Railway Reservation Ticket Online: ಹಲವು ಬಾರಿ ನಾವು ರೈಲು ನಿಲ್ದಾಣವನ್ನು ತಲುಪಲು ತಡವಾಗುತ್ತದೆ. ಈ ವೇಳೆ ನಾವು ರೈಲು ತಪ್ಪಿಸಿಕೊಳ್ಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಲಕ್ಷಾಂತರ ರೈಲು ಪ್ರಯಾಣಿಕರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ, ಐಆರ್‌ಸಿಟಿಸಿ ಅಪ್ಲಿಕೇಶನ್ ಅಥವಾ ಕೌಂಟರ್ ಮೂಲಕ ಬುಕ್ ಮಾಡಿದ Reservation ಟಿಕೆಟ್ ಅನ್ನು ರದ್ದುಗೊಳಿಸಬಹುದೇ ಅಥವಾ ಇಲ್ಲವೇ ಎಂಬುದು. ಅದೇ ರೀತಿ ಟಿಕೆಟ್ ರದ್ದುಗೊಳಿಸಿದ ನಂತರ ಎಷ್ಟು ಹಣ ವಾಪಸ್ ಆಗುತ್ತದೆ ಅನ್ನೋ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿರುತ್ತದೆ. ಐಆರ್‌ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಾವು ನಿಮಗೆ ತಿಳಿಸಲಿದ್ದೇವೆ. ರೈಲ್ವೆ ನಿಯಮಗಳ ಪ್ರಕಾರ, ರೈಲು ಹೊರಟ ನಂತರ ಟಿಕೆಟ್ ರದ್ದುಗೊಳಿಸಬಹುದೇ ಅಥವಾ ಇಲ್ಲವೇ? ಇದರ ಬಗ್ಗೆಯೂ ನಿಮಗೆ ಮಾಹಿತಿ ನೀಡಲಿದ್ದೇವೆ.
ರೈಲು ತಪ್ಪಿದ ನಂತರ ಟಿಕೆಟ್ ರದ್ದುಗೊಳಿಸುವುದು ಹೇಗೆ?
ರೈಲು ಹೊರಟ ನಂತರ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೆ ನಿಯಮಗಳ ಪ್ರಕಾರ, ನೀವು ಟಿಡಿಆರ್ ಅಂದರೆ ಮರುಪಾವತಿಗಾಗಿ ಟಿಕೆಟ್ ಬೇಡಿಕೆಯನ್ನು ಸಲ್ಲಿಸಬೇಕಾಗುತ್ತದೆ. ಇದಾದ ನಂತರ ನೀವು ರೈಲ್ವೆಯಿಂದ ನಿಮ್ಮ ಹಣವನ್ನು ಮರಳಿ ಪಡೆಯಬಹುದು.
ಇದನ್ನೂ ಓದಿ: ದೊಡ್ಡ ಶೋ ರೂಂನಲ್ಲಿ ಅಥವಾ ಸಣ್ಣ ಅಂಗಡಿಯಲ್ಲಿ.. ಚಿನ್ನವನ್ನು ಎಲ್ಲಿ ಖರೀದಿಸಬೇಕು? ಯಾವುದು ಉತ್ತಮ?
ಎಷ್ಟು ಸಮಯದವರೆಗೆ TDR ಸಲ್ಲಿಸಬಹುದು?
ರೈಲು ಹೊರಡುವ ನಿಗದಿತ ಸಮಯದಿಂದ 72 ಗಂಟೆಗಳ ಒಳಗೆ ಮಾತ್ರ ನೀವು ಟಿಡಿಆರ್ ಸಲ್ಲಿಸಬಹುದು. ಇದರ ನಂತರ ನೀವು TDR ಸಲ್ಲಿಸಲು ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಟಿಡಿಆರ್ ಸಲ್ಲಿಸಲು, ನೀವು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಳಸಬೇಕಾಗುತ್ತದೆ. ಅದೇ ರೀತಿ ಆಫ್‌ಲೈನ್‌ನಲ್ಲಿ ಟಿಡಿಆರ್ ಸಲ್ಲಿಸಲು, ನೀವು ಹತ್ತಿರದ ರೈಲ್ವೆ ಕಾಯ್ದಿರಿಸುವಿಕೆ ಕೇಂದ್ರವನ್ನು ಸಂಪರ್ಕಿಸಬೇಕಾಗುತ್ತದೆ.
