8th Pay Commission: ಮುಂದಿನ ಬಜೆಟ್‌ನಲ್ಲಿ 8ನೇ ವೇತನ ಆಯೋಗ ಘೋಷಣೆ..! ಮೂಲ ವೇತನದಲ್ಲಿ ಭಾರೀ ಹೆಚ್ಚಳ ಸಾಧ್ಯತೆ!

8th Pay Commission News: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ತೆರಿಗೆ ವಿನಾಯಿತಿ, ಬೆಲೆಏರಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಅಪಾರವಾದ ನಿರೀಕ್ಷೆಗಳಿವೆ. ಅದೇ ರೀತಿ ಈ ಸಲವಾದರೂ 8ನೇ ವೇತನ ಆಯೋಗವನ್ನು ರಚಿಸಬಹುದು ಎಂಬ ನಿರೀಕ್ಷೆ ಕೇಂದ್ರ ಸರ್ಕಾರಿ ನೌಕರರಲ್ಲಿ ಇದೆ. 

Written by - Yashaswini V | Last Updated : Jan 8, 2025, 06:52 AM IST
  • 2024ರ ಡಿಸಂಬರ್ 12ರಂದು ಕೇಂದ್ರ ನೌಕರರ ಒಕ್ಕೂಟವು 8ನೇ ವೇತನ ಆಯೋಗವನ್ನು ರಚಿಸುವಂತೆ ಒತ್ತಾಯಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದೆ.
  • ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತದಂತಹ ಪರಿಸ್ಥಿತಿಯಲ್ಲಿ ನೌಕರರ ಹಿತದೃಷ್ಟಿಯಿಂದ 8ನೇ ವೇತನ ಆಯೋಗದ ರಚನೆ ಅನಿವಾರ್ಯ ಎಂದು ಪತ್ರದಲ್ಲಿ ಹೇಳಿದೆ.
  • ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಜನವರಿ 6ರಂದು ಕಾರ್ಮಿಕ ಸಂಘಗಳ ಜೊತೆ ನಡೆಸಿದ ಸಭೆಯಲ್ಲೂ 8ನೇ ವೇತನ ಆಯೋಗ ರಚನೆಗೆ ಒತ್ತಾಯಿಸಲಾಗಿತ್ತು.
8th Pay Commission: ಮುಂದಿನ ಬಜೆಟ್‌ನಲ್ಲಿ 8ನೇ ವೇತನ ಆಯೋಗ ಘೋಷಣೆ..! ಮೂಲ ವೇತನದಲ್ಲಿ ಭಾರೀ ಹೆಚ್ಚಳ ಸಾಧ್ಯತೆ! title=

8th Pay Commission News: 2025ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಹಲವಾರು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಅದರಲ್ಲಿ 8ನೇ ವೇತನ ಆಯೋಗವನ್ನು ರಚಿಸಬೇಕೆಂಬ ಬಹು ದಿನಗಳ ನೌಕರರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸುತ್ತಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಕಳೆದ ಬಜೆಟ್ ವೇಳೆಯೂ 8ನೇ ವೇತನ ಆಯೋಗವನ್ನು ರಚಿಸಬೇಕು ಎನ್ನುವ ಒತ್ತಡ ತೀವ್ರವಾಗಿ ಕೇಳಿಬಂದಿತ್ತು. 

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ತೆರಿಗೆ ವಿನಾಯಿತಿ, ಬೆಲೆಏರಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಅಪಾರವಾದ ನಿರೀಕ್ಷೆಗಳಿವೆ. ಅದೇ ರೀತಿ ಈ ಸಲವಾದರೂ 8ನೇ ವೇತನ ಆಯೋಗವನ್ನು ರಚಿಸಬಹದು. ಆ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಬಹುದು ಎನ್ನುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ- ಮಹಿಳೆಯರಿಗೆ ಗುಡ್ ನ್ಯೂಸ್: ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ, ಈಗಲೇ ಖಾತೆ ಪರಿಶೀಲಿಸಿ

