Flipkart Monumental Sale: ಇ-ಕಾಮರ್ಸ್ ವಲಯದ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ರಿಪಬ್ಲಿಕ್ ಡೇ ಸೇಲ್ 2025ಅನ್ನು ಪ್ರಾರಂಭಿಸಲಿದೆ. ಈ ಸೇಲ್ ಅನ್ನು ಫ್ಲಿಪ್ ಕಾರ್ಟ್ ಮಾನುಮೆಂಟಲ್ ಸೇಲ್ (Monumental Sale) ಹೆಸರಿನಲ್ಲಿ ತರುತ್ತಿದೆ. ನಿಮಗಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಅಥವಾ ನಿಮ್ಮ ಮನೆಗೆ ಯಾವುದೇ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಬಯಸಿದರೆ, ನೀವು ದೊಡ್ಡ ರಿಯಾಯಿತಿ ಕೊಡುಗೆಗಳ ಲಾಭವನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ನೀವು ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Monumental Sale
ನಿಮ್ಮ ಮನೆಯಲ್ಲಿರುವ ಹಳೆಯ ಟಿವಿಯನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ, ಇಲ್ಲಿದೆ ಉತ್ತಮ ಅವಕಾಶ. ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಮಾನುಮೆಂಟಲ್ ಸೇಲ್‌ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಿದೆ. ಈ ಸೇಲ್‌ನಲ್ಲಿ ನೀವು ಕೇವಲ 7000 ರೂ.ಗೆ ಸ್ಮಾರ್ಟ್ ಟಿವಿ ಖರೀದಿಸಲು ಸಾಧ್ಯವಾಗುತ್ತದೆ.
32 ರಿಂದ 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭಾರೀ ಡಿಸ್ಕೌಂಟ್!
ಫ್ಲಿಪ್‌ಕಾರ್ಟ್ ಮಾನುಮೆಂಟಲ್ ಸೇಲ್‌ಮಲ್ಲಿ ನೀವು 32 ಇಂಚುಗಳಿಂದ 43 ಇಂಚುಗಳು ಮತ್ತು 55 ಇಂಚುಗಳವರೆಗಿನ ಸ್ಮಾರ್ಟ್ ಟಿವಿಗಳನ್ನು 50%ಕ್ಕಿಂತ ಹೆಚ್ಚಿನ ರಿಯಾಯಿತಿಯೊಂದಿಗೆ ಖರೀದಿಸಲು ಸಾಧ್ಯವಾಗುತ್ತದೆ. ವಿಶೇಷವೆಂದರೆ ಈ ಸೇಲ್‌ನಲ್ಲಿ ನೀವು Samsung, Xiaomi, Redmi, LG, Sony, Toshiba, OnePlusನಂತಹ ಬ್ರಾಂಡ್‌ಗಳ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಅಗ್ಗದ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
ಫ್ಲಿಪ್‌ಕಾರ್ಟ್ ಸೇಲ್ ಆಫರ್‌ನಲ್ಲಿ ನೀವು DSLR ಕ್ಯಾಮೆರಾವನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ನೀವು ಕೇವಲ 25,900 ರೂ.ಗೆ ಕ್ಯಾಮೆರಾವನ್ನು ಖರೀದಿಸಲು ಸಾಧ್ಯವಾಗುತ್ತದೆ. ಸೇಲ್ ಆಫರ್‌ನಲ್ಲಿ ಕೇವಲ 99 ರೂಪಾಯಿಗೆ ಲ್ಯಾಪ್‌ಟಾಪ್ ಆಕ್ಸೆಸರೀಸ್ ಖರೀದಿಸುವ ಅವಕಾಶವಿರುತ್ತದೆ. ನೀವು ಗೇಮರ್ ಆಗಿದ್ದರೆ ಮತ್ತು ಗೇಮಿಂಗ್ ಲ್ಯಾಪ್‌ಟಾಪ್ ಖರೀದಿಸಲು ಬಯಸಿದರೆ, ಕೇವಲ 45,990 ರೂಗಳಿಗೆ ಖರೀದಿಸಲು ಸಾಧ್ಯವಾಗುತ್ತದೆ. ಸಾಮಾನ್ಯ ಬಳಕೆಗಾಗಿ ನೀವು 10,990 ರೂ.ಗೆ ಲ್ಯಾಪ್‌ಟಾಪ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದು.
ಇದನ್ನೂ ಓದಿ: SBI Special FDಯಲ್ಲಿ ದುಡ್ಡು ಇಟ್ಟರೆ ದುಪ್ಪಟ್ಟು ಲಾಭ! ಇದೇ ಮಾರ್ಚ್ 31ರೊಳಗೆ ಮಾತ್ರ ಅವಕಾಶ!!
ಅಗ್ಗವಾಗಿ QLED ಸ್ಮಾರ್ಟ್ ಟಿವಿ ಖರೀದಿಸಿ
ಫ್ಲಿಪ್‌ಕಾರ್ಟ್ Monumental Saleನಲ್ಲಿ ಸ್ಮಾರ್ಟ್ ಟಿವಿಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಿರುತ್ತದೆ. ಈ ಮಾರಾಟದ ಕೊಡುಗೆಯಲ್ಲಿ ನೀವು ಕೇವಲ 15,999 ರೂ.ಗೆ QLED ಟಿವಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಫ್ಲಿಪ್‌ಕಾರ್ಟ್ ಈ ಸೇಲ್‌ನಲ್ಲಿ ಗ್ರಾಹಕರಿಗೆ ಕೇವಲ 7000 ರೂಪಾಯಿಗೆ ಸ್ಮಾರ್ಟ್ ಟಿವಿ ಖರೀದಿಸಲು ಉತ್ತಮ ಅವಕಾಶವನ್ನು ನೀಡಲಿದೆ. ಇದಲ್ಲದೆ ನೀವು ವಾಟರ್ ಪ್ಯೂರಿಫೈಯರ್ ಅನ್ನು ಖರೀದಿಸಲು ಬಯಸಿದರೆ, ಅದನ್ನು ಕೇವಲ 6999 ರೂ.ಗಳಿಗೆ ಖರೀದಿಸಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.