಟ್ನಲ್ಲಿ ಬಿಹಾರಕ್ಕೆ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ. ಅನುದಾನ ಮತ್ತು ಆಂಧ್ರಕ್ಕೆ ಸುಮಾರು 15,000 ಕೋಟಿ ರೂ. ಅನುದಾನ ನೀಡಿ ಬೇರೆ ರಾಜ್ಯಗಳನ್ನು ಕಡೆಗಣಿಸಲಾಗಿತ್ತು. 2025-26ರ ಬಜೆಟ್ನಲ್ಲಿ ಅದನ್ನು ಸರಿಪಡಿಸಬಹುದೆಂಬುದು ರಾಜ್ಯದ ಜನರ ನಿರೀಕ್ಷೆಯಿದೆ.
ಯೋಜನೆಗಳ ನಿರೀಕ್ಷೆ!
● ಬೆಂಗಳೂರು ದಕ್ಷಿಣ, ಪಶ್ಚಿಮ, ಮತ್ತು ಹೊರವಲಯಗಳಲ್ಲಿಯೂ ಮೆಟ್ರೋ ಸಂಪರ್ಕ ವಿಸ್ತರಣೆಗೆಗಾಗಿ ಮೆಟ್ರೋ 4ನೇ ಹಂತಕ್ಕೆ ಹೆಚ್ಚಿನ ಅನುದಾನ.
● ಹಿಂದಿನ ಕೇಂದ್ರ ಬಜೆಟ್ನಲ್ಲಿ 12 ಕೈಗಾರಿಕಾ ಸ್ಮಾರ್ಟ್ ಸಿಟಿ ಯೋಜನೆ ಘೋಷಿಸಿ ಕರ್ನಾಟಕಕ್ಕೆ ಒಂದನ್ನು ಕೊಟ್ಟಿರಲಿಲ್ಲ. ಈ ಬಾರಿ ಕೊಡಬಹುದೆಂಬ ನಿರೀಕ್ಷೆ.
● ರಾಜ್ಯದಲ್ಲಿ ಸೆಮಿಕಂಡಕ್ಟರ್ ಹೂಡಿಕೆಗೆ ಬೇಕಾಗುವ ಎಲ್ಲಾ ಸೌಲಭ್ಯವಿರುವುದರಿಂದ ಯೋಜನೆ ಬರಬಹುದೆಂಬ ನಿರೀಕ್ಷೆ.
● ರಾಜ್ಯದ ಮುಖ್ಯ ನಗರಗಳಲ್ಲಿ ಹೊಸ ಬಸ್ ಟರ್ಮಿನಲ್ಗಳನ್ನು ಅಭಿವೃದ್ಧಿಪಡಿಸಲು ಯೋಜನೆ.
● ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೈತರಿಗೆ ಬೆಂಬಲ ನೀಡಲು ಹೊಸ ಕೋಲ್ಡ್ ಸ್ಟೋರೇಜ್ ಸ್ಥಾಪನೆ.
● ಕೃಷಿ ಚಟುವಟಿಕೆಗಳಿಗೆ ನೆರವಾಗಲು ಹೊಸ ಕೆರೆಗಳನ್ನು ಪುನರ್ವ್ಯವಸ್ಥೆಗೊಳಿಸುವ ಮತ್ತು ಸುಧಾರಣೆಗೊಳಿಸುವ ಯೋಜನೆಗಳು.
● ಬೆಂಗಳೂರಿನಿಂದ ಮೈಸೂರಿಗೆ ಹೈಸ್ಪೀಡ್ ರೈಲ್ ಯೋಜನೆಗೆ ಹೊಸ ಹೂಡಿಕೆಗಳು.
● ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಸ್ತರಿಸಲು ಯೋಜನೆ.
● ಯುವಕರಿಗೆ ನೌಕರಿ ಕಲ್ಪಿಸುವ ಹೊಸ ತರಬೇತಿ ಕೇಂದ್ರಗಳು.
● ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಪ್ರದೇಶಗಳಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಲು ಕೈಗಾರಿಕಾ ಪಾರ್ಕ್ಗಳ ಸ್ಥಾಪನೆ.
ಇದನ್ನೂ ಓದಿ- ಆದಾಯ ತೆರಿಗೆಯಲ್ಲಿ 3 ಮಹತ್ವದ ಬದಲಾವಣೆ: ಮಧ್ಯಮ ವರ್ಗದವರಿಗೆ ಜಾಕ್ ಪಾಟ್!
