ಈ ರೀತಿ ಬುಕ್ ಮಾಡಿದರೆ ಅಗ್ಗದ ದರದಲ್ಲಿ ಸಿಗುವುದು ಫ್ಲೈಟ್ ಟಿಕೆಟ್ ! ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಹಣ ಉಳಿಸುವ ಈ ಪ್ಲಾನ್ !

Flight Ticket Booking Tips: ವಿಮಾನ ಟಿಕೆಟ್ ಬುಕ್ ಮಾಡುವಾಗ ಈ ವಿಚಾರ‌ಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಅತೀ ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್ ಬುಕ್ ಆಗುತ್ತದೆ. 

Written by - Ranjitha R K | Last Updated : Nov 29, 2024, 02:00 PM IST
  • ಅಗ್ಗವಾಗಿ ಟಿಕೆಟ್ ಕಾಯ್ದಿರಿಸಲು ಎರಡು ಅತ್ಯಂತ ಪರಿಣಾಮಕಾರಿ ಮಾರ್ಗಗಳು
  • ಎಷ್ಟು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವುದು ಸರಿ
  • ಯಾವ ದಿನದಂದು ಅಗ್ಗದ ವಿಮಾನ ಟಿಕೆಟ್ ಲಭ್ಯವಿದೆ?
ಈ ರೀತಿ ಬುಕ್ ಮಾಡಿದರೆ ಅಗ್ಗದ ದರದಲ್ಲಿ ಸಿಗುವುದು ಫ್ಲೈಟ್ ಟಿಕೆಟ್ ! ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಹಣ ಉಳಿಸುವ ಈ ಪ್ಲಾನ್ !  title=

Flight Ticket Booking Tips : ವಿಮಾನ ಯಾನ ಎನ್ನುವುದು ದುಬಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ವಾರದ ಒಂದು ದಿನ ಟಿಕೆಟ್ ಬುಕ್ ಮಾಡಿದರೆ ಅಗ್ಗದ ದರದಲ್ಲಿ ವಿಮಾನಯಾನ ಮಾಡುವುದು ಸಾಧ್ಯವಾಗುತ್ತದೆ. ವಿಮಾನ ಟಿಕೆಟ್ ಬುಕ್ ಮಾಡುವಾಗ ಈ ವಿಚಾರ‌ಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಅತೀ ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್ ಬುಕ್ ಆಗುತ್ತದೆ.  

ಅಗ್ಗವಾಗಿ ಟಿಕೆಟ್ ಕಾಯ್ದಿರಿಸಲು ಎರಡು ಅತ್ಯಂತ ಪರಿಣಾಮಕಾರಿ ಮಾರ್ಗಗಳು : 
ಅಗ್ಗವಾಗಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಎರಡು ವಿಧಾನಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೊದಲಿಗೆ, Fare Comparison Tools ಬಳಸಿಕೊಂಡು ವಿವಿಧ ವೆಬ್‌ಸೈಟ್‌ಗಳಲ್ಲಿನ ಬೆಲೆಗಳನ್ನು ಹೋಲಿಕೆ ಮಾಡಿನೋಡಬಹುದು. ಎರಡನೆಯದಾಗಿ, ರಿವಾರ್ಡ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸುವ ಮೂಲಕ ಪಾಯಿಂಟ್ ಗಳಿಸಿ ಈ ಪಾಯಿಂಟ್ ಗಳನ್ನು ಟಿಕೆಟ್ ಬುಕ್ ಮಾಡುವಲ್ಲಿ ಬಳಸಿ. ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಹಣವನ್ನು ಉಳಿಸಲು ಬಯಸುವುದಾದರೆ ಟಿಕೆಟ್ ದರದಲ್ಲಿನ ಬದಲಾವಣೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕು. ಸಾಮಾನ್ಯ ನಿಯಮದಂತೆ, ಪ್ರಯಾಣ ದಿನಕ್ಕಿಂತ 28 ದಿನಗಳ ಮೊದಲು ದೇಶೀಯ ವಿಮಾನಗಳಿಗೆ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಅತ್ಯಂತ  ಅಗ್ಗವಾಗಿ ಪರಿಣಮಿಸುತ್ತದೆ. 