ಟಿಡಿಆರ್ ಸಲ್ಲಿಸುವುದು ಹೇಗೆ?
* TDR ಸಲ್ಲಿಸಲು ನೀವು IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
* ಇದಾದ ನಂತರ ʼMy Transactionʼ ಹೋಗಿ ಮತ್ತು ʼBooked Ticket Historyʼಗೆ ಹೋಗಿ.
* ನೀವು TDR ಸಲ್ಲಿಸಲು ಬಯಸುವ ಟಿಕೆಟ್ ಅನ್ನು ಆಯ್ಕೆಮಾಡಿ.
* ಇದಾದ ನಂತರ, ಪರದೆಯ ಮೇಲೆ ನೀಡಲಾದ ಸೂಚನೆಗಳನ್ನು ಅನುಸರಿಸಿ ಮತ್ತು TDR ಅನ್ನು ಸಲ್ಲಿಸಿ.
* ಟಿಡಿಆರ್ ಸಲ್ಲಿಸಿದ 60 ದಿನಗಳ ಒಳಗೆ ನೀವು ರೈಲ್ವೆಯಿಂದ ಮರುಪಾವತಿ ಪಡೆಯಬಹುದು. ಆದರೆ ಇದು ನಿಮ್ಮ ಟಿಕೆಟ್ ರದ್ದುಗೊಳಿಸುವ ಕಾರಣವನ್ನು * ಅವಲಂಬಿಸಿರುತ್ತದೆ. ನೀವು ಕಾಲಕಾಲಕ್ಕೆ IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ TDR ಸ್ಥಿತಿಯನ್ನು ಪರಿಶೀಲಿಸುತ್ತಿರಬೇಕು.
ಇದನ್ನೂ ಓದಿ: ಒಂದೇ ದಿನದಲ್ಲಿ ಪಾತಾಳಕ್ಕಿಳಿದ ಚಿನ್ನದ ದರ ! ಭಾರೀ ಇಳಿಕೆ ಕಂಡ ಬಂಗಾರ- ಬೆಳ್ಳಿ! ಆಭರಣ ಖರೀದಿಸಲು ಬೆಸ್ಟ್ ಟೈಮ್
TDR ಸಲ್ಲಿಸಿದಾಗ ನನಗೆ ಎಷ್ಟು ಹಣ ವಾಪಸ್ ಸಿಗುತ್ತದೆ?
TDR ಸಲ್ಲಿಸಿದ ನಂತರ ನಿಮಗೆ ಮರುಪಾವತಿಯ ಹಣ ಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇದು ಸಂಪೂರ್ಣವಾಗಿ ಭಾರತೀಯ ರೈಲ್ವೆಯ ರದ್ದತಿ ನಿಯಮಗಳನ್ನು ಅವಲಂಬಿಸಿರುತ್ತದೆ. ಮರುಪಾವತಿ ಅನುಮೋದನೆಯ 60 ದಿನಗಳ ಒಳಗೆ, ನೀವು ಟಿಕೆಟ್ ಬುಕ್ ಮಾಡಿದ ಅದೇ ಖಾತೆಗೆ ಮರುಪಾವತಿಯನ್ನು ಸ್ವೀಕರಿಸುತ್ತೀರಿ. ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದವರು ಟಿಡಿಆರ್ ಪ್ರಕ್ರಿಯೆಗೊಂಡ ನಂತರ ಹತ್ತಿರದ ರೈಲ್ವೆ ಮೀಸಲಾತಿ ಕೇಂದ್ರಕ್ಕೆ ಭೇಟಿ ನೀಡಿ ಮರುಪಾವತಿ ಪಡೆಯಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.