2024ರ ಡಿಸಂಬರ್ 12ರಂದು ಕೇಂದ್ರ ನೌಕರರ ಒಕ್ಕೂಟವು 8ನೇ ವೇತನ ಆಯೋಗವನ್ನು ರಚಿಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಹಣದುಬ್ಬರ ದರ ನಿರಂತರವಾಗಿ ಏರಿಕೆಯಾಗುತ್ತಿರುವುದು, ರೂಪಾಯಿ ಮೌಲ್ಯ ಕುಸಿಯುತ್ತಿರುವಂತಹ ಪರಿಸ್ಥಿತಿಯಲ್ಲಿ ನೌಕರರ ಹಿತದೃಷ್ಟಿಯಿಂದ 8ನೇ ವೇತನ ಆಯೋಗದ ರಚನೆ ಅನಿವಾರ್ಯ ಎಂದು ಪತ್ರದಲ್ಲಿ ಹೇಳಲಾಗಿತ್ತು. ಇದಲ್ಲದ ಬಜೆಟ್ ಸಿದ್ದತೆಯಲ್ಲಿ ತೊಡಗಿರುವ ನಿರ್ಮಲಾ ಸೀತಾರಾಮನ್ ಇದೇ ಜನವರಿ 6ರಂದು ಕಾರ್ಮಿಕ ಸಂಘಗಳ ಜೊತೆ ನಡೆಸಿದ ಸಭೆಯಲ್ಲೂ 8ನೇ ವೇತನ ಆಯೋಗ ರಚನೆಗೆ ಒತ್ತಾಯಿಸಲಾಗಿತ್ತು.

ನಿರಾಕರಿಸುತ್ತಲೇ ಬಂದಿರುವ ಕೇಂದ್ರ  ಸರ್ಕಾರ: 
ನೌಕರರ ಸಂಘಗಳು ನಿರಂತರವಾಗಿ ಒತ್ತಡ ತರುತ್ತಿದ್ದರೂ ಈ ವಿಚಾರವನ್ನು ಕೇಂದ್ರ ಸರಕಾರ ನಿರಾಕರಿಸುತ್ತಲೇ ಬಂದಿದೆ. 2024ರ ಡಿಸಂಬರ್ 3ರಂದು ರಾಜ್ಯಸಭೆಯಲ್ಲಿ ಹಣಕಾಸು ಸಚಿವಾಲಯವು ಈಗ 8ನೇ ವೇತನ ಆಯೋಗ ರಚಿಸುವ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇಲ್ಲ ಎಂದು ಹೇಳಿತ್ತು. ನಂತರ ನರೇಂದ್ರ ಮೋದಿಯವರು ನೌಕರರ ಪತ್ರಕ್ಕೆ ಪ್ರತಿಕ್ರಿಯೆ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇಷ್ಟೆಲ್ಲದರ ನಡುವೆಯೂ ಮೋದಿ ಸರ್ಕಾರ ಈ ಬಾರಿ ಕೇಂದ್ರ ಸರ್ಕಾರಿ ನೌಕರರ ಮನವಿಗೆ ಮನ್ನಣೆ ನೀಡಲಿದೆ. 8ನೇ ವೇತನ ಆಯೋಗ ರಚನೆ ಆಗಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಹೊಸ ವರ್ಷದ ಗುಡ್ ನ್ಯೂಸ್ !ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ !ಪ್ರತಿ ವರ್ಷವೂ ಆಗುವುದು ಸ್ಯಾಲರಿ ರಿವೈಸ್

8ನೇ ಆಯೋಗ ರಚನೆಯಾದರೆ ಏನು ಲಾಭ?
ಸದ್ಯದ ಮಾಹಿತಿಗಳ ಪ್ರಕಾರ 8ನೇ ವೇತನ ಆಯೋಗವನ್ನು ರಚಿಸಿ ಅದರ ಶಿಫಾರಸುಗಳಿಗೆ ಅನುಗುಣವಾಗಿ ಸಂಬಳ ನಿಗದಿ ಮಾಡಿದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಬದಲಾವಣೆಯಾಗಲಿದೆ. ಫಿಟ್‌ಮೆಂಟ್ ಅಂಶ 2.86ಕ್ಕೆ ಅನುಮೋದನೆ ನೀಡಿದರೆ ನೌಕರರ ಕನಿಷ್ಠ ವೇತನ 18,000 ರೂಪಾಯಿಗಳಿಂದ 51,480 ರೂಪಾಯಿವರೆಗೆ ಹೆಚ್ಚಳ ಆಗಲಿದೆ. ಶೇಕಡಾವಾರು ಲೆಕ್ಕಹಾಕಿದರೆ 186% ಆಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News