ನಿಜಕ್ಕೂ 5,000 ರೂ. ಬೆಲೆಯ ನೋಟುಗಳು ಬರಲಿವೆಯಾ? RBI ಹೇಳಿದ್ದೇನು?

5000 Rupees Note: 5,000 ರೂಪಾಯಿ ಮುಖ ಬೆಲೆಯ ನೋಟಿನ ಬಗ್ಗೆ ಕುತೂಹಲ ಮೂಡಲು ಸಕಾರಣವಿದೆ. ಹಿಂದೆ ಭಾರತದಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಇದ್ದುದರಿಂದ ಈಗ 5,000 ರೂಪಾಯಿ ಮುಖ ಬೆಲೆಯ ನೋಟುಗಳ ಬಗ್ಗೆ ಚರ್ಚೆಯಾಗುತ್ತಿದೆ. 

Written by - Yashaswini V | Last Updated : Jan 2, 2025, 10:50 AM IST
  • ಕೇಂದ್ರ ಸರ್ಕಾರ 2016ರಲ್ಲಿ 2,000 ರೂಪಾಯಿ ಮತ್ತು 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿತ್ತು.
  • ದೊಡ್ಡ ಮೌಲ್ಯದ ಮುಖ ಬೆಲೆಯುಳ್ಳ ನೋಟುಗಳಿಂದ ಅಕ್ರಮ ಹಣ ಸಂಗ್ರಹ, ಸಾಗಾಣೆಯಾಗುತ್ತದೆಂದು ಡಿಮಾನಿಟೈಸೇಶನ್ ಮಾಡಿತ್ತು.
  • ಆದರೀಗ 5,000 ರೂಪಾಯಿ ಮುಖ ಬೆಲೆಯ ನೋಟುಗಳು ಬರಲಿವೆ ಎನ್ನುವ ರೆಕ್ಕೆಪುಕ್ಕ ಇಲ್ಲದ ಸುದ್ದಿಗಳು ಹರಿದಾಡುತ್ತಿವೆ.
ನಿಜಕ್ಕೂ 5,000 ರೂ. ಬೆಲೆಯ ನೋಟುಗಳು ಬರಲಿವೆಯಾ? RBI ಹೇಳಿದ್ದೇನು?  title=

5000 Rupees Note: ಕೇಂದ್ರ ಸರ್ಕಾರ 2016ರಲ್ಲಿ 2,000 ರೂಪಾಯಿ ಮತ್ತು 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. ದೊಡ್ಡ ಮೌಲ್ಯದ ಮುಖ ಬೆಲೆಯುಳ್ಳ ನೋಟುಗಳಿಂದ ಅಕ್ರಮ ಹಣ ಸಂಗ್ರಹ, ಸಾಗಾಣೆಯಾಗುತ್ತೆ ಎನ್ನುವ ಕಾರಣಕ್ಕೆ ಡಿಮಾನಿಟೈಸೇಶನ್ ಮಾಡಲಾಗಿತ್ತು. ಆದರೀಗ 5,000 ರೂಪಾಯಿ ಮುಖ ಬೆಲೆಯ ನೋಟುಗಳು ಬರಲಿವೆ ಎನ್ನುವ ರೆಕ್ಕೆಪುಕ್ಕ ಇಲ್ಲದ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ  ಆರ್‌ಬಿ‌ಐ ಸ್ಪಷ್ಟಿಕರಣ ನೀಡಿದೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಟೆಲಿಗ್ರಾಮ್ ಮತ್ತಿತರ ವೇದಿಕೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5,000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಪರಿಚಯಿಸಲಿದೆ ಎನ್ನುವ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತಿತ್ತು. ಸಹಜವಾಗಿ ಇದು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿತ್ತು. ಅದರಿಂದ 5,000 ರೂಪಾಯಿ ಮುಖ ಬೆಲೆಯ ನೋಟುಗಳು ಬರಲಿವೆಯಾ ಎಂಬ ಬಗ್ಗೆ  ಆರ್‌ಬಿ‌ಐ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ- Income Tax ಕಟ್ಟಿದ್ರೂ ಬೀಳುತ್ತೆ ದಂಡ, ರೀಫಂಡ್ ಕೂಡ ವಾಪಸ್ ಹೋಗಬಹುದು, ಯಾಕ್ ಗೊತ್ತಾ...?

ಜನಕ್ಕೆ 5,000 ರೂಪಾಯಿ ಮುಖ ಬೆಲೆಯ ನೋಟಿನ ಬಗ್ಗೆ ತೀವ್ರವಾದ ಕುತೂಹಲ ಮೂಡುವುದಕ್ಕೂ ಸಕಾರಣವಿದೆ. 1954ರಲ್ಲಿಯೇ ಭಾರತದಲ್ಲಿ 1,000, 5,000 ಮತ್ತು 10,000 ಮುಖಬೆಲೆಯ ನೋಟುಗಳಿದ್ದವು. 1978ರಲ್ಲಿ ಅವುಗಳನ್ನು ರದ್ದು ಮಾಡಲಾಗಿತ್ತು. ಇದಾದ ಮೇಲೆ 2016ರಲ್ಲಿ 2,000 ರೂಪಾಯಿ ಮತ್ತು 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಾಗಿತ್ತು. ಹಿಂದೆ ಇದ್ದ ಕಾರಣಕ್ಕೆ ಮತ್ತೆ 5,000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಬಹುದು ಎನ್ನುವ ಚರ್ಚೆಗಳು ನಡೆಯುತ್ತಿದ್ದವು. 

ಇದನ್ನೂ ಓದಿ- Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ..! ಅಪ್ಪಿತಪ್ಪಿ ಈ ವಹಿವಾಟು ನಡೆಸಿದ್ರೂ  ಐ‌ಟಿ ನೊಟೀಸ್ ಬರೋದು ಗ್ಯಾರಂಟಿ..! 

ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಫಷ್ಟನೇ ನೀಡಿದ್ದು, ಸದ್ಯ ದೇಶದಲ್ಲಿರುವ ಕರೆನ್ಸಿ ವ್ಯವಸ್ಥೆ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಮರ್ಥವಾಗಿದೆ. ದೊಡ್ಡ ಮೌಲ್ಯದ ಮುಖ ಬೆಲೆಯುಳ್ಳ ನೋಟುಗಳ ಅವಶ್ಯಕತೆ ಕಂಡುಬರುತ್ತಿಲ್ಲ. ಆದುದರಿಂದ ಇಂಥ ಊಹಾಪೋಹದ ವರದಿಗಳನ್ನು ಮತ್ತು ವದಂತಿಗಳನ್ನು ನಂಬಬಾರದು ಎಂದು ಹೇಳಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News