Flipkart Back to College Sale HP Laptop Deal: ಏಪ್ರಿಲ್ 20 ರಿಂದ ಫ್ಲಿಪ್ಕಾರ್ಟ್ನಲ್ಲಿ ಬ್ಯಾಕ್ ಟು ಕಾಲೇಜ್ ಸೇಲ್ ನಡೆಯುತ್ತಿದೆ, ಇದರಲ್ಲಿ ನಿಮಗೆ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗುತ್ತಿದೆ. ಈ ಸೆಲ್ ಮೂಲಕ, ನೀವು 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ HP ಹೋಮ್ ಎಡಿಶನ್ ಲ್ಯಾಪ್ಟಾಪ್ ಅನ್ನು ಖರೀದಿಸಬಹುದು. ಈ ಲ್ಯಾಪ್ಟಾಪ್ನ ಬೆಲೆ, ಅದರ ಮೇಲೆಲಭ್ಯವಿರುವ ಕೊಡುಗೆಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
HP ಲ್ಯಾಪ್ ಟಾಪ್ ಮೇಲೆ ಭಾರಿ ಡಿಸ್ಕೌಂಟ್
22,825 ರೂ. ಮಾರುಕಟ್ಟೆಯ ಬೆಲೆ ಹೊಂದಿರುವ HP APU Dual Core A6-9225 – 245 G7 Laptop ಅನ್ನು ನೀವು ಫ್ಲಿಪ್ ಕಾರ್ಟ್ ನ ಬ್ಯಾಂಕ್ ಟು ಕಾಲೇಜ್ ಸೆಲ್ ನಲ್ಲಿ ಶೇ.8 ರಷ್ಟು ರಿಯಾಯಿತಿ ಪಡೆದು, 20,900 ರೂ.ಗೆ ಖರೀದಿಸಬಹುದು. ಅಷ್ಟೇ ಅಲ್ಲ ಒಂದು ವೇಳೆ ಈ ಲ್ಯಾಪ್ ಟಾಪ್ ಅನ್ನು ನೀವು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ, ನೀವು ಹೆಚ್ಚುವರಿ 1500 ರೂ.ಗಳ ರಿಯಾಯಿತಿ ಪಡೆಯಬಹುದು. ತನ್ಮೂಲಕ ಈ ಲ್ಯಾಪ್ ಟಾಪ್ ಬೆಲೆ ರೂ.19,400 ಆಗಲಿದೆ. ಹೀಗಾಗಿ ಈ ಲ್ಯಾಪ್ ಟಾಪ್ ಅನ್ನು ನೀವು 20 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದು.
ಈ ಲ್ಯಾಪ್ ಟಾಪ್ ಜೊತೆಗೆ ನಿಮಗೆ ಯಾವುದೇ ಎಕ್ಸ್ ಚೇಂಜ್ ಆಫರ್ ನೀಡಲಾಗಿಲ್ಲ. ಆದರೆ, ಒಂದು ವರ್ಷದ ಆನ್ಲೈನ್ ವಾರಂಟಿ ಸಿಗಲಿದೆ.
ಇದನ್ನೂ ಓದಿ-Online Money Transfer:ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯೋದ್ರಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ?
ಈ ಲ್ಯಾಪ್ ಟಾಪ್ ವೈಶಿಷ್ಟ್ಯಗಳು
HP APU Dual Core A6-9225 – 245 G7 Laptop ನಲ್ಲಿ ನಿಮಗೆ 14 ಇಂಚಿನ HD LED ಬ್ಯಾಕ್ ಲಿಟ್ ಡಿಸ್ಪ್ಲೇ ಹಾಗೂ 1,366 x 768 ಪಿಕ್ಸಲ್ ರೆಸೊಲ್ಯೂಶನ್ ನೊಂದಿಗೆ ಸಿಗಲಿದೆ. ಈ ಲ್ಯಾಪ್ ಟಾಪ್ 4GB RAM ಹಾಗೂ 1 TB HDD ಸ್ಟೋರೇಜ್ ನೊಂದಿಗೆ ಬರಲಿದೆ. ಒಂದು ಬಾರಿ ಚಾರ್ಜ್ ಮಾಡಿ, ಇದನ್ನು ನೀವು ನಾಲ್ಕು ಗಂಟೆಗಳವರೆಗೆ ಬಳಸಬಹುದು. ಇದರಲ್ಲಿ ಆಪ್ಟಿಕಲ್ ಡಿಸ್ಕ್ ಡ್ರೈವ್ ನೀಡಲಾಗಿಲ್ಲ. ಆದರೂ ಕೂಡ 3 ಇನ್ 1 ಕಾರ್ಡ್ ರೀಡರ್, ಒಂದು HDMI ಪೋರ್ಟ್, ಬಿಲ್ಟ್ ಇನ್ ಡ್ಯುಯೆಲ್ ಸ್ಪೀಕರ್ ಹಾಗೂ ಮೈಕ್ರೋಫೋನ್ ಮತ್ತು ಹೆಚ್ ಡಿ ಟ್ರೂ ವಿಶನ್ HD ವೆಬ್ ಕ್ಯಾಮ್ ಗಳಂತಹ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ನೋಡಬಹುದು.
ಇದನ್ನೂ ಓದಿ-HDFC Bonds:ಹೂಡಿಕೆದಾರರಿಗೊಂದು ಅದ್ಭುತ ಸುವರ್ಣಾವಕಾಶ! ಜೀವನವಿಡೀ ಸಿಗಲಿದೆ ಬಂಪರ್ ರಿಟರ್ನ್
ಫ್ಲಿಪ್ಕಾರ್ಟ್ ನ ಈ ಸೆಲ್ ಮೂಲಕ ನೀವು ಇಂತಹ ಅನೇಕ ಕೊಡುಗೆಗಳ ಲಾಭವನ್ನು ಪಡೆಯಬಹುದು. ಏಪ್ರಿಲ್ 24 ಕ್ಕೆ ಈ ಸೆಲ್ ಅಂತ್ಯವಾಗಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.