ಅನುದಾನ ಹಂಚಿಕೆ ನಿರೀಕ್ಷೆ:
● ಕೇಂದ್ರ ಸರ್ಕಾರ 2023-24ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಹಣವನ್ನು ಘೋಷಿಸಿತ್ತು ಆದರೆ 2023 ಮತ್ತು 2024ರಲ್ಲೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಈಗಿನ ಬಜೆಟ್ ನಲ್ಲಿ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ.
● ರಾಜ್ಯದ ಅಭಿವೃದ್ಧಿಗೆ ₹21,000 ಕೋಟಿ ಸೇರಿದಂತೆ ನಗರಗಳಿಗೆ ಸಮಗ್ರ ಮೂಲಸೌಕರ್ಯ ಒದಗಿಸಲು ಅಮೃತ್ ಅಡಿಯಲ್ಲಿ ₹10,000 ಕೋಟಿ ಅನುದಾನ ನೀಡಬಹುದೆಂಬ ನಿರೀಕ್ಷೆ.
● 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯದ ಪಾಲು ಕಡಿತವನ್ನು ಸರಿದೂಗಿಸಲು ₹ 5,495 ಕೋಟಿ ನಿರೀಕ್ಷೆ.
● ಪೆರಿಫೆರಲ್ ರಿಂಗ್ ರಸ್ತೆ ಮತ್ತು ಜಲಮೂಲಗಳ ಪುನಶ್ಚೇತನಕ್ಕೆ ₹6,000 ಕೋಟಿ ವಿಶೇಷ ಅನುದಾನ ನೀಡಬಹುದೆಂಬ ನಿರೀಕ್ಷೆ.
● ಬೆಂಗಳೂರಿನ ಜನಸಂದಣಿ ಕಡಿಮೆ ಮಾಡಲು ಎರಡು ನಗರ ಸುರಂಗಗಳು ಮತ್ತು ಎರಡು ಎಲಿವೇಟೆಡ್ ಕಾರಿಡಾರ್ಗಳಿಗೆ 36,950 ಕೋಟಿ ರೂ. ಮಂಜೂರು ಮಾಡಬಹುದೆಂಬ ನಿರೀಕ್ಷೆ.
● ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒದಗಿಸುವ 5000 ಕೋಟಿ ರೂಪಾಯಿಗಳ ವಾರ್ಷಿಕ ಹಂಚಿಕೆಗೆ ಪೂರಕವಾಗಿ ಮತ್ತು ಬೆಂಬಲಿಸಲು ವಿಶೇಷ ಪ್ಯಾಕೇಜ್ಅನ್ನು ಕೇಂದ್ರ ಬಜೆಟ್ನಲ್ಲಿ ನೀಡಬಹುದೆಂಬ ನಿರೀಕ್ಷೆ.
● ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 30,000 ಕೋಟಿ ವೆಚ್ಚದ 60 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿ ಈ ಯೋಜನೆಗೆ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಯೋಜನೆಗೆ ಕೇಂದ್ರದ ಅನುದಾನವನ್ನು ನೀಡಬಹುದೆಂಬ ನಿರೀಕ್ಷೆ.
● ಬೆಂಗಳೂರು ನಗರದಲ್ಲಿ ನೆರೆ ನಿಗ್ರಹ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್ ನಿಂದ 3,000 ಕೋಟಿ ರೂ. ಆರ್ಥಿಕ ನೆರವು ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರದ ನೆರವಿನ ನಿರೀಕ್ಷೆಯಿದೆ.
ಇದನ್ನೂ ಓದಿ- Budget 2025: ಇಷ್ಟು ಆದಾಯ ತೆರಿಗೆ ಮುಕ್ತ..! ನಿರ್ಮಲಾ ಸೀತಾರಾಮನ್'ರಿಂದ ತೆರಿಗೆದಾರರು, ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ..!
ಯೋಜನೆಗಳಿಗೆ ಅನುಮೋದನೆ ನಿರೀಕ್ಷೆ:
● ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 73 ಕಿಮೀ ಎಂಟು ಪಥದ PRR ಅನ್ನು PPP ಆಧಾರದ ಮೇಲೆ 27,000 ಕೋಟಿ ರೂ.ಗಳ ಪೆರಿಫೆರಲ್ ರಿಂಗ್ ರೋಡ್ (ಭೂಸ್ವಾಧೀನಕ್ಕೆ 21,000 ಕೋಟಿ ರೂ. ಮತ್ತು ಸಿವಿಲ್ ನಿರ್ಮಾಣ ವೆಚ್ಚಕ್ಕೆ 6,000 ಕೋಟಿ ರೂ.) ಅನುಮೋದನೆ ನೀಡುವ ನಿರೀಕ್ಷೆ.
● ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯರವರು ಮಾನ್ಯ ನರೇಂದ್ರ ಮೋದಿಯವರನ್ನು ಭೇಟಿಮಾಡಿ ಬೆಂಗಳೂರಿನ ಜನತೆಗೆ ನೀರುಣಿಸುವ ಮತ್ತು 400 MW ಸಾಮರ್ಥ್ಯದ ವಿದ್ಯುತ್ರಾ ಉತ್ಪಾದನೆ ಮಾಡುವ 9,000 ಕೋಟಿ ವೆಚ್ಚದ ಮೇಕೆದಾಟು ಸಮಾನಾಂತರ ಅಣೆಕಟ್ಟು ಯೋಜನೆಗೆ ಕೇಂದ್ರ ಜಲ ಆಯೋಗದಿಂದ ಮಂಜೂರಾತಿ ಮಾಡಲು ಕೋರಿದ್ದಾರೆ ಈ ಬಜೆಟ್ ನಲ್ಲಿ ಅನುಮತಿ ಪಡೆಯಲು ನಿರೀಕ್ಷೆ.
● ಕೇಂದ್ರ ನೀರಾವರಿ ಆಯೋಗ 3.9 TMC ಸಾಮರ್ಥ್ಯದ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿಗೆ ಅನುಮತಿ ನೀಡಿದ್ದು ರಾಜ್ಯ ಸರ್ಕಾರ ಟೆಂಡರ್ ಕರೆಯುವ ಪ್ರಕ್ರಿಯೆಯಲ್ಲಿದ್ದು ಕೇಂದ್ರ ಜಲವಿದ್ಯುತ್ ಸಚಿವಾಲಯ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಯೋಜನೆಗೆ ಹಸಿರು ನಿಶಾನೆ ತೋರಿಸಬೇಕೆಂಬ ನಿರೀಕ್ಷೆ.
● 2022ರಲ್ಲಿ ಕರ್ನಾಟಕದಲ್ಲಿ AIIMS ಸ್ಥಾಪನೆ ಮಾಡುವುದಾಗಿ ಹೇಳಲಾಗಿದೆ. ಆದರೆ ಇನ್ನೂ ಸ್ಥಾಪನೆಯಾಗಿಲ್ಲ. ಈ ಬಜೆಟ್ ನಲ್ಲಿ ಅನುದಾನ ನೀಡಬಹುದೆಂಬ ನಿರೀಕ್ಷೆ.
● ಗುಜರಾತ್ ನಲ್ಲಿರುವ ಗಿಫ್ಟ್ ಸಿಟಿ ಯಂತೆ ಬೆಂಗಳೂರಿನಲ್ಲಿ ಜಾಗತಿಕ ಹಣಕಾಸು ಮತ್ತು IT ಹಬ್ (Global Financial and IT hub) ಸೃಷ್ಟಿಸಲು Central Business District ಸ್ಥಾಪಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ಸಿಗಬಹುದೆಂಬ ನಿರೀಕ್ಷೇ.
● ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ವಲಯವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರವು ಮೈಸೂರು ಜಿಲ್ಲೆಯ ಕೋಚನಹಳ್ಳಿ, ಧಾರವಾಡ ಜಿಲ್ಲೆಯ ಕೋಟೂರು-ಬೇಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣಹೊಸಹಳ್ಳಿ ಮತ್ತು ತುಮಕೂರಿನ ವಸಂತನರಸಪುರದಲ್ಲಿ ಕೈಗಾರಿಕಾ ವಲಯಗಳನ್ನು ಉದ್ದೇಶಿಸಿದ್ದು, ಈ ಕೈಗಾರಿಕಾ ಪ್ರದೇಶಗಳಿಗೆ ಅವಶ್ಯವಿರುವ ಕೇಂದ್ರ ಸರ್ಕಾರದ ಅನುಮೋದನೆ ನೀಡಬಹುದೆಂಬ ನಿರೀಕ್ಷೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.