ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ; ಶೇ.7ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ!!

Dearness Allowance: ಜಾರ್ಖಂಡ್ ಸರ್ಕಾರ ಮಂಗಳವಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ವಾಸ್ತವವಾಗಿ ಸರ್ಕಾರವು ನೌಕರರ ತುಟ್ಟಿ ಭತ್ಯೆ (DA)ಯಲ್ಲಿ ಶೇ.7ರಷ್ಟು ಹೆಚ್ಚಳವನ್ನು ಅನುಮೋದಿಸಿದೆ. ಸಿಎಂ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.

Written by - Puttaraj K Alur | Last Updated : Feb 18, 2025, 11:07 PM IST
  • ಜಾರ್ಖಂಡ್ ಸರ್ಕಾರವು ತನ್ನ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ
  • ಸರ್ಕಾರಿ ನೌಕರರಿಗೆ ಶೇ.7ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ
  • ಸಿಎಂ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ; ಶೇ.7ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ!! title=
ಶೇ.7ರಷ್ಟು ತುಟ್ಟಿ ಭತ್ಯೆ ಹೆಚ್ಚಳ

7% increase in dearness allowance: ಜಾರ್ಖಂಡ್ ಸರ್ಕಾರವು ಮಂಗಳವಾರ ತನ್ನ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೇ.7ರಷ್ಟು ತುಟ್ಟಿ ಭತ್ಯೆ (DA) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ಹೆಚ್ಚಳವು ಕಳೆದ ವರ್ಷ(೨೦೨೪) ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರನೇ ಕೇಂದ್ರ ವೇತನ ಆಯೋಗದಡಿಯಲ್ಲಿ, ನೌಕರರು ಪ್ರಸ್ತುತ ಮೂಲ ವೇತನದ ಶೇ.246ರಷ್ಟು ಡಿಎ ಪಡೆಯುತ್ತಾರೆ, ಇದು ಮೊದಲು ಶೇ.239ರಷ್ಟಿತ್ತು ಎಂದು ಅವರು ಹೇಳಿದರು. 

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. ಆರನೇ ವೇತನ ಆಯೋಗದಡಿಯಲ್ಲಿ ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿ ಪರಿಹಾರ (DR)ವನ್ನು ಸಹ ಏಳು ಪ್ರತಿಶತದಷ್ಟು ಹೆಚ್ಚಿಸಿ 246 ಪ್ರತಿಶತಕ್ಕೆ ತಲುಪಿಸಲಾಗಿದೆ. ಐದನೇ ವೇತನ ಆಯೋಗದ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರಿಗೆ ಡಿಎಯನ್ನು ಈಗಿರುವ ಶೇ.443 ರಿಂದ ಶೇ.455ಕ್ಕೆ ಹೆಚ್ಚಿಸಲಾಗಿದೆ, ಇದು ಜುಲೈ 1, 2024ರಿಂದ ಜಾರಿಗೆ ಬರುತ್ತದೆ ಎಂದು ಜಂಟಿ ಸಂಪುಟ ಕಾರ್ಯದರ್ಶಿ ರಾಜೀವ್ ರಂಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ದಿಢೀರನೆ 700% ಏರಿಕಯಾದ ಸ್ಟಾಕ್‌, 6 ರೂಪಾಯಿಯಲ್ಲಿದ್ದ ಶೇರು 444 ರೂಪಾಯಿಗೆ ಜಿಗಿತ! ಇದರಲ್ಲಿ ಇನ್ವೆಸ್ಟ್‌ ಮಾಡಿದ್ರೇ ಕೋಟ್ಯಾಧಿಪತಿಗಳಾಗೋದು ಪಕ್ಕಾ

ಜಾರ್ಖಂಡ್ ಸರ್ಕಾರದಿಂದ ಮಹತ್ವದ ನಿರ್ಧಾರ!

ಮತ್ತೊಂದೆಡೆ ಜಾರ್ಖಂಡ್ ಸರ್ಕಾರ ಸೋಮವಾರ ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 37 ಅಪರಾಧಿಗಳನ್ನು ಬಿಡುಗಡೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧ್ಯಕ್ಷತೆಯಲ್ಲಿ ಅವರ ವಸತಿ ಕಚೇರಿಯಲ್ಲಿ ನಡೆದ ಜಾರ್ಖಂಡ್ ರಾಜ್ಯ ಶಿಕ್ಷೆ ಪರಿಶೀಲನಾ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ರಾಜ್ಯದಾದ್ಯಂತ 103 ಪ್ರಕರಣಗಳನ್ನು ಪರಿಶೀಲಿಸಲಾಯಿತು, ಈ ಪೈಕಿ 37 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು. "ಜಾರ್ಖಂಡ್ ರಾಜ್ಯ ಶಿಕ್ಷೆ ಪರಿಶೀಲನಾ ಮಂಡಳಿಯ ಸಭೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 103 ಕೈದಿಗಳ ಬಿಡುಗಡೆಯ ಕುರಿತು ವಿವರವಾದ ಚರ್ಚೆಗಳು ನಡೆದವು. ಪರಿಶೀಲನೆಯ ನಂತರ 37 ಅಪರಾಧಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪೊಲೀಸರು ಹೇಳಿದ್ದೇನು?

ಈ ಕೈದಿಗಳ ಬಿಡುಗಡೆಯ ನಂತರ ಅವರ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದಲ್ಲದೆ ಈ ಅಪರಾಧಿಗಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಮತ್ತು ಸರ್ಕಾರ ನಡೆಸುವ ವಿವಿಧ ಕಲ್ಯಾಣ ಯೋಜನೆಗಳಿಗೆ ಅವರು ಸೇರುವುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆಯೂ ಅವರು ಒತ್ತಿ ಹೇಳಿದರು. ಬಿಡುಗಡೆಯಾದ ಕೈದಿಗಳಿಗೆ ಜೀವನೋಪಾಯದ ಮೂಲಗಳನ್ನು ಖಚಿತಪಡಿಸಿಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು, ಇದರಿಂದ ಅವರು ಸಮಾಜದಲ್ಲಿ ಮತ್ತೆ ಬೆರೆಯಲು ಮತ್ತು ಹೊಸ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Govt employees Holiday :ಫೆ.20ರಂದು ರಾಜ್ಯ ಸರ್ಕಾರಿ ನೌಕರರಿಗೆ ರಜೆ, ಕಾರಣ ಇಲ್ಲಿದೆ

ಎರಡು IEDಗಳು ವಶಕ್ಕೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸೋಮವಾರ ಭದ್ರತಾ ಪಡೆಗಳು ಎರಡು ಐಇಡಿಗಳನ್ನು ವಶಪಡಿಸಿಕೊಂಡಿವೆ. ನಂತರ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸುವ ಉದ್ದೇಶದಿಂದ ನಕ್ಸಲರು ಸ್ಫೋಟಕಗಳನ್ನು ಇಟ್ಟಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಗುವಾ ಮತ್ತು ರೋವಾಮ್ ರಸ್ತೆಯ ನಡುವಿನ ಅರಣ್ಯ ಬೆಟ್ಟಗಳಲ್ಲಿ ಈ ಸ್ಫೋಟಕಗಳು ಪತ್ತೆಯಾಗಿವೆ. ಬಾಂಬ್ ನಿಷ್ಕ್ರಿಯ ದಳವು ಐಇಡಿಯನ್ನು ಸುರಕ್ಷಿತವಾಗಿ ನಾಶಪಡಿಸಿತು ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News