ಇದನ್ನೂ ಓದಿ : ಎಟಿಎಂ ಮೂಲಕವೇ ಪಿಎಫ್ ಹಣ ಹಿಂಪಡೆಯುವ ಅವಕಾಶ !ಪಿಂಚಣಿಯಲ್ಲಿಯೂ ಹೆಚ್ಚಳ !ವೇತನ ವರ್ಗಕ್ಕೆ ಭರ್ಜರಿ ಉಡುಗೊರೆ ನೀಡಲು ಸರ್ಕಾರ ಸಿದ್ಧತೆ 

ಎಷ್ಟು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವುದು ಸರಿ? : 
ಎಷ್ಟು ಬೇಗ ಟಿಕೆಟ್ ಬುಕ್ ಮಾಡುತ್ತೀರೋ ಅಷ್ಟು ಅಗ್ಗವಾಗಿ ನಿಮಗೆ ಟಿಕೆಟ್ ಸಿಗುತ್ತದೆ. ಆದರೆ ಎಲ್ಲಾ ಕಾಲದಲ್ಲಿಯೂ ಹೀಗೆ ಆಗುತ್ತದೆ ಎಂದರೆ ತಪ್ಪು. ತುಂಬಾ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದರೂ ಹೆಚ್ಚುಹನ ಪಾವತಿಸಬೇಕಾಗಬಹುದು. ಕೊನೆಯ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸಿದರೆ, ದುಪ್ಪಟ್ಟು ದರ ನೀಡಬೇಕಾಗಬಹುದು.ಬೇರೆ ದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ, 60 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿ.

ಯಾವ ದಿನದಂದು ಅಗ್ಗದ ವಿಮಾನ ಟಿಕೆಟ್ ಲಭ್ಯವಿದೆ? :
ವಿಮಾನ ಟಿಕೆಟ್‌ಗಳು ಯಾವಾಗ ಅಗ್ಗದ ದರದಲ್ಲಿ ಲಭ್ಯವಿರುತ್ತವೆ? ಎಂದು ನೋಡುವುದಾದರೆ ಇದಕ್ಕೆ ಇಂಥದ್ದೇ ಎನ್ನುವ ಸ್ಥಿರ ನಿಯಮವಿಲ್ಲ. ಆದರೆ ಪ್ರಯಾಣಿಕರ ಹಲವು ವರದಿಗಳು ಮತ್ತು ಅನುಭವದ ಆಧಾರದ ಮೇಲೆ ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ವಿಮಾನ ಟಿಕೆಟ್‌ಗಳು ಅಗ್ಗವಾಗಿರುತ್ತವೆ ಎಂದು ಹೇಳಬಹುದು. ದೇಶೀಯ ಅಥವಾ ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಈ ದಿನಗಳಲ್ಲಿ ಟಿಕೆಟ್ ದರಗಳು ಇತರ ದಿನಗಳಿಗಿಂತ ಕಡಿಮೆಯಾಗಿರುತ್ತದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರದ ಪ್ರಯಾಣಕ್ಕೆ ಹೆಚ್ಚು ಹಣ ತೆರಬೇಕಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಈ ಸಮಯದಲ್ಲಿ ವಿಮಾನ ಟಿಕೆಟ್‌ಗಳು :
ಸಾಮಾನ್ಯವಾಗಿ ಜನವರಿ, ಫೆಬ್ರವರಿ-ಮಾರ್ಚ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿವಿಮಾನಯಾನ ದುಬಾರಿ. ಈ ತಿಂಗಳುಗಳಲ್ಲಿ, ಹೊಸ ವರ್ಷ, ಹೋಳಿ, ದೀಪಾವಳಿಯಂತಹ ಹಬ್ಬಗಳು ಬರುತ್ತವೆ. ಇದರಿಂದಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹಾಗಾಗಿ ಟಿಕೆಟ್ ದರ ಕೂಡಾ ಹೆಚ್ಚಾಗಿರುತ್ತದೆ. ಈ ತಿಂಗಳುಗಳಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ನೀವು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ದರ ಹೋಲಿಕೆ ಪರಿಕರಗಳ ಸಹಾಯದಿಂದ ವಿವಿಧ ವೆಬ್‌ಸೈಟ್‌ಗಳಲ್ಲಿನ ಬೆಲೆಗಳನ್ನು ಹೋಲಿಸುವ ಮೂಲಕ ನೀವು ಅಗ್ಗದ ಟಿಕೆಟ್ ಅನ್ನು ಕಂಡುಹಿಡಿಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News